Advertisement

ಶೆಟ್ಟಿಕೇರಿ ಸಸ್ಯಪಾಲನಾ ಕೇಂದ್ರದಲ್ಲೀಗ  ಹಸಿರೇ ಉಸಿರು

09:42 PM Jun 29, 2021 | Team Udayavani |

ಲಕ್ಷ್ಮೇಶ್ವರ: ತಾಲೂಕು ವ್ಯಾಪ್ತಿಯ ಶೆಟ್ಟಿಕೇರಿ ಸಸ್ಯಪಾಲನಾ ಕೇಂದ್ರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಅರಣ್ಯೀಕರಣಕ್ಕೆ ಲಕ್ಷಾಂತರ ಸಸಿಗಳು ಸಿದ್ಧಗೊಂಡಿವೆ.

Advertisement

ಸುಮಾರು 30 ಎಕರೆ ವಿಸ್ತೀರ್ಣದ ಶೆಟ್ಟಿಕೇರಿ ಕೆರೆಯಂಚಿನ ಅರಣ್ಯ ಪ್ರದೇಶದಲ್ಲಿ ಸಾಮಾಜಿಕ ಮತ್ತು ಪ್ರಾದೇಶಿಕ ಅರಣ್ಯ ಇಲಾಖೆಯ ಎರಡು ಪ್ರತ್ಯೇಕ ಸಸ್ಯಪಾಲನಾ ಕೇಂದ್ರಗಳಿದ್ದು, ಇಲ್ಲಿನ ಅ ಧಿಕಾರಿಗಳು, ಸಿಬ್ಬಂದಿ ವರ್ಗ, ದಿನಗೂಲಿ ಕೆಲಸಗಾರರು ಸಸಿಗಳ ಪಾಲನೆ-ಪೋಷಣೆ ಮೂಲಕ ಹಸಿರೀಕರಣಕ್ಕಾಗಿ ಶ್ರಮಿಸುತ್ತಿದ್ದಾರೆ. ಇದರ ಫಲವಾಗಿ ಸಾಮಾಜಿಕ ಅರಣ್ಯ ವಲಯ ವಿಭಾಗದಿಂದ 1,31,732 ಸಸಿಗಳು ಮತ್ತು ಪ್ರಾದೇಶಿಕ ವಲಯದಿಂದ 1,18,981 ಸಸಿಗಳು ಸಿದ್ಧಗೊಂಡಿವೆ.

ವಿವಿಧ ಜಾತಿಯ ಸಸಿಗಳು: ಶೆಟ್ಟಿಕೇರಿ ಸಸ್ಯಪಾಲನಾ ಕೇಂದ್ರದಲ್ಲಿ ರೈತರಿಗಾಗಿ,ರಸ್ತೆಬದಿ, ಶಾಲಾ-ಕಾಲೇಜು ಮೈದಾನಗಳಲ್ಲಿ ನೆಡಲು ಸಸಿಗಳು ಲಭ್ಯವಿವೆ. ಬೇವು, ತಪ್ಪಸಿ, ಹಲಗಲ, ಗುಲ್‌ಮೊಹರ್‌, ಅಶೋಕ, ಹುಣಸಿ, ಮಹಾಗನಿ, ಶ್ರೀಗಂಧ, ಕಾಡು ಬಾದಾಮಿ, ಬಂಗಾಳಿ, ಕರಿಬೇವು, ನೆಲ್ಲಿ, ಸಾಗವಾನಿ, ನುಗ್ಗಿ, ರೆಂಟ್ರಿ, ಇಲಾತಿ ಹುಣಸಿ, ಬನ್ನಿ, ಪೇರಲ, ಮಾವು ಇತರೆ ಸಸಿಗಳಿವೆ. ಈಗಾಗಲೇ ರೈತರು, ಸಾರ್ವಜನಿಕರು, ಸರ್ಕಾರಿ ಇಲಾಖೆಯವರು, ಗ್ರಾಪಂ-ತಾಪಂ, ಶಾಲಾ-ಕಾಲೇಜು, ಸಂಘ-ಸಂಸ್ಥೆಗಳು ಇಲ್ಲಿಂದ ಉಚಿತವಾಗಿ ಸಸಿ ಪಡೆದು ನೆಟ್ಟಿರುವ ಮತ್ತು ನೆಡುತ್ತಿರುವ ಕಾರ್ಯಗಳು ಪ್ರಗತಿ ಹಂತದಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next