Advertisement

ಶಿರಾಡಿ: ಆನೆ ಹಿಂಡು ದಾಳಿ; ಕೃಷಿ ಹಾನಿ

01:22 AM Feb 29, 2020 | mahesh |

ಉಪ್ಪಿನಂಗಡಿ: ಶಿರಾಡಿ ಗ್ರಾಮ ವ್ಯಾಪ್ತಿಯ ಅರಣ್ಯದ ಅಂಚಿನಲ್ಲಿ ಕಳೆದ 4 ದಿನಗಳಿಂದ ಆನೆಗಳ ಹಿಂಡೊಂದು ಬೀಡು ಬಿಟ್ಟಿದ್ದು, ಹಲವು ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ಕೃಷಿ ಹಾನಿ ಮಾಡಿದೆ. ಹಲವರಿಗೆ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಮಧ್ಯ ರಾತ್ರಿಯ ಬಳಿಕ ಅರಣ್ಯದಿಂದ ತೋಟಗಳಿಗೆ ನುಗ್ಗುವ ಆನೆಗಳು ಮುಂಜಾನೆ ತನಕವೂ ತೋಟದೊಳಗೆ ಇದ್ದು, ಪುಂಡಾಟಿಕೆ ನಡೆಸುತ್ತಿರುತ್ತವೆ. ರಬ್ಬರ್‌ ಕೃಷಿ ಮಾಡುವವರು ನಸುಕಿನ 4 ಗಂಟೆಯ ಒಳಗಾಗಿ ಟ್ಯಾಪಿಂಗ್‌ ಮಾಡಬೇಕಾಗಿದ್ದು, ತೋಟ ದೊಳಗೆ ಆನೆ ಇರುವ ಕಾರಣದಿಂದಾಗಿ ಟ್ಯಾಪಿಂಗ್‌ ಕಾರ್ಯಕ್ಕೆ ಅಡ್ಡಿಯಾಗಿದೆ.

Advertisement

ಕಲ್ಮಕಾರು: ಕಾಡಾನೆ ಶವ ಪತ್ತೆ
ಸುಬ್ರಹ್ಮಣ್ಯ: ಕಲ್ಮಕಾರು ಗ್ರಾಮದ ಕೊಪ್ಪಡ್ಕದ ಸತೀಶ್‌ ಕೆ.ಜಿ. ಅವರ ಅರಣ್ಯದಂಚಿನ ತೋಟದಲ್ಲಿ ಗಂಡಾನೆಯ ಶವ ಶುಕ್ರವಾರ ಪತ್ತೆಯಾಗಿದೆ. ಐದಾರು ದಿನಗಳ ಹಿಂದೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಈ ಸ್ಥಳ ಜನವಸತಿ ಪ್ರದೇಶದಿಂದ ದೂರದಲ್ಲಿದ್ದು, ಮನೆಯವರು ಆ ಭಾಗಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮೃತ ಆನೆಗೆ 8-9 ವರ್ಷ ಅಂದಾಜಿಸಲಾ ಗಿದೆ. ಸ್ಥಳದಲ್ಲಿ ಕಿತ್ತಾಟ ನಡೆದು ಪೊದೆಗಳು, ಅಡಿಕೆ ಸಸಿ ಗಳು ನಜ್ಜುಗುಜ್ಜಾದ ರೀತಿಯಲ್ಲಿ ಕಂಡು ಬಂದಿದ್ದು, ಕಾಡಾನೆಗಳ ಗುಂಪಿನಲ್ಲಿ ಕಾದಾಟ ನಡೆದು ಈ ಆನೆ ಮೃತಟ್ಟಿರಬಹುದು ಎಂದು ಶಂಕಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next