Advertisement
ಸುರಂಗ ಮಾರ್ಗ ಬೇಕುಶಿರಾಡಿ ಘಾಟ್ ರಸ್ತೆಯಲ್ಲಿ ಸುರಂಗ ಮಾರ್ಗ ನಿರ್ಮಿಸುವುದರಿಂದ ಅನೇಕ ಪ್ರಯೋಜನಗಳಿದ್ದು, ಸಮಯದ ಉಳಿತಾಯ, ಚಾಲಕನಿಗೆ ಕಡಿಮೆ ಶ್ರಮ, ಇಂಧನ ಉಳಿತಾಯ, ಅನಾವಶ್ಯಕ ಗಿಡ ಮರಗಳ ನಾಶ, ಕಡಿಮೆ ಪ್ರಮೇಯದ ರಸ್ತೆ ಅಪಘಾತ, ರಸ್ತೆ ಹದಗೆಡುವುದು ನಿಲ್ಲುತ್ತದೆ. ಆದ್ದರಿಂದ ಸುರಂಗ ಮಾರ್ಗ ಶಾಶ್ವತ ಪರಿಹಾರ.
-ಸದಾಶಿವ
ಗೂಡ್ಸ್ ರೈಲು ವ್ಯವಸ್ಥೆ ಮಾಡಲಿ
ಗೂಡ್ಸ್ ವಾಹನಗಳಿಗೆ ಪರ್ಯಾಯವಾಗಿ ಗೂಡ್ಸ್ ರೈಲು ವ್ಯವಸ್ಥೆ ಮಾಡಲಿ. ಮಾರನಹಳ್ಳಿಯಿಂದ ಸಕಲೇಶಪುರ ವರೆಗಿನ ರಸ್ತೆ ಸರಿಪಡಿಸಿ, ಶಿರಾಡಿ ಘಾಟ್‌ನ ಪ್ರಕೃತಿಗೆ ಕೈ ಹಾಕುವುದು ಬೇಡ. ದಯಮಾಡಿ ಸರಕಾರ ಪ್ರಕೃತಿ ಸಂರಕ್ಷಣೆಗೆ ಗಮನ ಹರಿಸಲಿ.
-ಸಂತೋಷ ಕುಮಾರ್ (ಸಿಎನ್)
ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆದರೂ ಅದರ ನೇರ ಪರಿಣಾಮ ನಿಸರ್ಗದ ಮೇಲೆ ಬೀಳುತ್ತದೆ. ಜೀವ ವೈವಿಧ್ಯ ಇರುವ ಮಳೆ ಕಾಡುಗಳು ಕ್ಷೀಣಿಸಿ ಪ್ರಕೃತಿ ಸಮತೋಲನ ಕಳೆದುಕೊಳ್ಳುತ್ತದೆ. ಎತ್ತಿನ ಹೊಳೆ ಯೋಜನೆಯ ಪರಿಣಾಮ ಆನೆಗಳ ವಾಸ ಸ್ಥಳ ಬದಲಾವಣೆಗೊಂಡು ಇದೀಗ ಪಶ್ಚಿಮ ಘಟ್ಟದ ಕೆಳ ಭಾಗಗಳಾದ ಶಿರಾಡಿ, ಶಿರಿಬಾಗಿಲು, ಕೊಣಾಜೆ, ಕೊಂಬಾರು, ರೆಖ್ಯ, ಶಿಬಾಜೆ ಗ್ರಾಮಗಳು ಆನೆಗಳ ಕೃಷಿ ದಾಳಿಯಿಂದ ತತ್ತರಿಸಿ ಹೋಗುತ್ತಿವೆೆ.
-ಶಿವಕುಮಾರ ಕೆ.ಎಸ್. ಟ್ಯಾಂಕರ್‌ಗಳನ್ನು ಪ್ರತ್ಯೇಕಿಸಿ
ತಿರುವುಗಳ ಸಂಖ್ಯೆ ಜಾಸ್ತಿಯಾದಾಗ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ದೊಡ್ಡ ದೊಡ್ಡ ಟ್ಯಾಂಕರ್‌ಗಳಿಗೆ ಪ್ರತ್ಯೇಕ ರಸ್ತೆ ಮಾಡಿ, ಬೇರೆ ಎಲ್ಲಾ ಘನ ವಾಹನಗಳು ಸುರಂಗದಿಂದ ಸಂಚರಿಸಿದರೆ ಯಾವುದೇ ಸಮಸ್ಯೆ ಉಂಟಾಗದು.
