ಮುಂಬಯಿ: ಹೈವೋಲ್ಟೇಜ್ ರಾಜಕೀಯ ನಾಟಕದ ನಂತರ ಅಧಿಕಾರಕ್ಕೆ ಬಂದಿರುವ ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರಕಾರ ಅಧಿಕಾರಕ್ಕೆ ಒಂದು ಶನಿವಾರ ತಿಂಗಳು ಪೂರೈಸುತ್ತಿದೆಯಾದರೂ ಸಂಪುಟ ವಿಸ್ತರಣೆ ಯಾವಾಗ ನಡೆಯಲಿದೆ ಎಂಬುದರ ಕುರಿತು ಇನ್ನೂ ಸ್ಪಷ್ಟತೆ ಇಲ್ಲವಾಗಿದೆ.
ಶಿಂಧೆ ನೇತೃತ್ವದ ಶಿವಸೇನಾ ಬಹುಪಾಲು ಶಾಸಕರ ಬಂಡಾಯದ ನಂತರ ಉದ್ಧವ್ ಠಾಕ್ರೆ ಅವರು ಸ್ಥಾನದಿಂದ ಕೆಳಗಿಳಿದ ಒಂದು ದಿನದ ನಂತರ, ಜೂನ್ 30 ರಂದು ಶಿಂಧೆ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಸಂಪುಟ ವಿಸ್ತರಣೆ ಇನ್ನಷ್ಟೇ ಆಗಬೇಕಿರುವುದರಿಂದ ಸದ್ಯಕ್ಕೆ ಶಿಂಧೆ ಮತ್ತು ಫಡ್ನವೀಸ್ ಮಾತ್ರ ಸಂಪುಟದಲ್ಲಿ ಸದಸ್ಯರಾಗಿದ್ದಾರೆ. ಈ ವಿಳಂಬ ನೀತಿ ಸರ್ಕಾರವನ್ನು ಗುರಿಯಾಗಿಸಲು ವಿರೋಧ ಪಕ್ಷಗಳಿಗೆ ಪ್ರಮುಖ ಅಸ್ತ್ರವಾಗಿದೆ.
ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ರತ್ನಾಕರ್ ಮಹಾಜನ್, “ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಇಬ್ಬರು ಸದಸ್ಯರ ಬೃಹತ್ ಸಂಪುಟವು ದೊಡ್ಡ ಪ್ರಮಾಣದ ಪ್ರವಾಹ, ಕೆಲವು ಸ್ಥಳಗಳಲ್ಲಿ ಮಳೆ ಕೊರತೆ ಮತ್ತು ವಿಷಯಗಳನ್ನು ಒಂದೇ ರೀತಿ ನೋಡಿಕೊಳ್ಳುತ್ತಿದೆ.” ಒಂದು ತಿಂಗಳ ಅವಧಿಯಲ್ಲಿ ಒಂದು ರಾಜ್ಯದಲ್ಲಿ ಸಂಪೂರ್ಣ ಮಂತ್ರಿಮಂಡಲವನ್ನು ಹೊಂದಲು ಸಾಧ್ಯವಾಗದಂತಹ ರಾಜಕೀಯ ಪಕ್ಷಕ್ಕೆ ದಯನೀಯ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿಯ ಮಹತ್ವಾಕಾಂಕ್ಷೆಯ ಯೋಜನೆಯೇ ಇದಕ್ಕೆ ಕಾರಣ ಎಂದು ಟೀಕಿಸಿದ್ದಾರೆ.
“ಕಳೆದ ಒಂದು ತಿಂಗಳಿನಿಂದ ಯಾವುದೇ ಸರ್ಕಾರ ಅಸ್ತಿತ್ವದಲ್ಲಿಲ್ಲ. ಹಿಂದೆಂದೂ ಮಹಾರಾಷ್ಟ್ರದ ಪ್ರತಿಷ್ಠೆಗೆ ಈ ರೀತಿ ಧಕ್ಕೆಯಾಗಿರಲಿಲ್ಲ. ರಾಜ್ಯದ ಗೌರವಕ್ಕೆ ಧಕ್ಕೆಯಾಯಿತು. ಶಿಂಧೆ ಮತ್ತು ಫಡ್ನವಿಸ್ ಅವರು ಮಾಡಿರುವ ಪ್ರಮಾಣ ಕಾನೂನುಬಾಹಿರವಾಗಿದೆ” ಎಂದು ಶಿವಸೇನೆ ಮುಖ್ಯ ವಕ್ತಾರ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಕಿಡಿ ಕಾರಿದ್ದಾರೆ.
ಎನ್‌ಸಿಪಿ ನಾಯಕ ಮತ್ತು ಮಾಜಿ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಮಾತನಾಡಿ, ಒಂದು ತಿಂಗಳ ನಂತರವೂ ಕ್ಯಾಬಿನೆಟ್ ರಚಿಸಲು ಸಾಧ್ಯವಾಗದಿರುವುದು ರಾಜ್ಯದಲ್ಲಿ ರಾಜಕೀಯ ಪರಿಸ್ಥಿತಿ ಇನ್ನೂ ನೀರಸವಾಗಿದೆ ಎಂಬುದನ್ನು ತೋರಿಸುತ್ತದೆ ಎಂದಿದ್ದಾರೆ.