Advertisement
ಘಾಟಿ ಪ್ರದೇಶದಲ್ಲಿ ಗುರುವಾರದಿಂದ ಭಾರೀ ಮಳೆಯಾಗುತ್ತಿದ್ದು, ಸಿರಿಬಾಗಿಲು ಬಳಿ ಹಳಿಗಳ ಮೇಲೆ ಮೇಲಿನ ಪ್ರದೇಶದಿಂದ ಕಲ್ಲು ಮಣ್ಣು ಬೀಳುತ್ತಿವೆ. ಮಣಿಬಂಡ ಎಂಬಲ್ಲಿ ಭಾರೀ ಗಾತ್ರದ ಬಂಡೆಯೊಂದು ಹಳಿಗಳ ಮೇಲೆ ಉರುಳಿ ಬೀಳುವ ಅಪಾಯವಿದ್ದು, ಇದನ್ನು ತೆರವುಗೊಳಿಸುವ ಕಾರ್ಯಾಚರಣೆ ರೈಲ್ವೇ ಸಿಬಂದಿಯಿಂದ ನಡೆಯುತ್ತಿದೆ. ಹೀಗಾಗಿ ಪ್ರಯಾಣಿಕರ ಸುರಕ್ಷೆ ದೃಷ್ಟಿಯಿಂದ ಶನಿವಾರ ಮತ್ತು ರವಿವಾರ ಈ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಇಲಾಖೆಯ ಪ್ರಕಟನೆ ತಿಳಿಸಿದೆ.
ಸಂತೋಷ್ ಕುಮಾರ್, ರಾಥೋಡ್ ಮಾರ್ಗದರ್ಶನ ನೀಡುತ್ತಿದ್ದಾರೆ.
Related Articles
ರೈಲು ನಂ.16511/16513 ಕೆಎಸ್‌ಆರ್ ಬೆಂಗಳೂರು-ಕಣ್ಣೂರು/ಕಾರವಾರ ಎಕ್ಸ್‌ಪ್ರೆಸ್ ಸಂಚಾರವನ್ನು ಶನಿವಾರ ಜೋಲಾರ್‌ಪೇಟೆ, ಸೇಲಂ, ಪಾಲ್ಗಾಟ್, ಶೋರ್ನೂರು ಜಂಕ್ಷನ್ ಮೂಲಕ ಮತ್ತು ರೈಲು ನಂ.16518/16524 ಕಣ್ಣೂರು/ ಕಾರವಾರ- ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್‌ನ ಸಂಚಾರವನ್ನು ಶೋರ್ನೂರು ಜಂಕ್ಷನ್, ಪಾಲಾ^ಟ್, ಸೇಲಂ, ಜೋಲಾರ್‌ಪೇಟೆ ಮಾರ್ಗದ ಮೂಲಕ ಬದಲಾಯಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
Advertisement
ಉದಯವಾಣಿ ಎಚ್ಚರಿಸಿತ್ತುಮಂಗಳೂರು-ಬೆಂಗಳೂರು ರೈಲು ಮಾರ್ಗದಲ್ಲಿ ಸಿರಿಬಾಗಿಲು ಸಮೀಪ ಹಳಿಗೆ ಬೃಹತ್ ಬಂಡೆ ಉರುಳಿ ಬೀಳುವ ಅಪಾಯವಿದೆ ಎಂಬುದಾಗಿ ಜು. 19ರಂದು “ಹಳಿಗೆ ಉರುಳಲು ಸಿದ್ಧವಾಗಿದೆ ಬಂಡೆ!’ ಎಂಬ ಶೀರ್ಷಿಕೆಯ ವರದಿ ಮೂಲಕ ಉದಯವಾಣಿ ಗಮನ ಸೆಳೆದಿತ್ತು.