Advertisement
ಒಂದೂವರೆ ವರ್ಷವಿದ್ದಾಗಲೇ ಕಾಲು ಸ್ವಾಧೀನ ತಪ್ಪಿತು: ರಾಷ್ಟ್ರೀಯ ಗಾಲಿಕುರ್ಚಿ ಟೆನ್ನಿಸ್ ಆಟಗಾರ್ತಿಯರ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಶಿಲ್ಪಾ ಮೂಲತಃ ಮಂಡ್ಯದವರು. ಒಂದೂವರೆ ವರ್ಷದ ಮಗುವಾಗಿದ್ದಾಗ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಜ್ವರದಿಂದ ತನ್ನ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡರು. ಮನೆಯಲ್ಲಿ ಅನಕ್ಷರಸ್ಥರಾದ ತಂದೆ-ತಾಯಿಗೂ ಸರಿಯಾಗಿ ಚಿಕಿತ್ಸೆ ಕೊಡಿಸಬೇಕೆಂದು ತಿಳಿಯದಿದ್ದರಿಂದ ಸೂಕ್ತ ವೈದ್ಯಕೀಯ ಸೌಲಭ್ಯ ದೊರಕದೆ ಶಾಶ್ವತವಾಗಿ ಅಂಗ ವೈಕಲ್ಯ ಅನುಭವಿಸುವ ಸ್ಥಿತಿ ಉಂಟಾಯಿತು.
Related Articles
Advertisement
ಬೆಂಗಳೂರಲ್ಲಿ ತರಬೇತಿ
2010 ಡಿಸೆಂಬರ್‌ನಲ್ಲಿ ಬೆಂಗಳೂರಿಗೆ ಮರಳಿದ ಶಿಲ್ಪಾ ಒಂದು ವಾರಗಳ ಕಾಲ ಗಾಲಿಕುರ್ಚಿ ಟೆನಿಸ್ ತರಬೇತಿ ಪಡೆದುಕೊಂಡರು. ಬಿ.ಜಿ.ಸಂದೇಶ ಅವರ ನೇತೃತ್ವದಲ್ಲಿ ಕರ್ನಾಟಕ ಗಾಲಿಕುರ್ಚಿ ಟೆನಿಸ್ ಸಂಘದಿಂದ ನಡೆದ ರಾಷ್ಟ್ರೀಯ ಗಾಲಿಕುರ್ಚಿ ಟೆನಿಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದರು. ಹೀಗೆ ಟೆನಿಸ್ ಲೋಕ ಪ್ರವೇಶಿಸಿದ ಶಿಲ್ಪಾ ನಂತರ ಹಿಂತಿರುಗಿ ನೋಡಿಲ್ಲ.
ನೀಲಾಂಜನೇಯ ನೆರವು: ಸಮರ್ಥನಂ ಸಂಸ್ಥೆಯಲ್ಲಿ ಶಿಲ್ಪಾ ಕಂಪ್ಯೂಟರ್ ತರಬೇತಿ ಪಡೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಆಟೋ ಚಾಲಕ ನೀಲಾಂಜನೇಯ ಅವರ ಪರಿಚಯವಾಯಿತು. ಮುಂದೆ ಶಿಲ್ಪಾ ಅಂತಾರಾಷ್ಟ್ರೀಯ ಮಟ್ಟದ ಆಟಗಾರ್ತಿಯಾಗಿ ಹೊರಹೊಮ್ಮಲು ನೀಲಾಂಜನೇಯ ಪ್ರಮುಖ ಪಾತ್ರ ವಹಿಸಿದರು. ಸ್ವತಃ ತಾವೇ ಒಂದು ಕಾಲು ಕಳೆದುಕೊಂಡಿದ್ದರಿಂದ ನೀಲಾಂಜನೇಯ ಅವರಿಗೂ ನೋವು ಗೊತ್ತಿತ್ತು. ಅವರು ಮೂರು ವರ್ಷ ಪ್ರತಿದಿನ ಬೆಳಗ್ಗೆ ಸಂಜೆ ಶಿಲ್ಪಾ ಅವರನ್ನು ಟೆನಿಸ್ ತರಬೇತಿಗೆ ಕರೆದುಕೊಂಡು ಹೋಗುತ್ತಿದ್ದಿದಲ್ಲದೆ ತಾವು ಸಂಪಾದನೆ ಮಾಡಿದ ಹಣದಿಂದ ಟೆನಿಸ್ ಆಟಕ್ಕೆ ಅಗತ್ಯವಾದ ಸಾಮಗ್ರಿಗಳನ್ನು ಖರೀದಿಸಿ ಕೊಟ್ಟಿದ್ದರು.
