Advertisement

ರಾಜಕೀಯ ವೈಷಮ್ಯಕ್ಕೆ ವಾರ್ಡ್‌ ಬಲಿ

03:08 PM Apr 17, 2022 | Team Udayavani |

ಶಿಡ್ಲಘಟ್ಟ: ನಗರಸಭೆಯ ಅಧ್ಯಕ್ಷೆ ಸುಮಿತ್ರ ರಮೇಶ್‌ ಹಾಗೂ ಉಪಾಧ್ಯಕ್ಷ ಬಿ.ಅಫ್ಸರ್‌ ಪಾಷ ಅವರ ನಡುವೆ ಭುಗಲೆ ದ್ದಿರುವ ರಾಜಕೀಯ ವೈಷಮ್ಯದಿಂದ ಇಡೀ ವಾರ್ಡಿನ ನಾಗರಿಕರು ಕನಿಷ್ಠ ಸೌಲಭ್ಯಗಳಿಂದ ವಂಚಿತಗೊಂಡಿದ್ದಾರೆ.

Advertisement

ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ನಗರಸಭೆಯ ಅಧ್ಯಕ್ಷೆ ಸುಮಿತ್ರಾ ರಮೇಶ್‌ ಹಾಗೂ ಉಪಾಧ್ಯಕ್ಷ ಬಿ.ಅಫ್ಸರ್‌ ಪಾಷ ಅವರ ನಡುವೆ ಗಲಾಟೆ ನಡೆದು ಪ್ರಕರಣ ಠಾಣೆಯ ಮೆಟ್ಟಲೇರಿತ್ತು. ಆದರೆ ಇಡೀ ವಾರ್ಡಿನ ನಾಗರಿಕರು ಮೂಲ ಸೌಲಭ್ಯಗಳಿಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ವಾರ್ಡಿನಲ್ಲಿ ಕುಡಿಯುವ ನೀರು ಪೂರೈಕೆ ಮಾಡುವ ಸುಮಾರು 5 ಕೊಳವೆಬಾವಿಗಳ ಪೈಕಿ ಮೂರಿನಲ್ಲಿ ಮೋಟರ್‌ ಕೆಟ್ಟು ಹೋಗಿ ದ್ದು, ಅದು ದುರಸ್ತಿಯಾಗದೆ ಕುಡಿಯಲು ನೀರಿಲ್ಲದಂತಾಗಿದೆ ಎಂದು ನಾಗರಿಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಬೋರ್‌ವೆಲ್‌ ವಿಚಾರದಲ್ಲಿ ಗಲಾಟೆ: 29ನೇ ವಾರ್ಡಿನಲ್ಲಿರುವ ಸುಮಾರು 5 ಕೊಳವೆ ಬಾವಿಗಳಲ್ಲಿ ಮೋಟರ್‌ ಹೋಗಿದೆ ಅದನ್ನು ದುರಸ್ತಿ ಮಾಡಿಸುವ ವಿಚಾರದಲ್ಲಿ ನಗರಸಭೆ ಅಧ್ಯಕ್ಷರು ಹಾಗೂ ಉಪಾ ಧ್ಯಕ್ಷರ ಮಧ್ಯೆ ನಡೆದ ಗಲಾಟೆಯಿಂದ ನಾಗರಿಕರು ತೊಂದರೆಯಾಗಿದ್ದು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜಕೀಯ ಜಿದ್ದಾಜಿದ್ದಿನಿಂದ ನಮಗೆ ಯಾಕೆ ತೊಂದರೆ ನೀಡುತ್ತಿದ್ದೀರಾ ? ಎಂದಿರುವ ಸ್ಥಳೀಯರು, ಕೆಟ್ಟುನಿಂತಿರುವ ಬೋರ್‌ವೆಲ್‌ ಮೋಟರ್‌ ಸರಿಪಡಿಸಿ ಕುಡಿಯುವ ನೀರು ಪೂರೈಕೆ ಮಾಡಲು ಅಧಿಕಾರಿಗಳು ಅಗತ್ಯ ಕ್ರಮವಹಿ ಸಬೇಕೆಂದು ಮನವಿ ಮಾಡಿದ್ದಾರೆ.

Advertisement

ಎಲ್ಲಡೆ ಕಸದ ರಾಶಿ: 29ನೇ ವಾರ್ಡ್‌ ನಲ್ಲಿ ಎಲ್ಲೆಂದರಲ್ಲಿ ಕಸದ ರಾಶಿಗಳು ಬಿದ್ದಿದ್ದು, ಸುತ್ತಮುತ್ತಲಿನ ಜನರು ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ. ಸೊಳ್ಳೆಗಳ ಕಾಟ ಮತ್ತು ಬೀದಿನಾಯಿಗಳ ಹಾವಳಿಯಿಂದ ನಾಗರಿಕರ ನೆಮ್ಮದಿ ಹಾಳಾಗಿದೆ. ವಾರ್ಡ್‌ನಲ್ಲಿ ಬಹುತೇಕ ವಿದ್ಯುತ್‌ ದೀಪಗಳು ಕೆಟ್ಟುಹೋಗಿವೆ. ರಾತ್ರಿವೇಳೆ ದೀಪಗಳು ಇಲ್ಲದೆ ಕತ್ತಲಲ್ಲಿ ಸಂಚರಿಸುವ ಶೋಚನೀಯ ಸ್ಥಿತಿ ನಿರ್ಮಾಣವಾಗಿದೆ ಎಂದು ನಾಗರಿಕರು ತಮ್ಮ ಅಳಲು ತೋಡಿಕೊಂಡರು.

ನಗರಸಭೆ ಉಪಾಧ್ಯಕ್ಷ ಅಫ್ಸರ್‌ಪಾಷ ಅವರಿಗೆ ದೂರು ನೀಡಿದರೆ ನಗರಸಭೆಯ ಅಧಿಕಾರಿಗಳನ್ನು ಕೇಳಿ ಎನ್ನುತ್ತಾರೆ. ನಾವು ಯಾರನ್ನು ಕೇಳಬೇಕು ಎಂದು ತಿಳಿಯ ದಂತಾಗಿದೆ.

ನಮ್ಮ ವಾರ್ಡಿನಲ್ಲಿರುವ ಕೊಳ ವೆಬಾವಿಗಳ ಸಮಸ್ಯೆಯಿಂದಲೇ ನಗರಸಭೆಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ನಡುವೆ ಜಗಳ ವಾಗಿದೆ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿದಿ ಸಮಸ್ಯೆಯನ್ನು ಇತ್ಯರ್ಥ ಪಡಿಸಬೇಕು ಎಂದು ನಾಗರಿಕರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next