Advertisement
ಕೆಲವರು ಹವ್ಯಾಸಕ್ಕಾಗಿ ಗಾಳ ಹಾಕಿದರೆ ಇನ್ನು ಕೆಲವರು ಜೀವನೋಪಯಕ್ಕಾಗಿ ಗಾಳ ಹಾಕಿ ಮೀನು ಹಿಡಿದು ಮಾರಾಟ ಮಾಡುವುದುದನ್ನು ಕಾಣಬಹುದಾಗಿದೆ.
ಮಲ್ಪೆ ಬಂದರು ಸಮೀಪದ ಸೀ-ವಾಕ್ ಬಳಿಯಲ್ಲಿ ವರ್ಷದ 365ದಿನವೂ ಗಾಳ ಹಾಕಿ ಮೀನು ಹಿಡಿಯುವ ಬಹಳಷ್ಟು ಮಂದಿ ಕಾಣಸಿಗುತ್ತಾರೆ. ಗುಂಪು ಗುಂಪಾಗಿ ಸಮುದ್ರ ತಡಿಯಲ್ಲಿ ಗಾಳ ಹಾಕಿ ಮೀನು ಹಿಡಿಲೆಂದು ಇಲ್ಲಿಗೆ ಬಂದು ಸೇರುತ್ತಾರೆ. ಹಿಂದೆ ಕೈ ಗಾಳದಲ್ಲಿ ಮಾತ್ರ ಮೀನು ಹಿಡಿಯಲಾಗುತ್ತಿದ್ದು ಇದೀಗ ಆಧುನಿಕ ಸಲಕರಣೆಗಳು ಬಂದಿವೆ.
Related Articles
ಗಾಳದಲ್ಲಿ ಸಾಕಷ್ಟು ಪರಿಣತೆಯನ್ನು ಹೊಂದಿದ ನಾಗೇಶ್ ಕುಮಾರ್ ಉದ್ಯಾವರ, ಸೂರ್ಯ ಕೊಳ, ಪ್ರಶಾಂತ್ ಮಲ್ಪೆ, ಅಭಿಕೊಳ, ಅಶ್ರಫ್ ಮಲ್ಪೆ, ಬಸಂತ್ ಕುಮಾರ್, ಕಾಂತರಾಜ್, ಸಂದೀಪ್ ಕುಂದರ್ ಅವರುಗಳು ಕಳೆದ ಕೆಲವು ವರ್ಷಗಳಿಂದ ಸೀ ವಾಕ್ ಸಮೀಪದ ಕಲ್ಲಿನಲ್ಲಿ ಆಧುನಿಕ ಸಲಕರಣೆಯನ್ನು (ಸ್ಪಿನ್ನಿಂಗ್ ಸ್ಟಿಕ್) ಬಳಸಿಕೊಂಡು ಗಾಳ ಹಾಕುತ್ತಾರೆ. 6ರಿಂದ 20ಕೆ.ಜಿ. ತೂಕದ ಕೆಂಬೆರಿ, ಮುರು ಮೀನು, ಕುಲೇಜ್, ಆಂಬಾಯಿ, ಕೋಂದೊಲು ಮೀನುಗಳನ್ನು ಹಿಡಿಯುತ್ತಾರೆ. ಕೈ-ಗಾಳದಲ್ಲಿ ಕಂಡಿಗೆ, ಕಲ್ಲರ್, ಬರಾಯಿ, ಕೊಕ್ಕರ್, ಬಯ್ಯ, ನಂಗ್ ಮೀನುಗಳನ್ನು ಹಿಡಿಯಲಾಗುತ್ತದೆ.
Advertisement
ಎಲ್ಲ ಸಮಯದಲ್ಲಿ ಗಾಳಕ್ಕೆ ಮೀನು ಹಿಡಿಯುವುದಿಲ್ಲ. ನೀರಿನ ಇಳಿತ ಭರತವನ್ನು ಅವಲಂಬಿಸಿರುತ್ತದೆ. ನೀರು ಇಳಿತದಿಂದ ಭರತವಾಗುವಾಗ ಮತ್ತು ಭರತದಿಂದ ಇಳಿತವಾಗುವ ಸಮಯದಲ್ಲಿ ಮೀನುಗಳು ಆಹಾರ ಅರಸುತ್ತಾ ದಂಡೆ ಬಳಿ ಬರುತ್ತದೆ. ಈ ಸಮಯದಲ್ಲಿ ಹೆಚ್ಚು ಮೀನು ಗಾಳಕ್ಕೆ ಬೀಳುತ್ತದೆ. ನೀರು ಬಿಸಿಯಾಗಿದ್ದರೆ ಉತ್ತಮ ತಣ್ಣಗಿದ್ದರೆ ಮೀನು ಹತ್ತಿರ ಬರುವುದಿಲ್ಲ ಎನ್ನುತ್ತಾರೆ ಗಾಳದ ಅನುಭವಿ ದಯಾನಂದ ಅವರು.
ಉಬೇರ್ ಮೀನುಗಳ ಬೇಟೆಇನ್ನು ಮಳೆ ನೀರು ಮೇಲೇರಿ ಬರುತ್ತಿದ್ದಂತೆ ಗದ್ದೆ , ತೋಡು, ಹೊಳೆಸಾಲು ಭಾಗದಲ್ಲಿ ಮೀನುಗಳು ಇರುವುದು ಗಮನಕ್ಕೆ ಬಂದಾಗ ಮೀನು ಪ್ರಿಯರ ತಂಡ ಶಿಕಾರಿಗೆ ಮುಂದಾಗುತ್ತಾರೆ. ಈ ವೇಳೆ ಉಬೇರ್ ಮೀನುಗಳು ಜಾಡು ಹಿಡಿದು ಮೇಲೇರಿ ಬರುತ್ತವೆ. ಹೊಳೆ ತೀರದ ಗದ್ದೆಗಳಲ್ಲಿ , ತೋಡು ಗಳಲ್ಲಿ ಮೀನು ಹಿಡಿಯಲು ಹಗಲು ರಾತ್ರಿ ಎನ್ನದೆ ಬಲೆ ಕತ್ತಿ ಹಿಡಿದು ಅಲೆದಾಡುತ್ತಾರೆ. ನೀರಿನ ಅಡಿಯಲ್ಲಿ ವೇಗವಾಗಿ ಚಲಿಸುವ ವಿವಿಧ ಜಾತಿಯ ಮೀನನ್ನು ನೋಟವಿಟ್ಟು ಕಡಿಯುವುದು ರೋಮಾಂಚಕ ಅನುಭವ ಮುಗುಡು, ಕಿಜನ್, ಚೀಂಕಡೆ, ಮಾಲಯಿ, ಕಂಡಿಗೆ ಬಯ್ಯ ಮೀನುಗಳು ಸಿಗುತ್ತವೆ.