Advertisement

ಗೋವಾದಲ್ಲಿ ಮುಳುಗಿದ ಹಡಗು: ಇಬ್ಬರ ರಕ್ಷಣೆ

05:29 PM May 14, 2023 | Team Udayavani |

ಪಣಜಿ: ಮಿರಾಮಾರ್ ಬೀಚ್‍ನ ಮ್ಯಾರಿಯೊಟ್ ರೆಸಾರ್ಟ್ ಬಳಿ ಶನಿವಾರ ತಾಂತ್ರಿಕ ದೋಷದಿಂದ ಹಡಗು ಮುಳುಗಿದೆ, ನಿಖರವಾಗಿ ಹಡಗು ಯಾರದ್ದು ಎನ್ನುವ ಕುರಿತು ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಹಡಗು ನೌಕಾಪಡೆಗೆ ಸೇರಿದೆ ಎಂದು ಹೇಳಲಾಗುತ್ತಿದೆ,  ಆದರೆ ನೌಕಾಪಡೆ ಈ ಬಗ್ಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ.

Advertisement

ಈ ಹಡಗು ಮುಳುಗಡೆಗೆ ಕಾರಣ ತಿಳಿದುಬಂದಿಲ್ಲ, ಯಾವುದೇ ಸಾವು ನೋವು ಸಂಭವಿಸಿದೆಯೇ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇತ್ತೀಚಿನ ಮಾಹಿತಿಯ ಪ್ರಕಾರ, ಮಿರಾಮಾರ್ ಕರಾವಳಿಯಲ್ಲಿ ಮುಳುಗಿದ  ಈ ಹಡಗು ನೌಕಾಪಡೆಗೆ ಸೇರಿದ್ದು, ಇಬ್ಬರು ನೌಕಾಪಡೆ ಸಿಬ್ಬಂದಿ ಇದ್ದರು ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಧಾವಿಸಿದ ನೌಕಾಪಡೆಯ ಗಸ್ತು ಹಡಗಿನ ಮೂಲಕ ಇಬ್ಬರನ್ನು ರಕ್ಷಿಸಿದೆ. ಹಡಗಿನ ಸ್ಟೇರಿಂಗ್ ಮುರಿದಿದ್ದರಿಂದ ಹಡಗು ಮುಳುಗಿತು ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next