Advertisement

ಕೋವಿಡ್ ಸಂಕಷ್ಟದಲ್ಲೂ ಬಿಜೆಪಿಯಲ್ಲಿ ಅಧಿಕಾರ ದಾಹ

01:37 PM May 31, 2020 | Naveen |

ಶಿವಮೊಗ್ಗ: ಎಲ್ಲೆಡೆ ಕೋವಿಡ್ ವೈರಸ್‌ ತಾಂಡವವಾಡುತ್ತಿದ್ದರೆ, ಬಿಜೆಪಿಯಲ್ಲಿ ಮಾತ್ರ ಅಧಿಕಾರ ದಾಹ ಕಂಡುಬರುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ ಹೇಳಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ನಿಂದ ಜನಸಾಮಾನ್ಯರು ಸಂಕಷ್ಟ ಎದುರಿಸುತ್ತಿದ್ದಾರೆ. ಅವರ ನೆರವಿಗೆ ಧಾವಿಸಬೇಕಾದ ಆಡಳಿತ ಪಕ್ಷದಲ್ಲಿ ಅಧಿಕಾರದ ದಾಹ ಕಾಣಿಸತೊಡಗಿದೆ. ಇದು ಜನಸಾಮಾನ್ಯರಿಗೆ ಬೇಸರ ತರಿಸಿದೆ ಎಂದರು. ಇಂತಹ ಸಂಕಷ್ಟ ಸಂದರ್ಭ ಅಧಿಕಾರ ಮುಖ್ಯವಾಗಬಾರದು. ಜನರ ಸಮಸ್ಯೆಗಳನ್ನು ಆಲಿಸಬೇಕು. ಸರ್ಕಾರ ಜನಸಾಮಾನ್ಯರ ಸಂಕಷ್ಟ ನಿವಾರಿಸಲು ಮುಂದಾಗಬೇಕು. ಬಿಜೆಪಿಯಲ್ಲಿನ ಬೇಗುದಿಯನ್ನು ಜೆಡಿಎಸ್‌ ಕಾದು ನೋಡುತ್ತದೆ ಎಂದರು.

ಕೋವಿಡ್ ಶೈಕ್ಷಣಿಕ ಕ್ಷೇತ್ರದಲ್ಲೂ ಹಲವಾರು ಸಮಸ್ಯೆ ಉಟು ಮಾಡಿದೆ. ಇದರಿಂದ ವಿವಿಧ ತರಗತಿಗಳ ಮೌಲ್ಯ ಮಾಪನ ಮಾಡುವುದಕ್ಕೂ ಸಮಸ್ಯೆ ಎದುರಾಗಿದೆ. ಹೀಗಾಗಿ ಮೌಲ್ಯಮಾಪಕರು ಇಚ್ಛೆ ಪಡುವ ಕೇಂದ್ರಗಳಲ್ಲಿ ಸರ್ಕಾರ ಅವಕಾಶ ಮಾಡಿಕೊಡಬೇಕು. ಮೌಲ್ಯಮಾಪನ ಕಾರ್ಯಕ್ಕಾಗಿ ಬೇರೆ ಊರುಗಳಿಗೆ ನಿಯೋಜಿಸಿದರೆ ಮೌಲ್ಯಮಾಪಕರು ಹಲವಾರು ಸಂಕಷ್ಟ ಎದುರಿಸಬೇಕಾಗುತ್ತದೆ. ಈ ಕುರಿತು ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ತಿಳಿಸಿದರು

Advertisement

Udayavani is now on Telegram. Click here to join our channel and stay updated with the latest news.

Next