Advertisement

ಕೋವಿಡ್ ತಡೆಗೆ ಆಯುರ್ವೇದ ಔಷಧ ಪೂರಕ

04:11 PM Jun 25, 2020 | Naveen |

ಶಿವಮೊಗ್ಗ: ಕೋವಿಡ್ ಸೋಂಕಿನ ಲಕ್ಷಣಗಳನ್ನು ಸಮರ್ಥವಾಗಿ ನಿಭಾಯಿಸಲು ಆಯುರ್ವೇದ ಔಷಧಗಳು, ಯುನಾನಿ ಕಷಾಯಗಳು ಮತ್ತು ಮನೆಮದ್ದುಗಳು ಪೂರಕವಾಗಿವೆ ಎಂದು ಜಿಲ್ಲಾ ಆಯುಷ್‌ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ದೊಡ್ಡಮನಿ ಹೇಳಿದರು.

Advertisement

ಮಹಾನಗರಪಾಲಿಕೆ ಹಾಗೂ ಆಯುಷ್‌ ಇಲಾಖೆಯ ಸಹಯೋಗದಲ್ಲಿ ಪಾಲಿಕೆಯ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಿಸುವಲ್ಲಿ ಶ್ರಮಿಸುತ್ತಿರುವ ಪಾಲಿಕೆ ಅಧಿಕಾರಿ-ಸಿಬ್ಬಂದಿ ಹಾಗೂ ಪೌರಸೇವಾ ಕಾರ್ಮಿಕರಿಗಾಗಿ ಆಯುಷ್‌ ಇಲಾಖೆ ವತಿಯಿಂದ ನೀಡಲಾದ ಔಷಧಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಕೋವಿಡ್ ವೈರಸ್‌ ನಮ್ಮ ದುರ್ಬಲವಾದ ರೋಗ ನಿರೋಧಕ ಶಕ್ತಿಯಿಂದ ದೇಹದಲ್ಲಿ ಬೆಳೆಯುತ್ತದೆ. ನಮ್ಮ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಆಹಾರ ಮತ್ತು ಮನೆ ಮದ್ದು ಪಾಲಿಸುವುದು ಕ್ಷೇಮ ಎಂದರು.

ಅಮೃತಬಳ್ಳಿ ಸೇರಿದಂತೆ ವಿವಿಧ ಗಿಡಮೂಲಿಕೆ ಮತ್ತು ಆಹಾರ ಪದಾರ್ಥಗಳ ಸಂಯೋಗದೊಂದಿಗೆ ಉತ್ಪತ್ತಿಯಾದ ಔಷಧ ಗಳನ್ನು ಸೇವಿಸುವ ಮೂಲಕ ದೇಹಕ್ಕೆ ಆರೋಗ್ಯ ಕವಚ ಸೃಷ್ಟಿಸಿಕೊಳ್ಳಬಹುದಾಗಿದೆ. ಆಯುರ್ವೇದದ ಔಷಧಗಳನ್ನು ಬಳಸಿದ ಸೋಂಕಿತರು ಗುಣಮುಖರಾಗಿರುವುದು ವೈಜ್ಞಾನಿಕವಾಗಿ ದೃಢೀಕರಿಸಲಾಗಿದೆ ಎಂದರು.

ಮಹಾನಗರಪಾಲಿಕೆ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ ಮಾತನಾಡಿ, ಅನಾದಿಕಾಲದಿಂದಲೂ ಮಾನವ ತನ್ನ ದೇಹವನ್ನು ರೋಗ-ರುಜಿನಗಳಿಂದ ರಕ್ಷಿಸಿಕೊಳ್ಳಲು ಆಯುರ್ವೇದ ಔಷಧಗಳನ್ನು ಮೊರೆ ಹೋಗುತ್ತಿದ್ದುದು ಸರ್ವವಿಧಿ ತ ಎಂದರು. ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಮಹಾ ನಗರಪಾಲಿಕೆ ಮೇಯರ್‌ ಸುವರ್ಣ ಶಂಕರ್‌ ಅವರು ಸಾಂಕೇತಿಕವಾಗಿ ಪಾಲಿಕೆ ಸಿಬ್ಬಂಧಿಗಳಿಗೆ ಔಷಧಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಉಪಮೇಯರ್‌ ಸುರೇಖಾ ಮುರಳೀಧರ್‌, ಜ್ಞಾನೇಶ್ವರ್‌, ಗನ್ನಿಶಂಕರ್‌ ಸೇರಿದಂತೆ ಪಾಲಿಕೆ ಸ್ಥಾಯಿ ಸಮಿತಿಗಳ ಅಧ್ಯಕ್ಷರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next