Advertisement

ಗ್ರಾಹಕರ ಮನೆಗೇ ತಾಜಾ ಹಣ್ಣು ಸರಬರಾಜು!

06:30 PM May 07, 2020 | Naveen |

ಶಿವಮೊಗ್ಗ: ಲಾಕ್‌ಡೌನ್‌ ಹಿನ್ನಲೆಯಲ್ಲಿ ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲಾಗದೆ ಸಂಕಷ್ಟದಲ್ಲಿದ್ದ ರೈತರಿಂದಲೇ ತಾವು ಬೆಳೆದ ತಾಜಾ ಹಣ್ಣುಗಳನ್ನು ನೇರವಾಗಿ ಖರೀದಿಸಿ ಶಿವಮೊಗ್ಗ ಹಾಗೂ ಬೆಂಗಳೂರಿನ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವಂತಹ ವಿನೂತನ ಪ್ರಯತ್ನವನ್ನು ಜರ್ಮನಿಯ ರೂಡ್ಸ್‌ ಗೂಡ್ಸ್‌ ಕಂಪನಿ ಪ್ರಾರಂಭಿಸಿದೆ.

Advertisement

ಈ ಕಂಪನಿಯು ಕೋವಿಡ್‌-19 ಅಗ್ರಿ ವಾರ್‌ ರೂಮ್‌ನ ಸಕ್ರಿಯ ಭಾಗವಾಗಿದ್ದು ಆತಂಕದಲ್ಲಿರುವ ರೈತರಿಗಾಗಿ ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ಹಾಗೂ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ ವತಿಯಿಂದ ರಾಜ್ಯದ ಇತರೆ ಭಾಗಗಳ ರೈತರಿಂದ ನೇರವಾಗಿ ತರಕಾರಿ ಹಣ್ಣುಗಳನ್ನು ಖರೀದಿಸಿ ಶಿವಮೊಗ್ಗ ಹಾಗೂ ಬೆಂಗಳೂರು ನಗರದ ಜನರ ಮನೆ ಬಾಗಿಲಿಗೆ ಉತ್ತಮ ಬೆಲೆಗೆ ಅನಾನಸ್‌, ಕಲ್ಲಂಗಡಿ, ದ್ರಾಕ್ಷಿಹಣ್ಣುಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಮೂಲಕ ರೈತರು ಹಾಗೂ ಗ್ರಾಹಕರ ನಡುವೆ ಕೊಂಡಿಯಾಗಿ ರೂಟ್ಸ್‌ ಗೂಡ್ಸ್‌ ಕಂಪನಿಯ ಯುವಕರು ಕಾರ್ಯ ನಿರ್ವಹಿಸುತ್ತಿದ್ದು ಶಿವಮೊಗ್ಗ ಜನರ ಮೆಚ್ಚುಗೆಗೆ ಪ್ರಾತ್ರರಾಗಿದ್ದಾರೆ.

ಶಿವಮೊಗ್ಗದ ಸಚಿನ್‌ ಹೆಗ್ಡೆಕುಡ್ಗಿ ಅವರು ಪ್ರಾರಂಭಿಸಿದ ರೂಟ್ಸ್‌ ಗೂಡ್ಸ್‌ ಕಂಪನಿಯು ಒಂದು ಸಂವಾದಾತ್ಮಕ, ಅತ್ಯಾಧುನಿಕ ತಂತ್ರಜ್ಞಾನ ಸ್ವಾಮ್ಯದ ಸಾಫ್ಟವೇರ್‌ ಮತ್ತು ಹಾರ್ಡವೇರ್‌ ಪರಿಕರಗಳನ್ನು ಹೊಂದಿದ ವೇದಿಕೆಯಾಗಿದ್ದು, ರೈತರು ತಮ್ಮ ಸರಕುಗಳನ್ನು ಸಾಕಣಿಕೆ ಕೇಂದ್ರಗಳಿಂದ ನೇರವಾಗಿ ಸಗಟು ಖರೀದಿದಾರರ ವಿಳಾಸಕ್ಕೆ ತಲುಪಿಸಲು, ಉತ್ತಮ ಬೆಲೆಗೆ ಮಾರಾಟ ಮಾಡಲು ರೂಟ್ಸ್‌ ಗೂಡ್ಸ್
ಕಂಪನಿಯು ಪೂರಕವಾಗಿ ನಿಲ್ಲಲಿದೆ. ಈ ಮೂಲಕ ಪಾರದರ್ಶಕ ಮತ್ತು ಅಗತ್ಯ ಮಾಹಿತಿಯೊಂದಿಗೆ ಕೃಷಿ ಸಮುದಾಯದವನ್ನು ಬಲಪಡಿಸಲು, ರೈತರು ಮತ್ತು ಖರೀದಿದಾರರಿಗೆ ಉತ್ತಮ ಬೆಲೆಯೊಂದಿಗೆ ವಹಿವಾಟು ನಡೆಸಲು, ಹವಾಮಾನ ಹಾಗೂ ಮಣ್ಣಿನ ನಿರ್ವಹಣೆಯ ಉಚಿತ ಸೇವೆಗಳನ್ನು ಕೃಷಿಕರ ಒದಗಿಸುವ ಕಾರ್ಯವನ್ನು ಈ ಕಂಪನಿಯ ಯುವಕರು ಮಾಡುತ್ತಿದ್ದಾರೆ. ಭಾರತದಲ್ಲಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದ್ದು ವಿಶ್ವವಿದ್ಯಾಲಯದ ಆವರಣದಲ್ಲಿ ಹಾಗೂ ಶಿವಮೊಗ್ಗದ ಜೆ.ಎನ್‌.ಎನ್‌ .ಸಿ. ಇಂಜಿನಿಯರಿಂಗ್‌ ಕಾಲೇಜಿನ ಆವರಣದಲ್ಲಿ ಕಂಪನಿಯ ಕಚೇರಿಯನ್ನು ತೆರೆಯಲಾಗಿದೆ. ರೈತ ಸಂಘದ ಮುಖಂಡರು ಈ ಕಂಪನಿಯ ಗೌರವ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದಾರೆ. ಇಂತಹ ಮೂಲ ಆಶಯದೊಂದಿಗೆ ರೂಪಗೊಂಡ ರೂಟ್ಸ್‌ ಗೂಡ್ಸ್‌ ಕಂಪನಿಯು ಶಿವಮೊಗ್ಗ ನಗರದ ಗ್ರಾಹಕರಿಗೆ ಅಗತ್ಯ ತಾಜಾ ಹಣ್ಣುಗಳನ್ನು ಸರಬರಾಜು ಮಾಡುತ್ತಿದ್ದು ಆಸಕ್ತ ಗ್ರಾಹಕರು ಮೊ: 94830049626 ಸಂಪರ್ಕಿಸಬಹುದಾಗಿದೆ ಎಂದು ರೂಟ್ಸ್‌ ಗೂಡ್ಸ್‌ ಕಂಪನಿಯ ನಿರ್ದೇಶಕರಾದ ಸಚಿನ್‌ ಹೆಗ್ಡೆಕುಡ್ಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next