-ಪ್ರವೀಣ್ ಶೆಟ್ಟಿ
Related Articles
ಈ ರಸ್ತೆ ಮೊದಲೇ ಅಲ್ಲಿನ ಪರಿಸರಕ್ಕೆ ಮಾರಕ. ಇದನ್ನು ಚತುಷ್ಪಥ ಮಾಡುವುದು ಹಾಗೂ ಸುರಂಗ ತೋಡುವುದು ಇನ್ನೂ ಮಾರಕ. ಇದ್ದ ರಸ್ತೆಯನ್ನು ರಿಪೇರಿ ಮಾಡಿ ನಿರ್ವಹಣೆ ಮಾಡಿದರೆ ಸಾಕು. ಸುರಂಗ ಮಾರ್ಗದಿಂದ ಜಲಮೂಲಗಳು ಬತ್ತಿಹೋಗುತ್ತವೆ. ಲಕ್ಷಾಂತರ ಜೀವಜಂತುಗಳಿಗೆ ಹಾನಿಯಾಗುತ್ತದೆ. ರಸ್ತೆಯ ಹೆಸರಿನಲ್ಲಿ ಪ್ರಕೃತಿಯ ಮಾರಣಹೋಮ ಒಳ್ಳೆಯದಲ್ಲ.
-ಸಂಪತ್ ಕುಮಾರ್
Advertisement
ಚತುಷ್ಪಥ ಮಾರ್ಗ ಸೂಕ್ತಪ್ರಕೃತಿಯ ಸೌಂದರ್ಯ ಮೈವೆತ್ತು ನಿಂತಿರುವ ರಸ್ತೆ ಶಿರಾಡಿ ಘಾಟ್.ಆ ಅಂದವನ್ನು ತುಂಬಿಕೊಳ್ಳಲು ಎರಡು ಕಣ್ಣುಗಳೂ ಸಾಲದು, ಸುರಂಗ ಮಾರ್ಗ ತೋಡಿದರೆ ಪ್ರಕೃತಿಯ ಮಡಿಲಿಗೂ ಹೆಚ್ಚು ಪೆಟ್ಟು, ಮಾತ್ರವಲ್ಲ ಪ್ರಕೃತಿಯ ಸೌಂದರ್ಯ ವೀಕ್ಷಿಸುವ ಅಪೂರ್ವ ಅವಕಾಶದಿಂದಲೂ ವಂಚಿತರಾಗುತ್ತೇವೆ, ಚತುಷ್ಪಥ ಮಾರ್ಗವೇ ಹೆಚ್ಚು ಸೂಕ್ತ.
-ಅಬ್ದುಲ್ ರಹಮಾನ್ ಪಿ.ಟಿ. ಅಪಾಯ ತಂದೊಡ್ಡಬೇಡಿ
ಕಾಂಕ್ರೀಟೀಕರಣ ಆಗದ ರಸ್ತೆಗೆ ಕಾಂಕ್ರೀಟ್ ಹಾಕಿದರೆ ಸಾಕು. ಪ್ರಕೃತಿ ಸೌಂದರ್ಯ ಸವಿಯುತ್ತಾ ಘಾಟಿಯಲ್ಲಿ ಸಂಚರಿಸೋಣ. ರಸ್ತೆ ಅಗಲ ಮಾಡಿ ಗುಡ್ಡ ಜರಿದು ಇನ್ನೇನೋ ಅಪಾಯ ತಂದೊಡ್ಡುವುದು ಬೇಡ. ಎಲ್.ಪಿ.ಜಿ. ಟ್ಯಾಂಕರ್ ಟ್ರಕ್‌ಗಳಿಗೆ ಬೇರೆ ಪರ್ಯಾಯ ಮಾರ್ಗ ಇರಲಿ.
-ಉಲ್ಲಾಸ್ ಕೆ. ಶಿವಮೊಗ್ಗ ರಸ್ತೆಗೆ ಉತ್ತೇಜಿಸಿ
ಭಾರಿ ಗಾತ್ರದ ವಾಹನಗಳಿಗೆ ಪರ್ಯಾಯ ಮಾರ್ಗ ಒದಗಿಸಿ. ಬೆಂಗಳೂರು – ಶಿವಮೊಗ್ಗ – ಕರಾವಳಿಯ ಸಂಪರ್ಕ ವನ್ನು ಉತ್ತೇಜಿಸಬಹುದು. ಬೆಂಗಳೂರು – ಕರಾವಳಿ ರೈಲ್ವೇ ಮಾರ್ಗವನ್ನು ಹೆಚ್ಚು ಪ್ರಚಲಿತ ಗೊಳಿಸುವುದು ಒಳ್ಳೆಯದು.
