ಶಿಮ್ಲಾ: ಪ್ರಧಾನಿ ಮೋದಿ ಮೇ 30ಕ್ಕೆ ಪ್ರಧಾನಿಯಾಗಿ 8 ವರ್ಷ ಪೂರೈಸಲಿದ್ದಾರೆ. ಅದನ್ನು ಸಂಭ್ರಮಿಸಲು ಮೋದಿ ಅವರು ಮೇ 31ರಂದು ಹಿಮಾಚಲಪ್ರದೇಶದ ಶಿಮ್ಲಾದಲ್ಲಿ ರೋಡ್ಶೋ ನಡೆಸಲಿದ್ದಾರೆ.
Advertisement
ಸಿಟಿಒದಿಂದ ಝಾನ್ಸಿ ಪಾರ್ಕ್ವರೆಗೆ ಅರ್ಧ ಕಿ.ಮೀ. ರೋಡ್ ಶೋ ನಡೆಸಲಿದ್ದಾರೆ. ನಂತರ ರಿಡ್ಜ್ ಮೈದಾನದಲ್ಲಿ ರ್ಯಾಲಿಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಈ ಕಾರ್ಯಕ್ರಮದ ಹೊಣೆಯನ್ನು ಹಿಮಾಚಲಪ್ರದೇಶ ಬಿಜೆಪಿ ಪ್ರಧಾನ ಕಾರ್ಯದರ್ಶಿ ತ್ರಿಲೋಕ್ ವಹಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಕೇಂದ್ರ ಸರ್ಕಾರದ 17 ಯೋಜನೆಗಳ ಫಲಾನುಭವಿಗಳೊಂದಿಗೆ ಆನ್ಲೈನ್ನಲ್ಲಿ ಸಂಭಾಷಣೆ ನಡೆಸಲಿದ್ದಾರೆ.