Advertisement

ಹಲವಾರು ಪ್ರಮುಖ ವಿರೋಧ ಪಕ್ಷದ ನಾಯಕರ ಭದ್ರತೆ ತೆಗೆದುಹಾಕಿದ ಶಿಂಧೆ ಸರ್ಕಾರ

12:34 PM Oct 29, 2022 | Team Udayavani |

ಮುಂಬೈ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ ಸಿಪಿ), ಕಾಂಗ್ರೆಸ್ ಪಕ್ಷ ಮತ್ತು ಉದ್ಧವ್ ಠಾಕ್ರೆ ಬಣದ ಹಲವು ಹಿರಿಯ ನಾಯಕರ ಭದ್ರತೆಗೆ ನಿಯೋಜಿಸಲಾಗಿದ್ದ ಭದ್ರತಾ ಸಿಬ್ಬಂದಿಯನ್ನು ಶಿಂಧೆ-ಫಡ್ನವೀಸ್ ಸರ್ಕಾರ ತೆಗೆದು ಹಾಕಿದೆ.

Advertisement

ಇದೇ ವೇಳೆ ಎನ್ ಸಿಪಿ ನಾಯಕರಾದ ಅಜಿತ್ ಪವಾರ್ ಮತ್ತು ದಿಲೀಪ್ ವಾಸ್ಲೆ ಅವರ ಝಡ್ ಕ್ಯಾಟಗರಿ ಭದ್ರತೆಯನ್ನು ‘ವೈ- ಪ್ಲಸ್’ ಗೆ ಇಳಿಸಲಾಗಿದೆ.

ಇದನ್ನೂ ಓದಿ:ಪಾಕಿಸ್ತಾನಿಯರು ಗುಲಾಮರು…ಭಾರತದ ವಿದೇಶಾಂಗ ನೀತಿಗೆ ಇಮ್ರಾನ್ ಖಾನ್ ಬಹುಪರಾಕ್

ಅನಿಲ್ ದೇಶಮುಖ್, ಛಗನ್ ಭುಜಬಲ್, ಬಾಳಾಸಾಹೇಬ್ ಥೋರಟ್, ನಿತಿನ್ ರಾವುತ್, ನಾನಾ ಪಟೋಲೆ, ಜಯಂತ್ ಪಾಟೀಲ್, ಸಂಜಯ್ ರಾವತ್, ವಿಜಯ್ ವಾಡೆತ್ತಿವಾರ್, ಧನಂಜಯ್ ಮುಂಡೆ, ನವಾಬ್ ಮಲಿಕ್, ನರಹರಿ ಜೀರ್ವಾಲ್, ಸುನೀಲ್ ಕೇದಾರ್, ಅಸ್ಲಂ ಶೇಖ್, ಅನಿಲ್ ಪರಬ್ ಮತ್ತು ಇತರ ನಾಯಕರ ಪೊಲೀಸ್ ಭದ್ರತೆ ಕಡಿಮೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next