ನಂತರ 2013ರಲ್ಲಿ ಸಮಾಜ ಸೇವಕಿ ಮಂಗಳಾ ಶ್ರೀಧರ್ ಅವರ ನೆರವು ಪಡೆದುಕೊಂಡ ಶಿಲ್ಪಾ ಬ್ಯಾಂಕಾಕ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಗಾಲಿಕುರ್ಚಿ ಟೆನ್ನಿಸ್ ಪಂದ್ಯಾವಳಿಯಲ್ಲಿ ಭಾಗವಹಿಸಿ ದೇಶ ಹೆಮ್ಮೆಪಡುವಂತ ಸಾಧನೆ ಮಾಡಿದರು. ಅಲ್ಲಿಂದ ಸಾಧನೆಯ ಪಥದಿಂದ ಹಿಂದೆ ಸರಿಯದ ಶಿಲ್ಪಾ ಬೀಜಿಂಗ್, ಚೀನಾ, ಮಲೇಷ್ಯಾ ಸೇರಿದಂತೆ ವಿವಿಧ ದೇಶಗಳ ಪದಕಗಳನ್ನು ಮುಡಿಗೇರಿಸಿಕೊಂಡರು.
ಇಷ್ಟು ವರ್ಷ ಸ್ಥಳೀಯ ಗಾಲಿಕುರ್ಚಿಯಲ್ಲೇ ಟೆನ್ನಿಸ್ ಆಡುತ್ತಿದ್ದ ಶಿಲ್ಪಾ ಅವರಿಗೆ ಬನಶಂಕರಿ ಮಹಿಳಾ ಸಮಾಜ ಹಾಗೂ ಒಕ್ಕಲಿಗರ ಮಹಾವೇದಿಕೆ ಅಂತಾರಾಷ್ಟ್ರೀಯ ಮಟ್ಟದ ಗಾಲಿಕುರ್ಚಿ ಖರೀದಿಗೆ ಸಹಾಯ ಮಾಡುತ್ತಿವೆ. ಸ್ಥಳೀಯ ಗಾಲಿಕುರ್ಚಿಯಲ್ಲಿ ಕುಳಿತು ದೇಶ ವಿದೇಶದಲ್ಲಿ ಕೀರ್ತಿ ಪತಾಕೆ ಹಾರಿಸಿರುವ ಶಿಲ್ಪಾ ಇದೀಗ ಹೊಸ ಗಾಲಿಕುರ್ಚಿಯಲ್ಲಿ ಕುಳಿತು 2020ರಲ್ಲಿ ನಡೆಯುವ ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಇಚ್ಛೆ ಹೊಂದಿದ್ದಾರೆ.
ಆದರೆ, ಶ್ರೀಮಂತರ ಆಟ ಎನಿಸಿಕೊಂಡಿರುವ ಟೆನಿಸ್‌ನಲ್ಲಿ ಮುಂದುವರಿಯಲು ಅವರಿಗೆ ಹಣದ ಅಗತ್ಯವಿದೆ. ಹಾಗೆಂದು ಎಲ್ಲಕ್ಕೂ ಬೇರೆಯವರನ್ನು ನೆಚ್ಚಿಕೊಳ್ಳದೆ ಸ್ವಾಭಿಮಾನಿಯಾಗಿ ಬದಕು ನಡೆಸುವ ಛಲವೂ ಇದೆ. ಎಸ್‌ಎಸ್‌ಎಲ್‌ಸಿ ಶಿಕ್ಷಣ ಮುಗಿಸಿರುವ ಅವರು ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ತಾನೇ ಸಂಪಾದಿಸಿ ಬದುಕುವುದರ ಜತೆಗೆ ಟೆನಿಸ್‌ನಲ್ಲೂ ಮುಂದುವರಿಯಬೇಕು ಎಂಬುದು ಅವರ ಬಯಕೆ.
