Advertisement
ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಹಿಮಾಲಯ ಪರ್ವತ ರೋಹಣ ಯೋಜನೆಯೊಂದನ್ನು ರೂಪಿಸಲಾಗಿದೆ.
Related Articles
Advertisement
ಯಾವ ಯಾವ ಸ್ಥಳಗಳ ಭೇಟಿ: ದೆಹಲಿಯ ಐಎಂಎಫ್ ಸಂಸ್ಥೆಯಿಂದ ಜಮ್ಮು- ಕಾಶ್ಮೀರ್, ಲಾಡಖ್, ಲೇ, ಕಾರ್ಗಿಲ್ ಯುದ್ದಭೂಮಿ, ಜೋಜಿಲಾ ಪಾಸ್, ಸಿಯಾಚಿನ್ ಗಡಿಗೆ ತೆರಳಿದ್ದಾರೆ. ತಂಡದ ಶಿಬಿರಾರ್ಥಿಗಳನ್ನು ಮಾರ್ಗದರ್ಶನ ಮಾಡಲು ನುರಿತ ಶಿಕ್ಷಕರಿದ್ದು ಹಿಮ ಪ್ರದೇಶದಿಂದ ಪರ್ವತವನ್ನು ಸೇರುವುದು ಸವಾಲಿನ ಕೆಲಸ. ಸಾವಿರಾರು ಅಡಿ ಎತ್ತರದ ಪ್ರದೇಶಗಳಲ್ಲಿ ಪರ್ವತಾರೋಹಣ ನಡೆಸಲಾಗುತ್ತದೆ. ಪರ್ವತಾರೋಹಣದ ಉದ್ದೇಶ: ಮುಖ್ಯವಾಗಿ ಸರ್ಕಾರ ದಕ್ಷಿಣ ಭಾರತದಿಂದ ಶಿಬಿರಾರ್ಥಿಗಳನ್ನು ಕಳುಹಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಯೂ ಹಿಮಾಲಯದ ಬಗ್ಗೆ ಓದುವಾಗ ನಾನು ಈ ಶಿಖರವನ್ನು ಏರಬೇಕು ಎನ್ನುವ ಆಸೆಯನ್ನು ಹೊಂದಿರುತ್ತಾರೆ. ಅದರೆ ಬಡತನ ಆಸೆಯನ್ನುಕುಗ್ಗಿಸುತ್ತದೆ ಮತ್ತು ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಜನರನ್ನು ಹೇಗೆ ರಕ್ಷಿಸಬೇಕು ಹಾಗೂ ಹಿಮಾಲಯದಲ್ಲಿ ಸೈನಿಕರ ಕಷ್ಟ ಪರಿಶ್ರಮ, ಮೈನಸ್ ಡಿಗ್ರಿಯಲ್ಲಿ ನಮ್ಮ ಸೈನಿಕರು ದೇಶಸೇವೆ ಮಾಡುವುದು ಹೇಗೆಂದು ತಿಳಿಯುವುದು, ಅದರ ಅನುಭವದ ಬಗ್ಗೆ ಈ ರೀತಿ ಹತ್ತು ಹಲವು ದೇಶಾಭಿಮಾನ ಹಾಗೂ ಸಂಕಷ್ಟದ ಸಂದರ್ಭದಲ್ಲಿ ಜನರ ರಕ್ಷಣೆಯ ಕುರಿತು ಶಿಬಿರದಲ್ಲಿ ತರಬೇತಿ ನೀಡಲಾಗುತ್ತದೆ. ಈ ಮೂಲಕ ಪರ್ವತ ಏರುವುದಕ್ಕೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲಾಗುತ್ತದೆ. ನಾನು ಪತ್ರಿಕೆಯಲ್ಲಿ ಜನರಲ್ ತಿಮ್ಮಯ್ಯ ಅಕಾಡೆಮಿಯ ಪ್ರಕಟಣೆಯನ್ನು ನೋಡಿ ಅರ್ಜಿ ಹಾಕಿದೆ. ನೀವು ಆಯ್ಕೆಯಾಗಿದ್ದೀರ ಎಂದು ಪತ್ರ ಬಂತು. ನಂತರ ಮೆಡಿಕಲ್ ಮತ್ತು ದೈಹಿಕ ಪರೀಕ್ಷೆಗೆ ಬೆಂಗಳೂರಿನಲ್ಲಿ ಪರೀಕ್ಷೆ ಪಾಸ್ ಆಗಿ ನಮ್ಮನ್ನು ದೆಹಲಿಗೆ ಕಳುಹಿಸಿದರು. ನಮಗೆ ಸಂಪೂರ್ಣ ತರಬೇತಿ ನೀಡಿ ಹಿಮಾಲಯ ಪರ್ವತ ಶಿಖರ ಏರುವ ಅವಕಾಶ ಸಿಕ್ಕಿತು. ಇದರಿಂದ ನಾವು ಸಾಕಷ್ಟು ಕಲಿತಿದ್ದೇವೆ. ನಮ್ಮ ಸೈನಿಕರ ಕಷ್ಟ ಹಾಗೂ ಅವರ ದೇಶಾಭಿಮಾನ ನಮ್ಮ ಮೈ ರೋಮಾಂಚನಗೊಳಿಸಿತು. ನಮ್ಮ ಜೀವನದಲ್ಲಿ ಹಿಮಾಲಯ ಶಿಖರ ಏರುತ್ತೇವೆ ಎಂಬ ಕನಸು ಇರಲಿಲ್ಲ. ಈ ಯೋಜನೆಯಿಂದ ನಮ್ಮ ಕನಸ್ಸು ನನಸಾಗಿದೆ.
. ರಾವುಲ್ ಬಿ.ಆರ್,
ಹಿಮಾಲಯ ಶಿಖರ ಏರಿದ ವಿದ್ಯಾರ್ಥಿ