Advertisement

ಕೋವಿಡ್ ಜಾಗೃತಿ ಕಾರ್ಯಕ್ರಮ

06:13 PM Apr 15, 2020 | Naveen |

ಶಿವಮೊಗ್ಗ: ಕೋವಿಡ್ ಸೋಂಕು ಹರಡದಿರಲು ಸಮಾಜದ ಪ್ರತಿಯೊಬ್ಬರು ಜವಾಬ್ದಾರಿಯಿಂದ ಸುರಕ್ಷತಾ ನಿಯಮ ಪಾಲನೆ ಮಾಡಬೇಕು ಎಂದು ರೆಡ್‌ಕ್ರಾಸ್‌ ಸಂಸ್ಥೆ ರಾಜ್ಯ ಉಪಾಧ್ಯಕ್ಷ ಡಾ| ವಿ.ಎಲ್‌.ಎಸ್‌. ಕುಮಾರ್‌ ಅಭಿಪ್ರಾಯಪಟ್ಟರು.

Advertisement

ನಗರದ ಶಕ್ತಿ ಇನ್ನೋವೇಷನ್‌ ಆವರಣದಲ್ಲಿ ಜಿಲ್ಲಾ ರೆಡ್‌ಕ್ರಾಸ್‌ ಮತ್ತು ರೋಟರಿ ಶಿವಮೊಗ್ಗದ ಪೂರ್ವದ ವತಿಯಿಂದ ನಡೆದ ಕೋವಿಡ್ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬರು ನಿಯಮಿತವಾಗಿ ಸಾಬೂನು ಹಾಗೂ ನೀರಿನಿಂದ ಚೆನ್ನಾಗಿ ಕೈ ತೊಳೆಯಬೇಕು. ಕೆಮ್ಮುವಾಗ ಮತ್ತು ಸೀನುವಾಗ ಮೂಗು ಮತ್ತು ಬಾಯಿಯನ್ನು ಕರ ವಸ್ತ್ರದಿಂದ ಮುಚ್ಚಿಕೊಳ್ಳಬೇಕು. ಒಮ್ಮೆ ಬಳಸಿದ ಕರ ವಸ್ತ್ರ ಕಸದ ಬುಟ್ಟಿಯಲ್ಲಿ ಹಾಕ ಬೇಕು. ಜ್ವರ, ಉಸಿರಾಟದ ತೊಂದರೆ, ನೆಗಡಿ, ಕೆಮ್ಮು ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು ಎಂದರು. ಕೋವಿಡ್ ಸೋಂಕಿನ ಪೂರ್ಣ ಮಾಹಿತಿ ಇರುವ ಕರಪತ್ರಗಳನ್ನು ಸಾರ್ವಜನಿಕರಿಗೆ ನೀಡಲಾಯಿತು.

ಶಕ್ತಿ ಇನ್ನೋವೇಶನ್‌ ಮುಖ್ಯಸ್ಥ ಬಿ.ಗೋಪಿನಾಥ್‌, ರೆಡ್‌ಕ್ರಾಸ್‌ ಸಂಸ್ಥೆಯ ಶಿವಮೊಗ್ಗ ಶಾಖೆ ಅಧ್ಯಕ್ಷ ಎಸ್‌.ಪಿ.ದಿನೇಶ್‌, ಡಾ| ದಿನೇಶ್‌, ರೆಡ್‌ಕ್ರಾಸ್‌ ನಿರ್ದೇಶಕ ವಸಂತ ಹೋಬಳಿದಾರ್‌, ಗಿರೀಶ್‌, ಅಶ್ವಥ್‌ ನಾರಾಯಣ ಶೆಟ್ಟಿ, ರೇಶ್ಮಾ ಮತ್ತು ಜಿ.ವಿಜಯ್‌ಕುಮಾರ್‌,
ಮಂಜುನಾಥ್‌ ಕದಂ, ಕೊರೊನಾ ವಾರಿಯರ್ಸ್‌ ಹಾಗೂ ಪತ್ರಕರ್ತ ಹಾಲಸ್ವಾಮಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next