Advertisement

ಶಿಮ್ಲಾ ಇನ್ನು “ಶ್ಯಾಮಲಾ’

11:56 AM Oct 22, 2018 | Harsha Rao |

ಶಿಮ್ಲಾ: ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ಹೆಸರು ಶೀಘ್ರವೇ “ಶ್ಯಾಮಲಾ’ ಎಂದು ಬದಲಾಗಲಿದೆ. ಈ ಬಗ್ಗೆ ಜೈರಾಮ್‌ ಠಾಕೂರ್‌ ನೇತೃತ್ವದ ಬಿಜೆಪಿ ಸರಕಾರ ಚಿಂತನೆ ನಡೆಸಿದೆ. ಶಿಮ್ಲಾ ಎನ್ನುವುದು ಬ್ರಿಟಿಷ್‌ ಕಾಲದ ಹೆಸರಾಗಿದೆ. ದಸರೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಜೈರಾಮ್‌ ಠಾಕೂರ್‌, ಈಗಿನ ಹೆಸರು ಬ್ರಿಟಿಷ್‌ ಆಡಳಿತದ ಪ್ರತೀಕವಾಗಿದೆ. ಸಾರ್ವಜನಿಕರ ಅಭಿಪ್ರಾಯ ಪಡೆದು ತೀರ್ಮಾನಿಸಲಾಗುತ್ತದೆ. ಬ್ರಿಟಿಷರ ಆಗಮನಕ್ಕೆ ಮೊದಲು ಶಿಮ್ಲಾವನ್ನು “ಶ್ಯಾಮಲಾ’ ಎಂದು ಕರೆಯಲಾಗುತ್ತಿತ್ತು ಎಂದಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಉತ್ತರ ಪ್ರದೇಶದ ಸರಕಾರ ಅಲಹಾಬಾದ್‌ ಹೆಸರನ್ನು ಪ್ರಯಾಗ್‌ರಾಜ್‌ ಎಂದು ಬದಲಿಸುವ ಬಗ್ಗೆ ಸಂಪುಟ ನಿರ್ಧಾರ ಕೈಗೊಂಡಿತ್ತು. ಅದಕ್ಕೆ ರಾಜ್ಯಪಾಲ ರಾಮ್‌ ನಾಯ್ಕ ಕೂಡ ಅಂಗೀಕಾರ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next