Advertisement

ವಾಸ್ತವ –ಭ್ರಮೆಯ ನಡುವಿನ ಸಂಘರ್ಷ: ದತ್ತ

01:06 AM Apr 21, 2019 | Sriram |

ಬೈಂದೂರು: ಬಿಜೆಪಿಯು ಜನರನ್ನು ಮರುಳು ಮಾಡುವ ತಂತ್ರ ಅನುಸರಿಸುತ್ತಿದ್ದು,ಒಂದು ರೀತಿಯ ಭ್ರಮೆ ಲೋಕವನ್ನು ಸೃಷ್ಟಿಸಿದೆ.ಜನರ ಸಂಕಷ್ಟಗಳಿಗೆ ಸ್ಪಂದಿಸದ ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ. ಈ ಚುನಾವಣೆ ವಾಸ್ತವ ಮತ್ತು ಭ್ರಮೆಯ ನಡುವಿನ ಸಂಘರ್ಷ ಎಂದು ಜೆಡಿಎಸ್‌ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್‌.ವಿ. ದತ್ತ ಹೇಳಿದರು.

Advertisement

ಅವರು ಬೈಂದೂರು ಕಾಂಗ್ರೆಸ್‌ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಮೋದಿಯಿಂದ ಈ ದೇಶದ ಉದ್ಧಾರವಾಗಿಲ್ಲ. ಅವರು ಸೈನಿಕರ ಪರಿಶ್ರಮವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. 10 ಕೋಟಿ ಜನರಿಗೆ ಉದ್ಯೋಗ ನೀಡುವ ಭರವಸೆ ಮಾತ್ರ ನೀಡಿದ್ದಾರೆ.

ಉದ್ಯೋಗ ಕೇಳಿದವರಿಗೆ ಪಕೋಡಾ ಮಾರಾಟ ಮಾಡಿ ಎಂದಿದ್ದಾರೆ ಎಂದು ವ್ಯಂಗ್ಯವಾಡಿದರು.
ವಿಸ್ತಾರಕರಲ್ಲ, ವಿತರಕರುಬಿಜೆಪಿಯಲ್ಲಿ ತಳಮಟ್ಟದ ಕಾರ್ಯಕರ್ತರಿರುವುದು ಸತ್ಯ. ಅವರಲ್ಲಿ ವಿಸ್ತಾರಕ ಎನ್ನುವ ಜವಾಬ್ದಾರಿಯ ಹುದ್ದೆ ಇದೆ. ಆದರೆ ಅವರು ಕೇವಲ ವಿಸ್ತಾರಕರು ಮಾತ್ರ ಅಲ್ಲ ಉತ್ತಮ ವಿತರಕರೂ ಹೌದು; ಚುನಾವಣೆ ಸಮಯದಲ್ಲಿ ಯಾರ್ಯಾರಿಗೆ ಏನನ್ನು ಹಾಗೂ ಎಷ್ಟನ್ನು ತಲುಪಿಸಬೇಕು ಎನ್ನುವ ಜವಾಬ್ದಾರಿ ನಿರ್ವಹಿಸುತ್ತಾರೆ ಎಂದರು.

ಮೀನುಗಾರರ ನಾಪತ್ತೆ ಗೌಪ್ಯ!
5 ವರ್ಷಗಳಲ್ಲಿ ಕೇಂದ್ರ ಸರಕಾರ ಮೀನುಗಾರರನ್ನು ಸಂಪೂರ್ಣ ನಿರ್ಲಕ್ಷಿಸಿದೆ. 4 ಜನ ಸಂಸದರು
ಮೀನುಗಾರರ ಬಗ್ಗೆ ಧ್ವನಿಯೇ ಎತ್ತಿಲ್ಲ. ರಾಜ್ಯದಿಂದ ಡೀಸೆಲ್‌ ಸೆಬ್ಸಿಡಿ, ಸೀಮೆಎಣ್ಣೆ ಸಬ್ಸಿಡಿ ನೀಡು
ತ್ತಿದ್ದಾರೆ. ಆದರೆ ಕೇಂದ್ರದಿಂದ ಚಿಕ್ಕಾಸೂ ಇಲ್ಲ.ಡಿ. 13ರಂದು 7 ಜನ ಮೀನುಗಾರರು ನಾಪತ್ತೆ ಯಾಗಿದ್ದಾರೆ. ನೌಕಾಪಡೆಯ ಹಡಗು ಇದಕ್ಕೆ ಕಾರಣ ಎಂಬ ಸಂಶಯವಿದೆ. ಕೇಂದ್ರ ಸರಕಾರ ಚುನಾವಣೆಯ ಉದ್ದೇಶದಿಂದ ಇದನ್ನು ಗೌಪ್ಯವಾಗಿರಿಸಿದೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಆರೋಪಿಸಿದರು.

ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಈಗಿನ ಶಾಸಕರು ಇದ್ದಾರಾ, ಇಲ್ಲವೋ ಎಂದೇ ಜನರಿಗೆ ತಿಳಿದಿಲ್ಲ. ನನ್ನ ಅವಧಿಯಲ್ಲಿ ಮಾಡಿದ ಗುದ್ದಲಿ ಪೂಜೆಗಳನ್ನು ಮತ್ತೆ ಮಾಡುತ್ತಿದ್ದಾರೆ. 5 ನದಿ ಜೋಡಣೆ, ವಿಮಾನ ನಿಲ್ದಾಣ ಇನ್ಯಾವ ಕಾಲದಲ್ಲಿ ಬರಲಿ ದೆಯೋ ಎಂದು ವ್ಯಂಗ್ಯ ಮಾಡಿದರು.

Advertisement

ಮುಖಂಡರಾದ ಎಸ್‌. ರಾಜು ಪೂಜಾರಿ, ಹರೀಶ್‌ ಕುಮಾರ್‌, ಅಶೋಕ ಕುಮಾರ್‌ ಕೊಡವೂರು, ಎಂ. ಗಫ‌ೂರ್‌, ಪ್ರಕಾಶ್ಚಂದ್ರ ಶೆಟ್ಟಿ,ಎಸ್‌. ಮದನ್‌ ಕುಮಾರ್‌, ಯೋಗೀಶ್‌ ಶೆಟ್ಟಿ,ಕಿಸಾನ್‌ ಘಟಕದ ಶಶಿಧರ ಶೆಟ್ಟಿ, ನಾಗರಾಜ ಗಾಣಿಗ, ಸಂದೇಶ ಭಟ್‌ ಉಪ್ಪುಂದ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next