Advertisement

ಕವಲೇದುರ್ಗದಲ್ಲಿ ನೀರುಗಾವಲು

12:09 PM Apr 01, 2017 | |

ಶಿವಮೊಗ್ಗದ ತೀರ್ಥಹಳ್ಳಿಯಿಂದ 10 ಕಿಮೀ ದೂರದಲ್ಲಿರುವ ಆಗುಂಬೆ ರಸ್ತೆಯ ಮೂಲಕ ಸಾಗಿದಾಗ ಸಿಗುವ ಕೌಳಿ ಗ್ರಾಮದಲ್ಲಿ ಕವಲೇದುರ್ಗವಿದೆ. ಇತಿಹಾಸ ಪ್ರಸಿದ್ಧ ಕೋಟೆಯ ಮೂಲ ಹೆಸರು ‘ಕೌಲೆದುರ್ಗ’ ಎಂದಾಗಿತ್ತು. ಇದನ್ನು ವಿಜಯನಗರ ಅರಸರ ಸಾಮಂತರಾಗಿದ್ದು ನಂತರದಲ್ಲಿ ಸ್ವತಂತ್ರವಾದ ಕೆಳದಿ ನಾಯಕರ ಗಿರಿದುರ್ಗವಾಗಿದ್ದು, ವೆಂಕಟಪ್ಪ ನಾಯಕನು ಈ ಕೋಟೆಯನ್ನು ನಿರ್ಮಿಸಿದ್ದು. ಕವಲೆದುರ್ಗಕೋಟೆಯು ಸಮುದ್ರ ಮಟ್ಟಕ್ಕಿಂತ ಸುಮಾರು 1,541 ಮೀಟರ್‌ ಎತ್ತರದಲ್ಲಿದೆ. ನೈಸರ್ಗಿಕವಾಗಿಯೇ ಇರುವ ಕೋಟೆಯ ರೂಪುರೇಷೆಗೆ ಅನುಗುಣವಾಗಿ ಬೃಹತ್‌ ಕಣಶಿಲೆಯ ಕಲ್ಲುಗಳಿಂದ ನಿರ್ಮಿಸಲಾದ ಈ ಏಳು ಸುತ್ತಿನ ಕೋಟೆಯ ಇದೆ. ಈ ಕೋಟೆಯ ತುತ್ತತುದಿುಂದ ಪಶ್ಚಿಮ ಘಟ್ಟದ ರಮಣೀಯ ದೃಶ್ಯವನ್ನು, ವಾರಾಹಿ ಮತು ¤ಚಕ್ರನದಿಯ ವಿಹಂಗಮ ನೋಟವನ್ನು ಕಾಣಬಹುದಾಗಿದೆ.

Advertisement

ಈ ಕೋಟೆಯ ಪ್ರಮುಖ ಆಯಕಟ್ಟಿನ ಪ್ರದೇಶಗಳಲ್ಲಿ ವರ್ಷಪೂರ್ತಿ ಶುದ್ಧಕುಡಿಯುವ ನೀರು ದೊರೆಯುತ್ತದೆ. ಕೋಟೆಯ ಪ್ರದೇಶದಲ್ಲಿ ಗಧಾತೀರ್ಥವೆಂಬ ಹೆಸರಿನ ಎರಡು ಸಣ್ಣ ಬಾವಿಗಳಿದ್ದು ಇದು ಮಹಾಭಾರತದ ಕಾಲದಲ್ಲಿ ಭೀಮನು ತನ್ನ ಗದೆಯನ್ನು ಬಂಡೆಕಲ್ಲಿಗೆ ಹೊಡೆದಾಗ ಸೃಷ್ಟಿಯಾದವು ಎಂದು ಹೇಳಲಾಗಿದೆ. ಕೋಟೆಯ ಇನ್ನೊಂದು ಭಾಗದಲ್ಲಿ ಭದ್ರವಾದ ದಾಸ್ತಾನು ಕೊಠಡಿ ಇದೆ. ಇದರಲ್ಲಿ ಬಂದೂಕುಗಳು ಮತ್ತು ಸಿಡಿಮದ್ದು ಗುಂಡುಗಳನ್ನು ಶೇಖರಿಸಿಡಲಾಗುತ್ತಿದ್ದು ಇದನ್ನು’ತುಫಾಕಿ ಬುರುಜು’ಎಂದುಕರೆಯಲಾಗುತ್ತಿತ್ತು.

ಈ ಕೋಟೆಯೊಳಗೆ ಒಟ್ಟು ಏಳು ಕೆರೆಗಳಿವೆ. ಇವುಗಳು ಸದಾ ಕಾಲ ನೀರಿನಿಂದ ತುಂಬಿರುತ್ತವೆ. ಆದರೆ ಇಂದು ಕೆರೆಗಳು ಉಪಯೋಗಕ್ಕೆಯೋಗ್ಯವಾಗಿಲ್ಲದೆ ಹೂಳಿನಿಂದ ಮತ್ತು ಕೊಚ್ಚೆಯಾಗಿರುವುದು ದುರಂತವೇ ಸರಿ. ಈ ಕೋಟೆಯೋಳಗೆ ಮಳೆ ನೀರಿನಕೊಯ್ಲು ಪದ್ಧತಿಯನ್ನು ಆಗಿನ ಕಾಲದಲ್ಲಿಯೇ ಅಳವಡಿಸಿರುವುದು ಅಂದಿನ ಕಾಲದಜನರ ಪರಿಸರ ಸಂರಕ್ಷಣೆಯ ಚಿಂತನೆಗೆ ಹಿಡಿದ  ಗನ್ನಡಿಯಾಗಿದೆ.

