Advertisement

ಶಿವಮೊಗ್ಗ: ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ ಪುತ್ರಿಯರು

05:54 PM Dec 10, 2021 | Team Udayavani |

ಶಿವಮೊಗ್ಗ: ಮೂವರು ಪುತ್ರಿಯರು ತಮ್ಮ ತಂದೆಯ ಅಂತ್ಯಕ್ರಿಯೆ ನೆರವೇರಿಸುವ ಮೂಲಕ ಗಮನ ಸೆಳೆದಿರುವ ಘಟನೆ ಗುರುವಾರ ನಡೆದಿದೆ.

Advertisement

ನಗರದ ಮೈಸೂರು ಕಾಗದ ಕಾರ್ಖಾನೆಯ ನಿವೃತ್ತ , ನಿಧಿಗೆ ನಿವಾಸಿ ಆರ್. ಜಗನ್ನಾಥ್‌ರವರು ಹಾವು ಕಡಿತದಿಂದ ಬುಧವಾರ ಮಧ್ಯಾಹ್ನ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು.

ಇವರ ಅಂತ್ಯಕ್ರಿಯೆ ಶಿವಮೊಗ್ಗ ರೋಟರಿ ಚಿತಾಗಾರದಲ್ಲಿ ನಡೆಯಿತು. ಅಂತ್ಯಕ್ರಿಯೆಯಲ್ಲಿ ಜಗನ್ನಾಥ್‌ರವರ ಮೂವರು ಪುತ್ರಿಯರು ಚಿತೆಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ತಂದೆಗೆ ಅಂತಿಮ ಗೌರವ ಸಲ್ಲಿಸಿದರು.

ಸಂಪ್ರದಾಯದಂತೆ ಗಂಡು ಮಕ್ಕಳು ಚಿತೆಗೆ ಅಗ್ನಿ ಸ್ಪರ್ಶ ಮಾಡುವುದು ವಾಡಿಕೆ. ಆದರೆ ಪುತ್ರಿಯರು ಈ ಕಾರ್ಯವನ್ನು ನೆರವೇರಿಸಿ ಸಂಪ್ರದಾಯವಾದಿಗಳ ನಡುವೆ ಮೇಲ್ಪಂಕ್ತಿ ಹಾಕುವ ಮೂಲಕ ಮಾದರಿಯಾಗಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಟೋ ಹರಿದಾಡುತ್ತಿದ್ದು, ವ್ಯಾಪಕವಾಗಿ ಗಮನ ಸೆಳೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next