Advertisement

ಮಳೆಯಲ್ಲಿ ಹೊಳೆಯುವ ಮುಖ 

06:00 AM Aug 17, 2018 | Team Udayavani |

ಅಧಿಕ ತೇವಾಂಶವಿರುವ ಮಳೆಗಾಲದ ವಾತಾವರಣದಲ್ಲಿ ಮುಖಕ್ಕೆ ವಿಶೇಷ ಆರೈಕೆ ಅವಶ್ಯ. ವಾತಾವರಣದ ಉಷ್ಣತೆ ವೈಪರೀತ್ಯ ಹಾಗೂ ತೇವಾಂಶ ಅಧಿಕ್ಯತೆಯಿಂದ ಮೊಡವೆ, ಕೆಂಪು ಗುಳ್ಳೆಗಳು ಉಂಟಾಗುತ್ತವೆ.

Advertisement

ಒಣ ಚರ್ಮದವರಿಗೆ ಮಳೆಗಾಲದ ಫೇಸ್‌ಪ್ಯಾಕ್‌
 ಒಣ ಚರ್ಮ ನಿವಾರಣೆ ಜೊತೆಗೆ ಮೊಡವೆ, ಗುಳ್ಳೆ, ಕಲೆಗಳ ನಿವಾರಣೆಗೆ ಈ ಫೇಸ್‌ಪ್ಯಾಕ್‌ ಹಿತಕರ. ಒಂದು ಬೌಲ್‌ನಲ್ಲಿ  10 ಚಮಚ ಜೊಜೋಬಾ ತೈಲ, 10 ಚಮಚ ತಾಜಾ ದಪ್ಪ ಮೊಸರು, 5 ಚಮಚ ಜೇನುತುಪ್ಪ – ಇವೆಲ್ಲವನ್ನೂ ಚೆನ್ನಾಗಿ ಬೆರೆಸಿ ಮುಖಲೇಪನ ಮಾಡಬೇಕು. 15-20 ನಿಮಿಷದ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದರೆ ಮುಖ ಫ‌ಳಫ‌ಳ ಹೊಳೆಯುತ್ತದೆ. ಮೊಡವೆ, ಕೆಂಪು ಗುಳ್ಳೆ, ಕಪ್ಪು ಕಲೆಗಳೂ ನಿವಾರಣೆಯಾಗುತ್ತವೆ.

ಹಣ್ಣುಗಳ ಮುಖಲೇಪ
ಬಾಳೆಹಣ್ಣು , ಸೇಬು, ಸ್ಟ್ರಾಬೆರಿ, ಅಂಜೂರ ಮೊದಲಾದ ಹಣ್ಣುಗಳ ತಿರುಳನ್ನು ತೆಗೆದುಕೊಳ್ಳಬೇಕು. ಇದನ್ನು ಬ್ಲೆಂಡರ್‌ನಲ್ಲಿ ತಿರುವಿ ದಪ್ಪ ಪೇಸ್ಟ್‌ ತಯಾರಿಸಬೇಕು.

ಗ್ರೀನ್‌ ಟೀ ಮುಖಲೇಪ
ಚರ್ಮಕ್ಕೆ ತಂಪು ಗುಣ ನೀಡಲು ಹಾಗೂ ಹಾರ್ಮೋನ್‌ ವ್ಯತ್ಯಯದಿಂದ ಉಂಟಾಗುವ ಮೊಡವೆಗಳ ನಿವಾರಣೆಗೆ ಈ ಫೇಸ್‌ಪ್ಯಾಕ್‌ ಉತ್ತಮ. ಕಟೆಚಿನ್ಸ್‌ (cate chins) ಎಂಬ ಬ್ಯಾಕ್ಟೀರಿಯಾ ನಿರೋಧ‌ಕ ಅಂಶವು ಮಳೆಗಾಲದಲ್ಲಿ ಮೊಗವನ್ನು ಬ್ಯಾಕ್ಟೀರಿಯಾ ಹಾಗೂ ಕ್ರಿಮಿಗಳಿಂದ ರಕ್ಷಿಸುತ್ತದೆ. ಮುಖದ ಕಾಂತಿ ವೃದ್ಧಿಗೂ ಸಹಕಾರಿ.

