Advertisement

ಶಿಪ್ಪಿಂಗ್‌ ಕಾರ್ಮಿಕರ ಮುಷ್ಕರ ಏಳನೇ ದಿನಕ್ಕೆ 

12:34 PM Feb 05, 2018 | |

ಪಣಂಬೂರು: ಆಲ್‌ ಇಂಡಿಯಾ ಸೆಂಟ್ರಲ್‌ ಕೌನ್ಸೆಲ್‌ ಆಫ್‌ ಟ್ರೇಡ್‌ ಯೂನಿಯನ್ಸ್‌ ಇದರ ಬಂದರು ವಿಭಾಗದ ಶಿಪ್ಪಿಂಗ್‌ ಕಾರ್ಮಿಕರು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಆರಂಭಿಸಿರುವ ಮುಷ್ಕರ ಏಳನೇ ದಿನಕ್ಕೆ ಕಾಲಿಟ್ಟಿದೆ.

Advertisement

ನಿಯಮಿತ ದುಡಿಯುವ ಅವಧಿ, ಭವಿಷ್ಯನಿಧಿ, ಇಎಸ್‌ಐ, ಓಟಿ ಸೌಲಭ್ಯ, ಬಂದರು ಒಳಗೆ ವಿಶ್ರಾಂತಿ ಕೊಠಡಿ ಮತ್ತಿತರ ಬೇಡಿಕೆಗಳಿಗೆ ಆಗ್ರಹಿಸಿ ಜ. 29ರಿಂದ ಬಂದರು ಮುಂಭಾಗ ಮುಷ್ಕರ ಆರಂಭಿಸಿದ್ದಾರೆ. ಬಂದರು ಮಂಡಳಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಅಧಿಕಾರಿಗಳು ಅಥವಾ ಶಿಪ್ಪಿಂಗ್‌ ಕಂಪೆನಿಗಳು ಮಾತುಕತೆಗೆ ಮುಂದಾಗಿಲ್ಲ ಎಂದು ಕಾರ್ಮಿಕ ಮುಖಂಡರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next