Advertisement
ಶನಿವಾರ ಪ್ರಧಾನ ಮಂತ್ರಿ ಜನೌಷಸಪ್ತಾಹದ ಅಂಗವಾಗಿ ನಗರದ ಜಿಲ್ಲಾಡಳಿತ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜನೌಷ ಧ ಮಳಿಗೆಗಳ ಮುಖ್ಯಸ್ಥರು ಹಾಗೂ ಫಲಾನುಭವಿಗಳ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ರಾಷ್ಟ್ರವೊಂದು ಅಭಿವೃದ್ಧಿ ಹೊಂದಬೇಕಾದಲ್ಲಿ ರಾಷ್ಟ್ರದ ಪ್ರಜೆಗಳು ಕೂಡ ಆರೋಗ್ಯವಂತರಾಗಿರುವುದು ಕೂಡ ಮುಖ್ಯವಾದುದು ಎಂದರು.
Related Articles
Advertisement
ಈ ಯೋಜನೆಯಡಿ ಇತ್ತೀಚೆಗೆ ಅಟಲ್ ಜೀ ಜನ್ಮದಿನ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜನ್ಮದಿನಾಚರಣೆ ಸಂದರ್ಭದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜಿಲ್ಲಾಡಳಿತದ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ಉಚಿತ ಆರೋಗ್ಯತಪಾಸಣಾ ಕಾರ್ಯಕ್ರಮದಡಿ ಸುಮಾರು 1.50 ಲಕ್ಷ ಕುಟುಂಬಗಳಿಗೆ ಆಯುಷ್ಮಾನ್ ಕಾರ್ಡ್ ನ್ನು ವಿತರಿಸಲಾಗಿದೆ. ಈ ಕಾರ್ಯಕ್ರಮದಅನುಷ್ಠಾನದಲ್ಲಿ ಸಹಕರಿಸಿದ ಎಲ್ಲರೂ
ಅಭಿನಂದನಾರ್ಹರು ಎಂದರು. ಮುಖ್ಯಮಂತ್ರಿಗಳು ಮಂಡಿಸಿದ ಬಜೆಟ್‌ನಲ್ಲಿ ಜಿಲ್ಲೆಯಲ್ಲಿ ಬುಡಕಟ್ಟು ವೈದ್ಯ ಪದ್ಧತಿ ಕೇಂದ್ರ ಆರಂಭಿಸಲು ಉದ್ದೇಶಿಸಿದೆ. ಅಲ್ಲದೇ ಜಿಲ್ಲೆಯಲ್ಲಿ ಆಯುರ್ವೇದಿಕ್ ವಿಶ್ವವಿದ್ಯಾಲಯ ಆರಂಭಿಸಲು ಬಜೆಟ್‌ನಲ್ಲಿ ಅನುದಾನವನ್ನು ನಿಗ ಪಡಿಸಿದ್ದು, ಅದಕ್ಕಾಗಿ ಸೋಗಾನೆ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಂತೆ ಸ್ಥಳವನ್ನು ಗುರುತಿಸಲಾಗಿದೆ. ಇರುವಕ್ಕಿ ನಿರ್ಮಾಣ ಹಂತದಲ್ಲಿರುವ ಕೃಷಿ ಮತ್ತು ತೋಟಗಾರಿಕೆ ವಿವಿಯ ಚಟುವಟಿಕೆಗಳಿಗೆ 150ಕೋಟಿ. ರೂ., ಜೋಗಫಾಲ್ಸ್ ಪ್ರವಾಸೋದ್ಯಮ ಕಾರ್ಯಕ್ರಮಗಳಿಗೆ ವಿಶೇಷ ಯೋಜನೆ ಹಾಗೂ ಲಯನ್ ಸಫಾರಿ ಅಭಿವೃದ್ಧಿಗೆ 5.00 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ. ಅಲ್ಲದೆ ಮಂಗನ ಕಾಯಿಲೆ ನಿಯಂತ್ರಣಕ್ಕೆ, ರಿಂಗ್ ರೋಡ್ ನಿರ್ಮಾಣ, ತುಮಕೂರು- ಶಿವಮೊಗ್ಗ, ಶಿವಮೊಗ್ಗ- ಚಿತ್ರದುರ್ಗ ಚತುಷ ಥ ರಸ್ತೆ ವಿಸ್ತರಣೆ ಕಾಮಗಾರಿಗಳಿಗೆ ವಿಶೇಷ ಅನುದಾನ ಘೋಷಿಸಿದೆ. ಇದರೊಂದಿಗೆ ಕೊಡಚಾದ್ರಿ- ಕೊಲ್ಲೂರು ನಡುವೆ ಸಂಪರ್ಕ ಕಲ್ಪಿಸಲು ಕೇಬಲ್‌ಕಾರ್ ನಿರ್ಮಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು. ಬಹುಮುಖ್ಯವಾಗಿ ಜಿಲ್ಲೆಯ ನೀರಾವರಿ ಯೋಜನೆಗಳಿಗೆ 1500 ಕೋಟಿ ರೂ.ಗಳನ್ನು
ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಸರ್ವಾಂಗೀಣ ವಿಕಾಸಕ್ಕೆ ಅಗತ್ಯ ಕ್ರಮ ವಹಿಸಲಾಗುವುದು. ಈ ಎಲ್ಲಾ ಅಭಿವೃದ್ಧಿ ಚಟುವಟಿಕೆಗಳಿಗೆ ಅನುದಾನ ಕಾಯ್ದಿರಿಸಿದ ಮುಖ್ಯಮಂತ್ರಿಗಳಿಗೆ ಜಿಲ್ಲೆಯ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಲಾಗುವುದು
ಎಂದರು. ಮೇಯರ್ ಸುವರ್ಣ ಶಂಕರ್, ಉಪಮೇಯರ್ ಸುರೇಖಾ ಮುರಳೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು, ಜಿಪಂ ಮುಖ್ಯ ಕಾರ್ಯ ನಿರ್ವಾಹಕ
ಅಧಿಕಾರಿ ಎಂ.ಎಲ್. ವೈಶಾಲಿ, ಅಪರ ಜಿಲ್ಲಾಧಿಕಾರಿ ಅನುರಾಧಾ ಜಿ. ಮತ್ತಿತರರು ಇದ್ದರು.