ಸಹಜ ಚರ್ಮದವರಿಗೆ ಗ್ರೀನ್‌ ಟೀ ಫೇಸ್‌ಪ್ಯಾಕ್‌
3 ಚಮಚ ಕಡಲೆಹಿಟ್ಟು , 10 ಚಮಚ ಗ್ರೀನ್‌ ಟೀ, 10 ಚಮಚ ಕಿತ್ತಳೆ ಸಿಪ್ಪೆಯ ಪುಡಿ, 1/2 ಚಮಚ ಜೇನು ಇವೆಲ್ಲವನ್ನೂ ಬೆರೆಸಿ ಚೆನ್ನಾಗಿ ಕಲಕಿ, ಪೇಸ್ಟ್‌ ತಯಾರಿಸಬೇಕು. ಇದನ್ನು ಸðಬ್‌ನಂತೆ ಲೇಪಿಸಿ ಮಾಲೀಶು ಮಾಡಬೇಕು. ಅಂದರೆ ತುದಿಬೆರಳುಗಳಿಂದ ವರ್ತುಲಾಕಾರದಲ್ಲಿ ಮಾಲೀಶು ಮಾಡಿ 15 ನಿಮಿಷದ ಬಳಿಕ ಬೆಚ್ಚಗಿನ ನೀರಿನಿಂದ ತೊಳೆಯಬೇಕು. ಹೀಗೆ ವಾರಕ್ಕೆ 2-3 ಬಾರಿ ಬಳಸಿದರೆ ಪರಿಣಾಮಕಾರಿ. ಕಿತ್ತಳೆ ಸಿಪ್ಪೆಯ ಪುಡಿಯ ಬದಲು 10 ಚಮಚ ಚಂದನದ ಪುಡಿ ಹಾಗೂ 1/2 ಚಮಚ ಅರಸಿನ ಪುಡಿ ಬಳಸಿದರೆ ಈ ಫೇಸ್‌ಪ್ಯಾಕ್‌ ಎಲ್ಲಾ ಬಗೆಯ ಚರ್ಮದವರಿಗೆ ಉತ್ತಮ.

Advertisement

ತೈಲಯುಕ್ತ ಚರ್ಮದವರಿಗೆ ಗ್ರೀನ್‌ ಟೀ ಫೇಸ್‌ಮಾಸ್ಕ್
ಮಳೆಗಾಲದಲ್ಲಿ ತೈಲಯುಕ್ತ ಚರ್ಮದವರಲ್ಲಿ ಅಧಿಕ ತೇವಾಂಶದೊಂದಿಗೆ ಚರ್ಮದ ಕಾಂತಿ ಕುಂದುತ್ತದೆ. ಜೊತೆಗೆ ಅಧಿಕ ಜಿಡ್ಡಿನ ಅಂಶ ನಿವಾರಣೆ ಮಾಡಿ ಮೊಗದ ಕಾಂತಿ ವರ್ಧಿಸಲು ಈ ಫೇಸ್‌ಮಾಸ್ಕ್ ಸಹಾಯಕ. 10 ಚಮಚ ಅಕ್ಕಿಹಿಟ್ಟಿಗೆ, 5 ಚಮಚ ಗ್ರೀನ್‌ ಟೀ ಹಾಗೂ 5 ಚಮಚ ನಿಂಬೆರಸ ಬೆರೆಸಬೇಕು. ಇದನ್ನು ಚೆನ್ನಾಗಿ ಮಿಶ್ರಮಾಡಿದ ಬಳಿಕ ಮುಖಕ್ಕೆ ಲೇಪಿಸಿ ಫೇಸ್‌ಮಾಸ್ಕ್ ತಯಾರಿಸಬೇಕು. 15 ನಿಮಿಷಗಳ ಬಳಿಕ ತಣ್ಣೀರಿನಲ್ಲಿ ಮುಖ ತೊಳೆದು ಒರೆಸಬೇಕು.

