Advertisement

ಶಿವಮೊಗ್ಗ: ಗಾಂಜಾ ಮತ್ತಿನಲ್ಲಿ ವಾಹನಗಳನ್ನು ಜಖಂಗೊಳಿಸಿದ ಕಿಡಿಗೇಡಿಗಳು

09:56 AM May 20, 2021 | Team Udayavani |

ಶಿವಮೊಗ್ಗ: ನಗರದಲ್ಲಿ ಮತ್ತೆ ಕಿಡಿಗೇಡಿಗಳ ಹಾವಳಿ ಮುಂದುವರಿದಿದ್ದು ಗಾಂಜಾ ಮತ್ತಿನಲ್ಲಿ, ಮನೆಯ ಎದುರು ನಿಲ್ಲಿಸಿದ್ದ ಕಾರು, ಬೈಕ್ ಹಾಗೂ ಆಟೋಗಳನ್ನು ಜಖಂಗೊಳಿಸಿದ್ದಾರೆ.

Advertisement

ಶಿವಮೊಗ್ಗ ನಗರದ ಸಿದ್ದಯ್ಯ ರಸ್ತೆ ಹಾಗೂ ಎಂಕೆಕೆ ರಸ್ತೆಯಲ್ಲಿ ನಿನ್ನೆ ತಡರಾತ್ರಿ ನಡೆದ ಘಟನೆ ನಡೆದಿದ್ದು, 11 ಕಾರುಗಳು, 10ಕ್ಕೂ ಹೆಚ್ಚು ಬೈಕ್ ಗಳು ಹಾಗೂ ಒಂದು ಆಟೋ ಜಖಂಗೊಂಡಿವೆ.

ಈ ಹಿಂದೆಯೂ ಇದೆ ರಸ್ತೆಯಲ್ಲಿ ಕಿಡಿಗೇಡಿಗಳು. ವಾಹನಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಇದೀಗ ವಾಹನಗಳ ಗ್ಲಾಸ್ ಒಡೆದು ಜಖಂ ಮಾಡಿದ್ದಾರೆ.

ಇದನ್ನೂ ಓದಿ:  ಚಿಕ್ಕಮಗಳೂರು: ಮೇ 24ರವರೆಗೆ ಕಂಪ್ಲೀಟ್ ಲಾಕ್; ಅಗತ್ಯ ವಸ್ತು ಕೊಳ್ಳಲು ಮುಗಿಬಿದ್ದ ಜನ

Advertisement

ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಭೇಟಿ ನೀಡಿ ಜಖಂಗೊಂಡ ವಾಹನಗಳ ಪರಿಶೀಲನೆ ನಡೆಸಿದ್ದಾರೆ. ಪದೇ ಪದೇ ಈ ರೀತಿಯ ಘಟನೆ ನಡೆಯುತ್ತಿರುವುದಕ್ಕೆ ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಚಿವರು‌, ಕೂಡಲೇ ಘಟನೆಗೆ ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳುವಂತೆ ಎಸ್ ಪಿ‌ ಲಕ್ಷ್ಮೀಪ್ರಸಾದ್ ಅವರಿಗೆ ಸೂಚನೆ ನೀಡಿದರು.

ಇದನ್ನೂ ಓದಿ:  ಜಗತ್ತಿನಾದ್ಯಂತ ಹರಡಿದ್ದಾರೆ ಅಮೆರಿಕ ರಹಸ್ಯ ಸೇನೆ ಸಿಗ್ನೇಚರ್ ರಿಡಕ್ಷನ್ ಪಡೆ ಯೋಧರು

ಇದನ್ನೂ ಓದಿ:  ಜುಲೈ ಅಂತ್ಯಕ್ಕೆ ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ; 6-8 ತಿಂಗಳಲ್ಲಿ ಮೂರನೇ ಅಲೆ

Advertisement

Udayavani is now on Telegram. Click here to join our channel and stay updated with the latest news.

Next