Advertisement
ಇತ್ತೀಚಿನ ವರ್ಷಗಳಲ್ಲಿ ಬದಲಾದ ಆಹಾರ ಕ್ರಮ, ಜೀವನ ಶೈಲಿ, ಒತ್ತಡದ ಕೆಲಸಗಳಿಂದ ಮಧುಮೇಹ ಹದಿಹರೆಯದವರಲ್ಲಿ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ 30 ವರ್ಷ ಮೇಲ್ಪಟ್ಟ ಎಲ್ಲರಿಗೂ ಆರೋಗ್ಯ ತಪಾಸಣೆ ಮಾಡಲು ಸರಕಾರ ಸೂಚನೆ ನೀಡಿತ್ತು. 2011-12ರಿಂದ ಪ್ರಥಮ ಬಾರಿ ಶಿವಮೊಗ್ಗ, ಕೋಲಾರದಲ್ಲಿ ಎನ್‌ಸಿಡಿಎಸ್ ಪೈಲಟ್ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು.
1 ಲಕ್ಷ ಜನರಲ್ಲಿ ಶುಗರ್: 2011-12ರಿಂದ ಇಲ್ಲಿವರೆಗೆ ಶಿವಮೊಗ್ಗದಲ್ಲಿ 22,46,075 ಮಂದಿಯನ್ನು ಡಯಾಬಿಟಿಸ್ ತಪಾಸಣೆಗೆ ಒಳಪಡಿಸಲಾಗಿದ್ದು, ಅದರಲ್ಲಿ 1,08,031 ಮಂದಿಯಲ್ಲಿ ಶುಗರ್
ಲಕ್ಷಣ ಕಂಡುಬಂದಿದೆ. ಅದೇ ರೀತಿ 21,16,562 ಮಂದಿ ರಕ್ತದೊತ್ತಡ ತಪಾಸಣೆಗೆ ಒಳಾಗಿದ್ದು ಅದರಲ್ಲಿ 86,894 ಮಂದಿಯಲ್ಲಿ ರಕ್ತದೊತ್ತಡ ಲಕ್ಷಣಗಳು ಕಂಡುಬಂದಿದೆ. ರೋಗ ಪತ್ತೆಯಾದ
ನಂತರ ಚಿಕಿತ್ಸೆಗೆ ಒಳಗಾಗುವವರ ಪ್ರಮಾಣ ಕಡಿಮೆ ಇದೆ. 2011-12ರಲ್ಲಿ 14,620 ಮಂದಿ ಶುಗರ್. 6305 ಮಂದಿಯಲ್ಲಿ ಬಿಪಿ ಲಕ್ಷಣ
ಕಂಡುಬಂದಿದೆ. 2012-13ರಲ್ಲಿ 21387 ಮಂದಿ ಶುಗರ್, 2187 ಬಿಪಿ, 2013-14ರಲ್ಲಿ 1831 ಮಂದಿ ಡಯಾಬಿಟಿಸ್, 2711 ಮಂದಿಯಲ್ಲಿ
ರಕ್ತದೊತ್ತಡ, 2014-15ರಲ್ಲಿ 4634 ಜನರಲ್ಲಿ ಶುಗರ್, 5322 ಬಿಪಿ, 2015-16ರಲ್ಲಿ 8947 ಶುಗರ್, 8272 ಬಿಪಿ, 2016-17ರಲ್ಲಿ 20153
ಶುಗರ್, 23683 ಬಿಪಿ, 2017-18ರಲ್ಲಿ 20738 ಮಂದಿಯಲ್ಲಿ ಶುಗರ್, 23343 ಬಿಪಿ, 2018-19ರಲ್ಲಿ 15712 ಶುಗರ್, 15071 ರಕ್ತದೊತ್ತಡ ಲಕ್ಷಣ ಕಂಡುಬಂದಿದ್ದು, ಪ್ರಾಥಮಿಕ ಪರೀಕ್ಷೆಯಲ್ಲಿ ರೋಗದ ಲಕ್ಷಣಗಳು ಕಂಡುಬಂದಲ್ಲಿ ಅವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರ, ಇತರೆ ಸರಕಾರಿ ಆಸ್ಪತ್ರೆಗಳಿಗೆ ರೆಫರ್ ಮಾಡಲಾಗುತ್ತದೆ. ಶಿವಮೊಗ್ಗದಲ್ಲಿ 17 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದ್ದು (2011ರ ಜನಗಣತಿ) ಇದರಲ್ಲಿ 697018 ಮಂದಿಯನ್ನು 30 ವರ್ಷ ಮೇಲ್ಪಟ್ಟವರು ಎಂದು ಗುರುತಿಸಲಾಗಿದೆ. ವರ್ಷದಿಂದ ವರ್ಷಕ್ಕೆ
ತಪಾಸಣೆಗೆ ಒಳಗಾಗುವವರ ಪ್ರಮಾಣ ಹೆಚ್ಚಾಗುತ್ತಿದ್ದು 2018-19ರಲ್ಲಿ ಶೇ.98ರಷ್ಟು ಗುರಿ ಮುಟ್ಟಲಾಗಿದೆ. 2017-18ರಲ್ಲಿ ಶೇ.69,
2016-17ರಲ್ಲಿ ಶೇ.53 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಸರಕಾರಿ ಆಸ್ಪತ್ರೆಗೆ ದಾಖಲಾಗುವವರಿಗೆ ಕಡ್ಡಾಯ ತಪಾಸಣೆ, ಜತೆಗೆ ಆರೋಗ್ಯ ಸಹಾಯಕಿಯರು ಮನೆ ಮನೆಗೆ ಭೇಟಿ ನೀಡಿ ತಪಾಸಣೆ ನಡೆಸುತ್ತಿದ್ದಾರೆ.