ಈ ಫೇಸ್‌ಮಾಸ್ಕ್ ತೈಲಾಂಶ ಹೀರುವ ಗುಣಗಳನ್ನು ಹೊಂದಿದೆ. ಗ್ರೀನ್‌ ಟೀ, ಅಕ್ಕಿಹಿಟ್ಟು ಹಾಗೂ ನಿಂಬೆರಸದ ಜೊತೆಗೆ ಬೆರೆತಾಗ ಸೀಬಮ್‌ ಉತ್ಪತ್ತಿ ಮಾಡುವ ಅಂದರೆ, ತೈಲಾಂಶ ಸ್ರಾವ ಮಾಡುವ ಸೆಬೆಶಿಯಸ್‌ ಗ್ರಂಥಿಗಳಿಂದ ಉಂಟಾಗುವ ಅಧಿಕ ಸ್ರಾವವನ್ನು ನಿಯಂತ್ರಿಸುತ್ತದೆ.
ಗ್ರೀನ್‌ಟೀಯಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಹಾಗೂ ನಿಂಬೆರಸದಲ್ಲಿರುವ ವಿಟಮಿನ್‌ “ಸಿ’ ಮುಖದ ತ್ವಚೆಗೆ ಕಾಂತಿ ನೀಡುತ್ತದೆ. ಸುಲಭದಲ್ಲೇ ಮನೆಯಲ್ಲಿ ತಯಾರಿಸಬಹುದಾದ ಈ ಮಾಸ್ಕ್ ಮಳೆಗಾಲದಲ್ಲಿ ಹಿತಕರ.

ಸ್ಟ್ರಾಬೆರಿ-ಮುಲ್ತಾನಿ ಮಿಟ್ಟಿ ಫೇಸ್‌ಪ್ಯಾಕ್‌
5 ಚೆನ್ನಾಗಿ ಕಳಿತ ಸ್ಟ್ರಾಬೆರಿ ಹಣ್ಣಿನ ಪೇಸ್ಟ್‌ ತಯಾರಿಸಿ ಅದಕ್ಕೆ 2 ಚಮಚ ಜೇನು, 10 ಚಮಚ ಮುಲ್ತಾನಿ ಮಿಟ್ಟಿ ಬೆರೆಸಿ ಚೆನ್ನಾಗಿ ಕಲಕಬೇಕು. ತದನಂತರ ಬ್ರೆಡ್‌ ಕ್ರಂಟ್ಸ್‌ (2 ಚಮಚ) ಪುಡಿಯನ್ನು ಬೆರೆಸಿ 4 ಚಮಚ ಗುಲಾಬಿ ಜಲ ಬೆರೆಸಬೇಕು. ಇದನ್ನು ಪೇಸ್ಟ್‌ ಮಾಡಿದ ಬಳಿಕ ವರ್ತುಲಾಕಾರದಲ್ಲಿ ಮುಖಕ್ಕೆ ಮಾಲೀಶು ಮಾಡುತ್ತಾ, ಫೇಸ್‌ಪ್ಯಾಕ್‌ ಲೇಪಿಸಬೇಕು. 15 ನಿಮಿಷಗಳ ಬಳಿಕ ತೊಳೆದರೆ ಮೊಗದಲ್ಲಿರುವ ಕಲೆ ನಿವಾರಣೆಗೆ ಹಾಗೂ ಕಾಂತಿ ವರ್ಧನೆಗೆ ಸಹಕಾರಿ.

ಮುಲ್ತಾನಿ ಮಿಟ್ಟಿಯಲ್ಲಿ ಮೆಗ್ನಿಶಿಯಂ, ಕಬ್ಬಿಣ ಸಣ್ತೀ , ಕ್ಯಾಲ್ಸಿಯಂ, ಸಿಲಿಕಾ, ಡೊಲೊಮೈಟ್‌, ಕ್ವಾರ್ಟ್ಸ್ ಹಾಗೂ ಕ್ಯಾಲ್‌ಸೈಟ್‌ ಅಂಶಗಳಿದ್ದು , ಈ ವಿಧದ ಫೇಸ್‌ಪ್ಯಾಕ್‌ ಉತ್ತಮ ಕ್ಲೆನ್ಸರ್‌ ಆಗಿದೆ. ಸ್ಟ್ರಾಬೆರಿ ಹಣ್ಣಿನಲ್ಲಿರುವ ವಿಟಮಿನ್‌ “ಸಿ’ ಹಾಗೂ ವಿಶಿಷ್ಟ ಆ್ಯಂಟಿಆಕ್ಸಿಡೆಂಟ್‌ಗಳು ಕಲೆ, ಮುಖದ ಪಿಗ್‌ಮೆಂಟ್‌ ನಿವಾರಣೆಗೆ ಸಹಾಯಕವಾಗಿದೆ. ಜೇನು ಸಹ ಬ್ಲೀಚಿಂಗ್‌ ಪರಿಣಾಮ ಉಂಟಮಾಡಿ ಸಹಜವಾಗಿ ಮುಖದ ಶುಭ್ರತೆಯನ್ನು ವರ್ಧಿಸುತ್ತದೆ.

ಡಾ. ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next