ನೆಲ್ಯಾಡಿ: ಮಂಗಳೂರು – ಬೆಂಗಳೂರು ರಾಷ್ಟೀಯ ಹೆದ್ದಾರಿಯ ಶಿರಾಡಿ ಘಾಟಿಯಲ್ಲಿ ಗುಡ್ಡ ಕುಸಿತವಾದ ಕಾರಣ ಘಾಟಿ ಸಂಚಾರ ಅಸ್ತವ್ಯಸ್ತಗೊಂಡಿದೆ.
ಇದೀಗ ಈ ರಸ್ತೆಯಲ್ಲಿ ವಾಹನ ಸಂಚಾರ ಮಾರ್ಪಾಡುಗೊಳಿಸಿ ಜಿಲ್ಲಾಧಿಕಾರಿಗಳು ಸೂಚನೆ ಹೊರಡಿಸಿದ್ದಾರೆ ಆದರ ಪ್ರಕಾರ ಅಗಸ್ಟ್ 12ರ ವರೆಗೆ ಸಂಜೆ 7 ರಿಂದ ಬೆಳಿಗ್ಗೆ 7ರವರೆಗೆ ರಾತ್ರಿ ವಾಹನ ಸಂಚಾರ ನಿಷೇಧಿಸಲಾಗಿದೆ. ಸಾರಿಗೆ ಬಸ್ಸುಗಳಿಗೆ ವಿನಾಯಿತಿ ನೀಡಲಾಗಿದೆ.
ಶಿರಾಡಿ ಗ್ರಾಮದಿಂದ 26 ಕಿಮೀ ಮೇಲೆ ಕಾಂಕ್ರೀಟ್ ರಸ್ತೆ ಮುಗಿದ ನಂತರ ಎತ್ತಿನಹಳ್ಳ ಎಂಬ ಸ್ಥಳದಲ್ಲಿ ಹೆದ್ದಾರಿಗೆ ಗುಡ್ಡ ಕುಸಿದು ಬಿದ್ದಿದೆ.
ರಸ್ತೆಗೆ ಬಿದ್ದಿರುವ ಮಣ್ಣು,ಕಲ್ಲು,ಮರಗಳನ್ನು ತೆರವುಗೊಳಿಸುವ ಕಾರ್ಯ ಭರದಿಂದ ಸಾಗುತ್ತಿದೆ.
ಕಳೆದ ವರ್ಷ ಕೂಡಾ ಇದೇ ಸ್ಥಳದಲ್ಲಿ ಗುಡ್ಡ ಕುಸಿದು ಸಂಚಾರಕ್ಕೆ ತಡೆಯಾಗಿತ್ತು. ಎತ್ತಿನಹಳ್ಳ ಸೇತುವೆ ಕೂಡಾ ಅಪಾಯದಲ್ಲಿದೆ.
ಶುಕ್ರವಾರದಂದು ಉದನೆಯಲ್ಲಿ ಎರಡು ಕಡೆ ಮತ್ತು ನೇಲ್ಯಡ್ಕದಲ್ಲಿ ಒಂದು ಕಡೆ ಕೆಂಪುಹೊಳೆ ನದಿಯ ಪ್ರವಾಹ ಹೆದ್ದಾರಿಯಲ್ಲಿ ಹರಿಯುತ್ತಿದ್ದ ಕಾರಣ ಕೆಲಕಾಲ ಸಂಚಾರ ವಾಗಿತ್ತು.