-ನಾಗರಾಜ ಡಿ. ಬೈಂದೂರು
ಹೀಗೆಯೇ ಇರಲಿ ಬಿಡಿ
ಶಿರಾಡಿಯಲ್ಲಿ ಚತುಷ್ಪಥವೂ ಬೇಡ, ಸುರಂಗ ಮಾರ್ಗವೂ ಬೇಡ. ಯಾಕೆಂದರೆ ಚತುಷ್ಪಥ ಮಾಡುವಷ್ಟು ಸ್ಥಳದ ಕೊರತೆ ಇದ್ದು, ಈಗಾಗಲೇ ಯೋಜನೆಗಳ ಹೆಸರಲ್ಲಿ ಸಾಕಷ್ಟು ಅರಣ್ಯ ನಾಶವಾಗಿದೆ. ಅಲ್ಲದೇ ಮೂರು ಕಡೆಗಳಲ್ಲಿ ಅಣೆಕಟ್ಟುಗಳನ್ನೂ ನಿರ್ಮಿಸಿದ್ದಾರೆ. ಅಲ್ಲಿ ಈಗಾಗಲೇ ಬೆಂಗಳೂರು ಮಂಗಳೂರು ರೈಲು ಸಂಚಾರವಿದ್ದು, ಅಲ್ಲಲ್ಲಿ ರೈಲ್ವೇ ಸುರಂಗಗಳೂ ಇವೆೆ. ಅಲ್ಲಿ ಮತ್ತೆ ಭೂಮಿಯನ್ನು ಕೊರೆದರೆ ಪರಿಣಾಮ ಊಹಿಸಬಹುದು.
-ಪುಷ್ಪರಾಜ್ ಗುಂಡ್ಯ
ತುರ್ತು ದುರಸಿ ಮಾಡಿ
ಹಾಸನದಿಂದ ಸಕಲೇಶಪುರದವರೆಗಿನ ಮಾರ್ಗಕ್ಕೆ ಮಾತ್ರ ದುರಸ್ತಿ ಕಾರ್ಯದ ಆವಶ್ಯಕತೆ ಇದ್ದು ಉಳಿದಂತೆ ಎಲ್ಲವೂ ಚೆನ್ನಾಗಿದೆ. ವಾಹನಗಳು ಸಂಚರಿಸಲು ಉಪಯೋಗ ವಾಗುವಷ್ಟು ರಸ್ತೆಯನ್ನು ರಿಪೇರಿ ಮಾಡುವುದು ಉತ್ತಮ. ಅನಂತರ ರಸ್ತೆ ಅಭಿವೃದ್ಧಿ ಕುರಿತು ಚಿಂತಿಸುವುದು ಒಳಿತು.
-ನಿತಿನ್ ಕೇಶವ್ ಭಂಡಾರಿ ಉದಯವಾಣಿ ಸರಣಿ ವರದಿಗಳು
ಇದನ್ನೂ ಓದಿ: ಶಿರಾಡಿ ಘಾಟಿ ಸಂಚಾರ ನಿರ್ಬಂಧ ಎಷ್ಟು ಸೂಕ್ತ?- https://bit.ly/354VPOy ಸಂಚಾರ ಸ್ಥಗಿತ ಚಿಂತನೆ; ಪರ್ಯಾಯ ವ್ಯವಸ್ಥೆಗೆ ಆಗ್ರಹ –https://bit.ly/3qTX4Zp ಎಲ್ಲೆಲ್ಲೋ ಸುತ್ತಿ ಮಂಗಳೂರಿಗೆ ಪ್ರಯಾಣಿಕರು ಹೈರಾಣ-https://bit.ly/3fUDfed ಶಿರಾಡಿ ಘಾಟಿ: 6 ತಿಂಗಳು ರಸ್ತೆ ಮುಚ್ಚಿದರೆ ತತ್ತರಿಸಲಿದೆ ಆರ್ಥಿಕತೆ-https://bit.ly/34bJ5oO 6 ತಿಂಗಳು ಬಂದ್: ಪರ್ಯಾಯ, ಪರಿಹಾರ ಸಾಧ್ಯತೆಗಳು-https://bit.ly/33YQCYz ಶಿರಾಡಿ ಘಾಟಿ ಕಾಮಗಾರಿ: ರಾಜಕೀಯ ಹಸ್ತಕ್ಷೇಪ ನಿಂತರೆ ಕೆಲಸ ಸುಗಮ-https://bit.ly/3g55Opz ಟೆಂಡರ್, ಡಿಪಿಆರ್‌ಗಳಲ್ಲೇ ಕಳೆದು ಹೋದ ಕಾಮಗಾರಿ–https://bit.ly/3LapUwP