ಅಂಗವೈಕಲ್ಯವನ್ನು ಕಂಡು ಕೆಲವರು ಹಾಸ್ಯ ಮಾಡಿದ್ದುಂಟು. ಆಗೆಲ್ಲಾ ಬದುಕೇ ಬೇಡ ಎಂದೆನ್ನಿಸುತ್ತಿತ್ತು. ಸದಾ ಅನ್ಯರನ್ನು ಅವಲಂಬಿಸುವ ಬದುಕಿನಿಂದ ದೂರ ಸರಿಯಬೇಕೆಂದು ಮನಸ್ಸು ಪದೇ ಪದೇ ಒತ್ತಿ ಹೇಳುತ್ತಿತ್ತು. ಅಂತಹ ಸಂದರ್ಭದಲ್ಲಿ ಬಿ.ಜಿ.ಸಂದೇಶ ಅವರು ಬದುಕಿನ ಬಗ್ಗೆ ಹೇಳಿಕೊಟ್ಟ ಪಾಠ ಇಂದಿಗೂ ನನಗೆ ಸ್ಪೂರ್ತಿ ನೀಡುತ್ತವೆ.– ಕೆ.ಪಿ.ಶಿಲ್ಪಾ. ಪ್ರಶಸ್ತಿ ಪಟ್ಟಿ
ಸಿಂಗಲ್ಸ್ ವಿಭಾಗದಲ್ಲಿ
2010 ಪ್ರಥಮ ರಾಷ್ಟ್ರೀಯ ಗಾಲಿಕುರ್ಚಿ ಟೆನಿಸ್ ಪಂದ್ಯಾವಳಿಯಲ್ಲಿ ಚಿನ್ನದ ಪದಕ
2013 ದ್ವಿತೀಯ ರಾಷ್ಟ್ರೀಯ ಗಾಲಿಕುರ್ಚಿ ಟೆನ್ನಿಸ್ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ
2013 ಬಾಂಕಾಂಕ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಟೆನಿಸ್ ಪಂದ್ಯಾವಳಿಯಲ್ಲಿ ರನ್ನರ್ ಅಪ್
2015 ತೃತೀಯ ರಾಷ್ಟ್ರೀಯ ಗಾಲಿಕುರ್ಚಿ ಟೆನಿಸ್ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ
2016 ಬೆಂಗಳೂರಿನಲ್ಲಿ ನಡೆದ ಟಬೂಬಿಯಾ ಪಂದ್ಯಾವಳಿಯಲ್ಲಿ ರನ್ನರ್ ಅಪ್
2017 ಮಲೇಷ್ಯಾ ಮತ್ತು ಬ್ಯಾಂಕಾಕ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಗಾಲಿಕುರ್ಚಿ ಟೆನಿಸ್ ಪಂದ್ಯಾವಳಿಯಲ್ಲಿ ಕಂಚಿನ ಪದಕ
2018 ಚೆನ್ನೈನಲ್ಲಿ ನಡೆದ ಮರಿನಾ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ
2018 ಹೈದಾರಬಾದ್‌ನಲ್ಲಿ ನಡೆದ ಚಾರ್‌ಮಿನಾರ್ ಟೆನಿಸ್ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ ಡಬಲ್ಸ್ ವಿಭಾಗದಲ್ಲಿ
2015 ತೃತೀಯ ರಾಷ್ಟ್ರೀಯ ಗಾಲಿಕುರ್ಚಿ ಪಂದ್ಯಾವಳಿಯಲ್ಲಿ ಬಂಗಾರದ ಪದಕ ಶೃತಿ ಮಲೆನಾಡತಿ