Advertisement

ತ್ಯಾವರೆಕೊಪ ಸಿಂಹಧಾಮ ಅಭಿವದ್ಧಿಗೆ ಕ್ರಮ

03:26 PM Nov 15, 2019 | Naveen |

ಶಿಕಾರಿಪುರ: ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮವನ್ನು ಇನ್ನಷ್ಟು ವಿಸ್ತರಣೆ ಮಾಡಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

Advertisement

ಪಟ್ಟಣದಲ್ಲಿ ವಲಯ ಅರಣ್ಯಾಧಿಕಾರಿಗಳ ಕಚೇರಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಶಿವಮೊಗ್ಗದ ಹುಲಿ ಮತ್ತು ಸಿಂಹಧಾಮವನ್ನು ಅಭಿವೃದ್ಧಿ ಪಡಿಸಿ ಇನ್ನೂ ಹೆಚ್ಚು ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂತೆ ವಿಸ್ತರಣೆ ಮಾಡಲಾಗುವುದು. ತ್ಯಾವರೆಕೊಪ್ಪದ ಹುಲಿ- ಸಿಂಹಧಾಮದಲ್ಲಿ ಈಗಿರುವ ಜಾಗ ಚಿಕ್ಕದಾಗಿದ್ದು ಪ್ರವಾಸಿಗರಿಗೆ ಹಾಗೂ ಹುಲಿ ಸಿಂಹಗಳ ಕಡಿಮೆ ಜಾಗವಾಗಿದೆ. ಇದನ್ನು ಇನಷ್ಟು ಹೆಚ್ಚು ವಿಸ್ತರಣೆ ಮಾಡಬೇಕು. ಈ ಮೂಲಕ ಪ್ರವಾಸಿಗರಿಗೆ ಎಲ್ಲಾ ರೀತಿ ಸೌಕರ್ಯ ಕಲ್ಪಿಸಲಾಗುವುದು ಎಂದರು.

ಶಿಕಾರಿಪುರ ತಾಲೂಕಿನಲ್ಲಿ ಒಂದು ಸುಂದರವಾದ ಟ್ರೀ ಪಾರ್ಕ್‌ ನಿರ್ಮಾಣದ ಉದ್ದೇಶವನ್ನು ಹೊಂದಿದ್ದು 50 ಎಕರೆ ವಿಸ್ತರಣೆಯಲ್ಲಿ ದೊಡ್ಡದಾದ ಸುಂದರವಾದ ಒಂದು ಟ್ರೀ ಪಾರ್ಕ್‌ಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದ್ಯದಲ್ಲಿಯೇ ಈ ಕುರಿತು ಕೆಲಸ ಪ್ರಾರಂಭವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಅರಣ್ಯ ಸಂರಕ್ಷಣಾಧಿ ಕಾರಿ ಶ್ರೀನಿವಾಸುಲು, ಮಲೆನಾಡು ಎಂದರೆ ಅತ್ಯಂತ ಸುಂದರವಾದ ಪ್ರದೇಶ. ಪ್ರಕೃತಿಯ ದೇವಾಲಯ ಎಂದು ಕರೆಯುತ್ತಾರೆ. ಅದರೆ ಅದನ್ನು ಉಳಿಸಿಕೊಂಡು ಬೆಳೆಸುವ ಜವಾಬ್ದಾರಿ ನಮ್ಮದು. ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಶಿವಮೊಗ್ಗವಾಗಿದೆ. ಆದರೆ ಕಳೆದ ಬಾರಿ ಬಂದ ಮಳೆಗೆ ಶಿವಮೊಗ್ಗ ಮುಳುಗಡೆಯಾಗಿದೆ ಎಂದರೆ ಆಶ್ಚರ್ಯದ ಸಂಗತಿಯಾಗಿದೆ. ನಾವು ಪರಿಸರವನ್ನು ರಕ್ಷಿಸಿಕೊಳ್ಳುವಲ್ಲಿ ಸೋತಿದ್ದೇವೆ. ಪ್ರಕೃತಿ ಸಮತೋಲನದಲ್ಲಿದ್ದರೆ ಯಾವ ಮಳೆ ಬಂದರೂ ಯಾವುದೇ ಹಾನಿಯಾಗುವುದಿಲ್ಲ ಎಂದರು.

ಪ್ರಕೃತಿಯ ಸ್ವರ್ಗದಂತಿರುವ ಮಲೆನಾಡಿನಲ್ಲಿ ನಾವು ಪ್ರವಾಸೋದ್ಯಮದ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದ್ದೇವೆ. ದಾಂಡೇಲಿಗಳಲ್ಲಿ ಹುಲಿ ತೋರಿಸಿ ಹೋಂ ಸ್ಟೇ ವಾಟರ್ಸ್ ಗೇಮ್‌ ಎಂದು ಹಣ ಮಾಡುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಇರುವ ಪ್ರಕೃತಿಯ ಸೌಂದರ್ಯದ ಅಭಿವೃದ್ಧಿಗಾಗಿ ಪ್ರವಾಸೋದ್ಯಮದ ಬೆಳವಣಿಗೆ ಹೆಚ್ಚು ಒತ್ತು ನೀಡಬೇಕು ಎಂದರು. ಜಿಪಂ ಸದಸ್ಯ ನರಸಿಂಗ್‌ ನಾಯ್ಕ, ತಾಪಂ ಅಧ್ಯಕ್ಷ ಶಂಭು, ತಾಪಂ ಸದಸ್ಯ ಸುಬ್ರಮಣ್ಯ, ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್‌ ಕುಮಾರ್‌, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪ್ಯಾನಾಯ್ಕ, ಪುರಸಭಾ ಸದಸ್ಯೆ ರೂಪಾ ಮಂಜುನಾಥ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next