Advertisement

ರೊಬೋಟ್‌ ರಾಗ ಮಂಜರಿ…

07:43 PM May 14, 2020 | Sriram |

ಲೇಡೀಸ್‌ ಆ್ಯಂಡ್‌ ಜಂಟಲ್‌ಮೆನ್‌ ಪ್ಲೀಸ್‌ ವೆಲ್‌ಕಂ ಆನ್‌ ದಿ ಸ್ಟೇಜ್‌… ಹೀಗೆ ಹೇಳುತ್ತಿದ್ದಂತೆ ಪ್ರೇಕ್ಷಕರ ಸಾಲಿನಿಂದ ಜೋರಾದ ಚಪ್ಪಾಳೆಯ ಸದ್ದು. ಇದೀಗ ಗಾಯಕ-ಗೀತರಚನೆಕಾರ ಶಿಮೋನ್‌ ಅವರು ನಿಮ್ಮನ್ನು ರಂಜಿಸಲಿದ್ದಾರೆ ಎಂದು ಹೇಳಿ ನಿರೂಪಕ ವೇದಿಕೆ ತೊರೆಯುತ್ತಾನೆ.

Advertisement

ಅಲ್ಲಿಗೆ ಶಿಮೋನ್‌ ಅಂದರೆ ಯಾರಿರಬಹುದು? ಎಂತಹ ಹಾಡುಗಳನ್ನು ಹಾಡಿರಬಹುದೆಂದು ನೀವು ಜಾಸ್ತಿ ತಲೆ ಕೆಡಿಸಿಕೊಳ್ಳುವುದೇ ಬೇಡ. ಶಿಮೋನ್‌ ಎಂದರೆ ಅದೊಂದು ರೊಬೋಟ್‌. ಶೃತಿ, ತಾಳ, ಲಯಬದ್ಧವಾಗಿ ಹಾಡಿ ಎಲ್ಲರನ್ನೂ ಮನರಂಜಿಸಬಲ್ಲ ಸಾಮರ್ಥ್ಯ ಇದಕ್ಕಿದೆ.

50 ಸಾವಿರ ಹಾಡು ಗೊತ್ತು…
ಇದನ್ನು ಮೊದಲ ಬಾರಿಗೆ 2017ರಲ್ಲಿ ಸಾರ್ವಜನಿಕರಿಗೆ ಪರಿಚಯಿಸಲಾಯಿತು ಮತ್ತು ಅಂದಿನಿಂದ ನೃತ್ಯ, ಹಾಡುಗಾರಿಕೆ, ಸಾಹಿತ್ಯ ಬರೆಯಲು ಮತ್ತು ಮಧುರ ಗೀತೆಗಳನ್ನು ಕಲಿಯುವ ಮೂಲಕ ತಮ್ಮ ಕಾರ್ಯವನ್ನು ಮೆರುಗುಗೊಳಿಸುತ್ತಾ ಬಂದಿದೆ.

ಇದನ್ನು ಜಾರ್ಜಿಯಾ ಟೆಕ್‌ ರೊಬೊಟಿಕ್‌ ಸಂಗೀತಗಾರರ ಗುಂಪು ರಚಿಸಿದೆ. ಈ ರೋಬೋಟ್‌ ತಾಂತ್ರಿಕವಾಗಿ ಉನ್ನತ ಮಟ್ಟದ್ದಲ್ಲಿದ್ದು ಹೊಸ ಸ್ತರದ ಸಂಗೀತ ಚಿಂತನೆಗಳನ್ನು ತಾನಾಗಿಯೇ ಅಳವಡಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಇದು ಹಿಪ್‌ ಹಾಪ್‌ ಹಾಡು ಮತ್ತು ರಾಕ್‌ ಸಿಂಗಿಂಗ್‌ನಂತಹ ಮಾದರಿಯ 50,000 ಹಾಡುಗಳನ್ನು ಮಾರ್ಧನಿಸಬಲ್ಲದು. ಗೀತರಚನೆ ವಿಭಾಗದಲ್ಲಿ ಶಿಮೊನ್‌ಗೆ ಸಾಹಿತ್ಯವನ್ನು ಹೊಂದಿಸಲು ಅನುಕೂಲವಾಗುವಂತೆ ಅವರ ಸೃಷ್ಟಿಕರ್ತ ಜಾರ್ಜಿಯಾ ಟೆಕ್‌ ಪ್ರೊಫೆಸರ್‌ ಗಿಲ್‌ ವೈನ್ಬರ್ಗ್‌ ಒಂದು ಥೀಮ್‌ ಅನ್ನು ನೀಡುತ್ತಾರೆ. ಆ ಥೀಮ್‌ನ ಆಧಾರದಲ್ಲಿ ಸಾಹಿತ್ಯವನ್ನು ಬರೆಯಲು ಈ ರೋಬೋಟ್‌ ಶಕ್ತವಾಗಿದೆ.

ಜಾರ್ಜಿಯಾ ಟೆಕ್‌ ತಂಡದ ಪ್ರಕಾರ, ಶಿಮೊನ್‌ ರೊಬೋಟ್‌ ಮತ್ತು ಮಾನವ ಸಂಗೀತಗಾರರ ನಡುವೆ ಹೆಚ್ಚಿನ ಸಹಯೋಗವನ್ನು ಪ್ರೋತ್ಸಾಹಿಸುವುದು ಇದರ ಉದ್ದೇಶವಾಗಿದೆ. ಇದರಿಂದ ಸಂಗೀತ ಕ್ಷೇತ್ರದಲ್ಲಿ ಅನನ್ಯ ಕ್ರಾಂತಿ ಸಾಧ್ಯವೆಂದು ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next