ಕೋಟೆಯ ವ್ಯಾಪ್ತಿಯಲ್ಲಿ ಬೀಳುವ ಮಳೆ ನೀರೆಲ್ಲವೂ ಅಲ್ಲಲ್ಲೇ ರಚಿಸಲಾದ ಕಾಲುವೆಯ ಮೂಲಕ ಈ ಸಪ್ತ ಕೆರೆಗಳಿಗೆ ಸೇರುವಂತೆರಚನೆ ಮಾಡಿದ್ದಾರೆ. ಇದೇ ಇಲ್ಲಿನ ವಿಶೇಷತೆಯಾಗಿದೆ.

ಕೋಟೆಯ ತುದಿಯಿಂದ ಹಿಡಿದು ಕೆಳ ಭಾಗವರೆಗೂ ಅಚ್ಚುಕಟ್ಟಾಗಿ ಕಾಲುವೆಗಳನ್ನು ನಿರ್ಮಿಸಿ ಆ ಕಾಲುವೆಗಳು ಅಲ್ಲಲ್ಲಿ ಇರುವ ಕೆರೆಗಳಿಗೆ ಜೋಡಣೆಯಾಗಿರುವುದನ್ನು ಇಂದಿಗೂ ಗಮನಿಸಬಹುದಾಗಿದೆ. ಸಣ್ಣ ಸಣ್ಣ ಕೆರೆಗಳಲ್ಲಿ ಸಂಗ್ರಹವಾಗುವ ನೀರು ಹೆಚ್ಚುವರಿಯಾಗಿ ಹರಿದು ಮಣ್ಣಿನಡಿಯಲ್ಲಿ ನಿರ್ಮಿಸಲಾದ ಕಾಲುವೆಗಳ ಮೂಲಕ ಕೋಟೆಯ ತಳಭಾಗದಲ್ಲಿರುವ ದೊಡ್ಡಕೆರೆಗೆ ಸೇರುವಂತೆ ಅತ್ಯಾಧುನಿಕವಾಗಿ ಆಗಿನ ಕಾಲದಲ್ಲಿಯೇ ನಿರ್ಮಿಸಿದ್ದರು. ಇಲ್ಲಿ ಸಂಗ್ರಹವಾದ ಅಷ್ಟೂ ನೀರುನೇರವಾಗಿ ಕೊಟೆಯ ಹೊರಭಾಗದ ಹಳ್ಳಿಯಲ್ಲಿ ಕಂಡು ಬರುವ ಅತ್ಯಂತದೊಡ್ಡ ‘ತಿಮ್ಮರಸ ನಾಯಕನ ಕೆರೆಗೆ’ ಸೇರುವಂತೆ ಮಾಡಲಾಗಿದೆ. ಈ ಕೋಟೆಯ ಶೃಂಗದಲ್ಲಿ ನಿಂತುಕೋಟೆಯ ಸುತ್ತ ನೋಡಿದಾಗ ಪಶ್ಚಿಮದ ದಿಕ್ಕಿನಲ್ಲಿ ವರಾ ಅಣೆಕಟ್ಟು ಮತ್ತು ಅದರ ಹಿನ್ನೀರು ಪ್ರದೇಶವನ್ನೂ, ದಕ್ಷಿಣದ ದಿಕ್ಕಿನಲ್ಲಿ ಕುಂದಾದ್ರಿ ಪರ್ವತ ಮತ್ತು ಸುತ್ತಮುತ್ತಲಿನ ದಟ್ಟಕಾನನವನ್ನು ಕಣ್ತುಂಬಿಕೊಳ್ಳಬಹುದು. ಉತ್ತರ ದಿಕ್ಕಿನ ದಿಗಂತದೆಡೆಗೆ ಕಣ್ಣು ಹಾಯಿಸಿದಾಗ ಕೊಡಚಾದ್ರಿ ಪರ್ವತದ ದೃಶ್ಯವೂ ಅಸ್ಪಷ್ಟವಾಗಿಕಾಣುತ್ತದೆ. ಇಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತದ ದೃಶ್ಯಗಳನ್ನಂತೂ ಬಹಳಷ್ಟು ರಂಜನೀಯವಾಗಿದ್ದು, ವಿವಿಧ ಕೋನಗಳಲ್ಲಿ ಅವುಗಳನ್ನು ಚಿತ್ರೀಕರಿಸಿಕೊಳ್ಳಬಹುದು.

Advertisement

ಇಲ್ಲಿನ ತಳಭಾಗದಲ್ಲಿ ವೀರಶೈವ ಮಠವೊಂದಿದ್ದು ಇದನ್ನು ಕೆಳದಿಯ ರಾಜರು ಪೋಸುತ್ತಿದ್ದರೆಂದು ತಿಳಿದು ಬರುತ್ತದೆ. ಭಕ್ತಾಧಿಗಳಿಗೆ ಇಲ್ಲಿ ನಿತ್ಯಅನ್ನ ಸಂತರ್ಪಣೆಯೂ ನಡೆಯುತ್ತಿತ್ತೆಂದು ಹೇಳಲಾಗುತ್ತದೆ.ಈ ಕೋಟೆಯನ್ನು ಭಾರತ ಸರ್ಕಾರದ ಪುರಾತತ್ವಇಲಾಖೆಯುತನ್ನ ಸುಪರ್ದಿಗೆ ತೆಗೆದುಕೊಂಡಿದ್ದು ಈ ಕೋಟೆಯ ಪರಂಪರೆಯನ್ನು ಮತ್ತೆ ಹಳೆಯ ವೈಭವಕ್ಕೆತರಲು ಪ್ರಯತ್ನಿಸುತ್ತಿದೆ.

 ಸಂತೋಷ್‌ರಾವ್‌ ಪೆರ್ಮುಡ

Advertisement

Udayavani is now on Telegram. Click here to join our channel and stay updated with the latest news.

Next