Advertisement

Athens: ಮುಳುಗಿದ ಹಡಗು- ನಾಲ್ವರು ಭಾರತೀಯರು ನಾಪತ್ತೆ

10:13 PM Nov 26, 2023 | Team Udayavani |

ಅಥೆನ್ಸ್‌: ಗ್ರೀಸ್‌ನ ಲೆಸ್ಬೋಸ್‌ ದ್ವೀಪದಲ್ಲಿ ಭಾನುವಾರ ಸರಕು ಸಾಗಣೆ ಹಡಗೊಂದು ಮುಳುಗಿದೆ. ಪರಿಣಾಮ ನಾಲ್ವರು ಭಾರತೀಯರು ಸೇರಿದಂತೆ 13 ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ಒಬ್ಬ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement

ದ ರ್ಯಾಪ್ಟರ್‌ ಹಡಗು ನಾಪತ್ತೆಯಾಗುವ ವೇಳೆ ಅಲೆಕ್ಸಾಂಡ್ರಿಯದಿಂದ ಈಜಿಪ್ಟ್ನ ಇಸ್ತಾಂಬುಲ್‌ನತ್ತ ಹೊರಟಿತ್ತು. ಭೀಕರ ಚಂಡಮಾರುತದ ಪರಿಣಾಮ ಅದು ಸಂಕಷ್ಟಕ್ಕೆ ಸಿಲುಕಿತು. ಅದರಲ್ಲಿ 6000 ಟನ್‌ ಉಪ್ಪು ಇತ್ತು. ಇದ್ದ 14 ಸಿಬ್ಬಂದಿಯಲ್ಲಿ ಎಂಟು ಮಂದಿ ಈಜಿಪ್ಟಿಯನ್ನರು, ನಾಲ್ವರು ಭಾರತೀಯರು, ಇಬ್ಬರು ಸಿರಿಯದವರು ಸೇರಿದ್ದಾರೆ. ಬೆಳಗ್ಗೆ 7 ಗಂಟೆಗೆ ಹಡಗಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಅದು ನಾಪತ್ತೆಯಾದ ಕೆಲವೇ ಸಮಯದಲ್ಲಿ ಗಂಭೀರ ಅಪಾಯದಲ್ಲಿರುವ ಸಂದೇಶ ಕಳುಹಿಸಿತ್ತು. ಸದ್ಯ ಗ್ರೀಸ್‌ ಅಧಿಕಾರಿಗಳು 8 ವ್ಯಾಪಾರಿ ಹಡಗುಗಳು, ಎರಡು ಹೆಲಿಕಾಪ್ಟರ್‌ಗಳು, ಒಂದು ನೌಕಾಪಡೆಯ ನೌಕೆ ಶೋಧದಲ್ಲಿ ತೊಡಗಿವೆ.

Advertisement

Udayavani is now on Telegram. Click here to join our channel and stay updated with the latest news.

Next