Advertisement
ಸೋಮವಾರ ಮಧ್ಯಾಹ್ನ 1.15ಕ್ಕೆ ವಿಶೇಷ ವಿಮಾನದ ಮೂಲಕ ಆಗಮಿಸುವ ಪ್ರಧಾನಿ ಅವರು 40 ಎಕರೆ ವಿಸ್ತೀರ್ಣವಿರುವ ನಗರದ ಅಲ್ಲಮಪ್ರಭು ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗ ವಹಿಸಲಿದ್ದಾರೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ, ಆರಗ ಜ್ಞಾನೇಂದ್ರ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಉಡುಪಿ- ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಯ ಅಭ್ಯರ್ಥಿಗಳು ಮೋದಿ ಜತೆ ವೇದಿಕೆ ಹಂಚಿಕೊಳ್ಳಲಿದ್ದಾರೆ.
Related Articles
ಪ್ರಧಾನಿ ಮೋದಿ ಸಂಚರಿಸುವ ರಸ್ತೆಯ ಸ್ವತ್ಛತೆ, ಗುಂಡಿ ಮುಚ್ಚುವ ಕಾರ್ಯ ಕೈಗೊಳ್ಳಲಾಗಿದ್ದು, ಅವೈಜ್ಞಾನಿಕ ಹಂಪ್ ಗಳನ್ನು ತೆರವು ಮಾಡಲಾಗಿದೆ. ಮೋದಿ ಸಂಚರಿಸುವ ಮಾರ್ಗವನ್ನು 3 ತಾಸು ಕಾಲ ಬಂದ್ ಮಾಡಲಾಗುತ್ತಿದೆ. 12.30ರೊಳಗೆ ಎಲ್ಲ ಕಾರ್ಯಕರ್ತರು ಕಾರ್ಯಕ್ರಮದ ಸ್ಥಳದಲ್ಲಿ ಸೇರಿಕೊಳ್ಳಲು ಸೂಚನೆ ನೀಡಲಾಗಿದೆ. ಬೇರೆ ಜಿಲ್ಲೆಗಳಿಂದ ಬರುವವರಿಗೆ ಬಿ.ಎಚ್. ರಸ್ತೆಯ ಸೈನ್ಸ್ ಮೈದಾನ, ಎಪಿಎಂಸಿ ಯಾರ್ಡ್, ಬೊಮ್ಮನಕಟ್ಟೆ ಭಾಗದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಭದ್ರತೆಗೆ ಮೂವರು ಎಸ್‌ಪಿ, ಐವರು ಎಎಸ್‌ಪಿ, 19 ಡಿವೈಎಸ್‌ಪಿ, 64 ಸಿಪಿಐ, 156 ಪಿಎಸ್‌ಐ ಹಾಗೂ ಒಂದು ಸಾವಿರ ಪೊಲೀಸ್ ಸಿಬಂದಿ ನಿಯೋಜಿಸಲಾಗಿದೆ.
Advertisement
ಬಂಡಾಯದ ಬಿಸಿಪ್ರಧಾನಿ ಮೋದಿ ಆಗಮಿಸುತ್ತಿದ್ದರೂ ಪಕ್ಷೇತರವಾಗಿ ಸ್ಪರ್ಧಿಸುವೆ ಎಂದಿರುವ ಕೆ.ಎಸ್. ಈಶ್ವರಪ್ಪ ನಿರ್ಧಾರ ರಾಜ್ಯ ನಾಯಕರಿಗೆ ಬಿಸಿತುಪ್ಪವಾಗಿದೆ. ಅವರು ಸಂಧಾನಕ್ಕೆ ಬಗ್ಗುತ್ತಿಲ್ಲ. ರಾಜ್ಯ, ರಾಷ್ಟ್ರ ಮಟ್ಟದ ನಾಯಕರೇ ಬಂದರೂ ತಮ್ಮ ನಿಲುವಿನಿಂದ ಹಿಂದೆ ಸರಿದಿಲ್ಲ. ಇದು ಚುನಾವಣೆಯ ವೇಳೆ ಪಕ್ಷಕ್ಕೆ ಹಾನಿ ತರುವ ಆತಂಕದಲ್ಲಿ ನಾಯಕರಿದ್ದಾರೆ. ಮೋದಿ ಆಗಮನದ ಒಳಗೆ ಈಶ್ವರಪ್ಪ ಮುನಿಸು ಶಮನವಾಗುವುದೇ ಎಂದು ಕಾದು ನೋಡಬೇಕಿದೆ.