Advertisement

ಸಮಾಜಕ್ಕೆ ಸೇವಾಲಾಲ ಕೊಡುಗೆ ಅಪಾರ: ಆಯನೂರು

12:02 PM Feb 17, 2020 | Naveen |

ಶಿವಮೊಗ್ಗ: ಬಾಲಬ್ರಹ್ಮಚಾರಿಯಾಗಿ ಧ್ಯಾನ, ತಪಸ್ಸು ಭಕ್ತಿ ಮೂಲಕ ಆಧ್ಯಾತ್ಮವನ್ನು ಅಪ್ಪಿಕೊಂಡು ದೇವರನ್ನು ಒಲಿಸಿಕೊಂಡು ತಮ್ಮ ಜನಾಂಗದ ಸೇವೆ ಮಾಡಿದ ಮಹಾನ್‌ ಚಿಂತಕರು ಶ್ರೀ ಸೇವಾಲಾಲರು ಎಂದು ವಿಧಾನ ಪರಿಷತ್‌ ಶಾಸಕ ಆಯನೂರು ಮಂಜುನಾಥ್‌
ಹೇಳಿದರು.

Advertisement

ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾ ಬಂಜಾರ ಸಂಘದ ವತಿಯಿಂದ ಸಂತ ಶ್ರೀ ಸೇವಾಲಾಲ್‌ ರ 281ನೇ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು. ಬಾಲ್ಯದಿಂದಲೂ ತಾಂಡಾಗಳ ಒಡನಾಟದಲ್ಲಿ ನಾನು ಬೆಳೆದಿದ್ದು ಭಿಕ್ಷೆ ಬೇಡದೆ ಇರುವ ಏಕೈಕ ಸಮುದಾಯ ಅಂದರೆ ಅದು ಲಂಬಾಣಿ ಸಮುದಾಯ. ಕೆಲ ವ್ಯಕ್ತಿಗಳು ಹುಟ್ಟಿದ ನಂತರ ಕವಿಗಳಾಗುತ್ತಾರೆ. ಆದರೆ ಕವಿಗಳನ್ನೇ ತನ್ನ ಸಮುದಾಯದಲ್ಲಿ ಹುಟ್ಟು ಹಾಕುವ ಏಕೈಕ ಸಮಾಜ ಅದು ಲಂಬಾಣಿ ಸಮಾಜ ಎಂದರು.

ಸೇವಾಲಾಲರ ಪೂರ್ವಜರು ಉತ್ತರ ಭಾರತದಿಂದ ವಲಸೆ ಬಂದವರು. ರಾಣಾ ಪ್ರತಾಪನ ಮರಣಾ ನಂತರ ಕಾಡುವಾಸಿಗಳಾಗಿದ್ದ ಬಣಜಾರರು ಮೊಘಲರ ಸೈನ್ಯಗಳೊಂದಿಗೆ ದಕ್ಷಿಣಕ್ಕೆ ಬಂದರು. ಕಾಲಗತಿಯಲ್ಲಿ ಹತ್ತಾರು ವರ್ಷದವರೆಗೆ ಮರಿಯಮ್ಮನ ಸೇವೆಗೆ ತೊಡಗಿಸಿಕೊಂಡು ಸೇವಾಲಾಲರು ಮಹಾನ್‌ ಸಾಧಕರಾಗಿ ಮೆರೆದರು. ಇಂದು ಸಂತ ಸೇವಾಲಾಲ್‌ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಜನನವಾಗಿದ್ದು ಇವತ್ತಿಗೂ ಲಕ್ಷಾಂತರ ಭಕ್ತರು ಸೇರುವ ಮೂಲಕ ಬಣಜಾರ್‌ ಸಂಸ್ಕೃತಿ ಕಲೆ ಸಾಹಿತ್ಯದಲ್ಲಿ ಎಲ್ಲರಿಗಿಂತ ವಿಭಿನ್ನವಾಗಿ ಗುರುತಿಸಿಕೊಂಡಿದೆ ಎಂದು ತೀರ್ಥಹಳ್ಳಿ ತಾಲೂಕಿನ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ವಿಶೇಷ ಉಪನ್ಯಾಸದಲ್ಲಿ ಹೇಳಿದರು.

ಜಿಲ್ಲೆಯ ವಿವಿಧೆಡೆಯಿಂದ ಅನೇಕ ಲಂಬಾಣಿ ಕಲಾತಂಡಗಳು ಆಗಮಿಸಿ ಲಂಬಾಣಿ ಸಂಸ್ಕೃತಿಯ ನೃತ್ಯ, ಗಾಯನಗಳನ್ನ ಬಿಂಬಿಸಿದವು. ಇದೇ ವೇಳೆ ಸಾಧಕರಾದ ಅಭಿಷೇಕ್‌ ಕೆ.ಎ.ಎಸ್‌, ಉಪ ವಿಭಾಗ ಅಧಿ ಕಾರಿ, ದ್ವಾರಿಕಾ ಕೆ. ನಾಯ್ಕ ಕೆ.ಎ.ಎಸ್‌, ಡಿ.ವೈ.ಎಸ್‌.ಪಿ. ಚೈತ್ರ ಟಿ. ನಾಯ್ಕ, ತಹಶೀಲ್ದಾರ್‌ ಮೋತಿನಾಯ್ಕ ಅಂತಾರಾಷ್ಟ್ರೀಯ ಈಜು ಸ್ಪರ್ಧೆ, ಪತ್ರಕರ್ತ ನಾಗೇಶ ನಾಯಕ್‌ , ನಾಗರಾಜ ನಾಯ್ಕ ಪಿ.ಎಚ್‌.ಡಿ ಪದವಿಧರ, ಜಗದೀಶ ಮಲವಗೊಪ್ಪ ಅವರನ್ನು ಸನ್ಮಾನಿಸಲಾಯಿತು. ತಿರುಮಲೇಶ್‌ ಎಲ್‌. ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು. ಜಿಪಂ ಉಪಾಧ್ಯಕ್ಷೆ ವೇದ ವಿಜಯ್‌ಕುಮಾರ್‌, ಉಪ ಮಹಾಪೌರರಾದ ಸುರೇಖಾ
ಮುರಳೀಧರ್‌, ಜಿಲ್ಲಾ ಬಣಜಾರ್‌ ಸಂಘದ ಅಧ್ಯಕ್ಷ ಕುಮಾರ್‌ನಾಯ್ಕ, ಜಿಲ್ಲಾ ಬಣಜಾರ ಸಂಘದ ಕಾರ್ಯದರ್ಶಿ ಜಗದೀಶ್‌ ಆರ್‌., ಅಪರ ಜಿಲ್ಲಾ ಧಿಕಾರಿ ಅನುರಾಧಾ, ಸರ್ಧಾರ್‌ ಸೇವಾಲಾಲ್‌ ಸ್ವಾಮೀಜಿ ಚಿತ್ರದುರ್ಗ ಮಠ, ಸನ ಭಗತ್‌ ಸಾಲೂರು ಮಠ, ಜಿಲ್ಲಾ ಸಹಾಯಕ ವರಿಷ್ಠಾಧಿಕಾರಿ ಶೇಖರ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next