Advertisement

ಕೊಟ್ಟಾ ಕಾಯ್ದೆ ಅನುಷ್ಠಾನಕ್ಕೆ ಸಹಕರಿಸಿ

06:23 PM Oct 19, 2019 | Naveen |

ಶಿವಮೊಗ್ಗ: ತಂಬಾಕು ನಿಯಂತ್ರಣ ಕಾಯ್ದೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮತ್ತು ಪೊಲೀಸ್‌ ಇಲಾಖೆಗಳ ಜೊತೆಗೆ ಎಲ್ಲಾ ಇಲಾಖೆಗಳು ಸಹ ಕೈ ಜೋಡಿಸಬೇಕಾದ ಅಗತ್ಯವಿದೆ ಎಂದು ಎರಡನೇ ಜಿಲ್ಲಾ ಸತ್ರ ನ್ಯಾಯಾ ಧೀಶ ಕುಡುವಕ್ಕಲಿಗರ್‌ ಮಹದೇವಪ್ಪ ಗಂಗಪ್ಪ ಹೇಳಿದರು.

Advertisement

ಜಿಲ್ಲಾ ತಂಬಾಕು ನಿಯಂತ್ರಣ ಕೋಶವು ನಗರದ ಐಎಂಎ ಹಾಲ್‌ನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಹಮ್ಮಿಕೊಂಡಿರುವ ಐದು ದಿನಗಳ ತಂಬಾಕು ನಿಯಂತ್ರಣ ಕಾಯ್ದೆಯ ಕುರಿತು ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ ಮತ್ತು ಪೊಲೀಸ್‌ ಇಲಾಖೆಯು ತಂಬಾಕು ಉತ್ಪನ್ನಗಳ ನಿಯಂತ್ರಣದಲ್ಲಿ ಕಾರ್ಯ ಪ್ರವೃತ್ತವಾಗಿದ್ದು ಉಳಿದ ಇಲಾಖೆಗಳು ಸಹ ಕೈ ಜೋಡಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕುಟುಂಬ ಕಲ್ಯಾಣಾ ಧಿಕಾರಿ ಡಾ| ಮಂಜುನಾಥ್‌ ನಾಗಲೀಕರ್‌ ಮಾತನಾಡಿ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಕೋಟ್ಟಾ ಅನುಷ್ಠಾನಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದರು.

ಶಾಲಾ ಅರಿವು ಕಾರ್ಯಕ್ರಮಗಳು, ಅನುಷ್ಠಾನಾಧಿಕಾರಿಗಳಿಗೆ ತರಬೇತಿ ಕಾರ್ಯಾಗಾರಗಳು, ಐಇಸಿ ಚಟುವಟಿಕೆಗಳು ಹಾಗೂ ವ್ಯಸನ ಮುಕ್ತಿ ಕೇಂದ್ರಗಳು ಕೋಟ್ಟಾ ಕಾಯ್ದೆಯ ಪ್ರಮುಖ ಅಂಶಗಳಾಗಿದ್ದು ಕಳೆದ ಮೂರು ವರ್ಷಗಳಲ್ಲಿ 300 ಶಾಲಾ ಕಾರ್ಯಕ್ರಮಗಳು, 100 ಅನುಷ್ಠಾನ ಕಾರ್ಯಾಗಾರಗಳು ಹಾಗೂ 1492 ವ್ಯಸನಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ತುಂಗಾ ನಗರದ ಆಡಳಿತ ವೈದ್ಯಾಧಿಕಾರಿ ಡಾ| ಅಚ್ಯುತ್‌ ತಂಬಾಕು ಉತ್ಪನ್ನಗಳ ದುಷ್ಪರಿಣಾಮದ ಕುರಿತು ಮಾತನಾಡಿದರು. ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ. ಎನ್‌. ಸರಸ್ವತಿ, ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ಹೇಮಂತ್‌ರಾಜ, ವ್ಯಸನ ಮುಕ್ತಿ ಕೇಂದ್ರದ ಆಪ್ತ ಸಮಾಲೋಚಕ ಶಿವಕುಮಾರ್‌ ಎಸ್‌.ಟಿ., ಜಿಲ್ಲಾ ಪೊಲೀಸ್‌ ಅ ಧೀಕ್ಷಕ ಕೆ. ಎಂ. ಶಾಂತರಾಜ್‌ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next