Advertisement
ಜೂನ್-2020 ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 390.67 ಮಿಮೀ ಇದ್ದು, ಇದುವರೆಗೆ ಸರಾಸರಿ 165.43 ಮಿಮೀ ಮಳೆ ದಾಖಲಾಗಿದೆ. ಶಿವಮೊಗ್ಗ 06.40 ಮಿಮೀ, ಭದ್ರಾವತಿ 01.20 ಮಿಮೀ, ತೀರ್ಥಹಳ್ಳಿ 20.20 ಮಿಮೀ, ಸಾಗರ 11.40 ಮಿಮೀ, ಶಿಕಾರಿಪುರ 7.80 ಮಿಮೀ, ಸೊರಬ 18.20 ಮಿಮೀ ಹಾಗೂ ಹೊಸನಗರ 57.20 ಮಿಮೀ ಮಳೆಯಾಗಿದೆ.
ಹೊಸನಗರ: ತಾಲೂಕಿನಾದ್ಯಂತ ಮಳೆಯಾಗುತ್ತಿದ್ದು ನಗರ ಹೋಬಳಿಯಲ್ಲಿ ಉತ್ತಮ ಮಳೆ ಸುರಿದಿದೆ. ಮಾಸ್ತಿಕಟ್ಟೆಯಲ್ಲಿ ಒಂದೇ ದಿನ ಅತಿ ಹೆಚ್ಚು 74 ಮಿಮೀ ಮಳೆಯಾಗಿದೆ. ಹುಲಿಕಲ್‌ನಲ್ಲಿ 68 ಮಿಮೀ, ಮಾಣಿ ಜಲಾಶಯ ವ್ಯಾಪ್ತಿಯಲ್ಲಿ 67 ಮಿಮೀ, ಯಡೂರು 46 ಮಿಮೀ, ಚಕ್ರಾ ಜಲಾಶಯ ವ್ಯಾಪ್ತಿಯಲ್ಲಿ 67 ಮಿಮೀ, ಚಕ್ರಾ ಜಲಾಶಯ ವ್ಯಾಪ್ತಿಯಲ್ಲಿ 60 ಮಿಮೀ ಮಳೆ ಸುರಿದಿದೆ.