Related Articles
2018-19ರಲ್ಲಿ ಶೇ.98ಮಂದಿಯನ್ನು ತಪಾಸಣೆಗೆ ಒಳಪಡಿಸಿರುವ ಬಗ್ಗೆ ಸಾರ್ವಜನಿಕರಲ್ಲಿ ಆಕ್ಷೇಪವಿದೆ. 30 ವರ್ಷ ಮೇಲ್ಪಟ್ಟ 6,85,990 ಮಂದಿ ತಪಾಸಣೆಗೆ ಒಳಗಾಗಲು ಸಾಧ್ಯವಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
Advertisement
ಕ್ಯಾನ್ಸರ್ ಕೂಡ ತಪಾಸಣೆಇಷ್ಟು ದಿನ ಶುಗರ್, ಬಿಪಿ ತಪಾಸಣೆ ಮಾಡಲಾಗುತಿತ್ತು. ಎರಡು ವರ್ಷದಿಂದ ಸಾಮಾನ್ಯ ಕ್ಯಾನ್ಸರ್ ತಪಾಸಣೆ (ಓರಲ್, ಬ್ರಿàಸ್ಟ್, ಸರ್ವಿಕಲ್ ಕ್ಯಾನ್ಸರ್) ಮಾಡಲಾಗುತ್ತಿದೆ. 2016-17ರಲ್ಲಿ 223 ಮಂದಿಯಲ್ಲಿ ಸ್ಟ್ರೋಕ್, 233 ಕ್ಯಾನ್ಸರ್, 2017-18ರಲ್ಲಿ 311 ಸ್ಟ್ರೋಕ್, 267 ಕ್ಯಾನ್ಸರ್, 2018-19ರಲ್ಲಿ 225 ಸ್ಟ್ರೋಕ್, 229 ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿವೆ. ಭಾರತದಲ್ಲಿ ಪ್ರಸ್ತುತ ಶೇ.8ರಷ್ಟು ವೃದ್ಧರಿದ್ದು, 2050ರ ವೇಳೆಗೆ
ಶೇ.20ರಷ್ಟಾಗಲಿದೆ. ಇದಕ್ಕೆ ತಕ್ಕಂತೆ ಆರೋಗ್ಯ ಸೇವೆಯೂ ಹೆಚ್ಚಳವಾಗಬೇಕಿದೆ. ಎಲ್ಲ ಸರಕಾರಿ ಆಸ್ಪತ್ರೆಗಳಲ್ಲೂ ಉಚಿತ ಪರೀಕ್ಷೆ ಮಾಡಲಾಗುತ್ತಿದೆ. ಕೆಲವರು ಖಾಸಗಿ ಆಸ್ಪತ್ರೆಗಳಿಗೆ ಭೇಟಿ ಕೊಡುತ್ತಾರೆ. ಸರಕಾರ ಕಡ್ಡಾಯಗೊಳಿಸಿದರೆ ಶೇ.100ರಷ್ಟು ಸಾಧನೆ ಮಾಡಬಹುದು.
ಶಂಕರಪ್ಪ, ಜಿಲ್ಲಾ ಎನ್‌ಸಿಡಿ ಘಟಕ ಶರತ್ ಭದ್ರಾವತಿ