Advertisement

ಕಳಪೆ ರಸಗೊಬ್ಬರ ಸಾಗಾಟ: ರೈತರ ಆರೋಪ

03:16 PM Mar 15, 2022 | Team Udayavani |

ಕೊಪ್ಪಳ: ತಾಲೂಕಿನ ಇರಕಲ್‌ಗ‌ಡಾ ಮಾರ್ಗವಾಗಿ ತೆರಳುತ್ತಿದ್ದ ರಸಗೊಬ್ಬದ ಲಾರಿಯನ್ನು ತಡೆದ ರೈತರು ಗೊಬ್ಬರ ಪರಿಶೀಲನೆ ನಡೆಸಿ, ಇದು ಕಳಪೆ ಗೊಬ್ಬರ ಬೇರೆಡೆ ಸಾಗಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಪೊಲೀಸರಿಗೆ ಗೊಬ್ಬರದ ಸಮೇತ ಲಾರಿಯನ್ನು ಒಪ್ಪಿಸಿದ ಘಟನೆ ಸೋಮವಾರ ನಡೆದಿದೆ.

Advertisement

ಲಾರಿಯೊಂದರಲ್ಲಿ 600 ಚೀಲ 17.17.17 ರಸಗೊಬ್ಬರ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಅನುಮಾನಗೊಂಡ ರೈತರು ಇರಕಲ್‌ಗ‌ಡ ಗ್ರಾಮದಲ್ಲಿ ತಡೆದು, ಗೊಬ್ಬರದ ಚೀಲಗಳನ್ನು ಕೆಳಗಿಳಿಸಿ ಪರಿಶೀಲನೆ ನಡೆಸಿದ್ದಾರಲ್ಲದೇ, ಇದು ಕಳಪೆ ಗೊಬ್ಬರವೆಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಲಾರಿಯು ಕೊಪ್ಪಳದ ಕೆಪಿಆರ್‌ ಕಾರ್ಖಾನೆಯಿಂದ ಬೀದರ್‌ಗೆ ತೆರಳುತ್ತಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ. ರಸಗೊಬ್ಬರ ಕಳಪೆಯಾಗಿರುವುದನ್ನು ಪತ್ತೆ ಮಾಡಿದ ಬಗ್ಗೆ ರೈತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಕೃಷಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರೈತರ ಸಮ್ಮುಖದಲ್ಲಿ ರಸಗೊಬ್ಬರವನ್ನು ಪರಿಶೀಲನೆ ನಡೆಸಿದರು.

ರೈತರ ಪ್ರಕಾರ, ರಸಗೊಬ್ಬರ ನೀರಿನಲ್ಲಿ ಹಾಕಿದ ತಕ್ಷಣ ಕರಗುತ್ತದೆ. ಆದರೆ ಈ ರಸಗೊಬ್ಬರ ಕರಗುತ್ತಲೇ ಇಲ್ಲ. ಇದರಿಂದ ಇರಬೇಕಾದ ರಸಾಯನಿಕ ಪ್ರಮಾಣವೂ ಇಲ್ಲ ಎಂದೆನ್ನುತ್ತಿದ್ದಾರೆ. ಆದರೆ, ಇದನ್ನು ತಕ್ಷಣ ಪರಿಶೀಲನೆ ಮಾಡಲು ಆಗುವುದಿಲ್ಲ. ಪ್ರಯೋಗಾಲದಲ್ಲಿಯೇ ಇದರ ಸತ್ಯಾಸತ್ಯತೆ ಪರೀಕ್ಷೆ ಮಾಡಬೇಕು. ಹೀಗಾಗಿ, ರೈತರ ದೂರು ಆಧರಿಸಿ ರಸಗೊಬ್ಬರವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಪ್ರಯೋಗಾಲಯ ವರದಿ ಬಂದ ಮೇಲೆಯೇ ಇದನ್ನು ಪತ್ತೆ ಮಾಡಲು ಸಾಧ್ಯ ಎಂದಿದ್ದಾರೆ. ಪ್ರಯೋಗಾಲಯದ ವರದಿ ಬಂದ ಬಳಿಕವಷ್ಟೇ ಗೊಬ್ಬರ ಕಳಪೆಯೋ ಗುಣಮಟ್ಟಧ್ದೋ ಗೊತ್ತಾಗಲಿದೆ.

ಲಾರಿಯಲ್ಲಿನ ಗೊಬ್ಬರವನ್ನು ಪರಿಶೀಲನೆ ನಡೆಸಿರುವ ರೈತರು ಅದು ಕಳಪೆಯಾಗಿದೆ ಎಂದು ಆರೋಪಿಸಿದ್ದಾರೆ. ಹಾಗಾಗಿ ನಾವು ಆ ಗೊಬ್ಬರದ ಸ್ಯಾಂಪಲ್‌ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು.

Advertisement

ಕುಮಾರಸ್ವಾಮಿ, ವಿಚಕ್ಷಣ ದಳದ ಅಧಿಕಾರಿ, ಕೃಷಿ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next