Advertisement

ಪುಟಾಣಿಗಳಿಗೆ ಅಕ್ಷರಾಭ್ಯಾಸ, ಮಕ್ಕಳಿಗೆ ವ್ರತ ದೀಕ್ಷೆ

01:00 AM Feb 13, 2019 | Harsha Rao |

ಬೆಳ್ತಂಗಡಿ: ಧರ್ಮಸ್ಥಳದ ಭಗವಾನ್‌ ಶ್ರೀ ಬಾಹುಬಲಿಯ ಮಹಾಮಸ್ತಕಾಭಿಷೇಕದ ಅಯೋಧ್ಯಾ- ಪೌದನಪುರನಗರ ಸಭಾಂಗಣದಲ್ಲಿ ಮಂಗಳವಾರ 36 ಪುಟಾಣಿಗಳು ಅಕ್ಷರಾಭ್ಯಾಸ ಹಾಗೂ 166 ಮಕ್ಕಳು ವ್ರತಾಚರಣೆ ದೀಕ್ಷೆ ಪಡೆದರು.

Advertisement

ಪುಟಾಣಿಗಳಿಗೆ ಆಚಾರ್ಯ ಶ್ರೀ ವರ್ಧಮಾನ ಸಾಗರಜೀ ಮುನಿ ಮಹಾರಾಜ್‌ ಹಾಗೂ ಆಚಾರ್ಯ ಶ್ರೀ ಪುಷ್ಪದಂತ ಸಾಗರ ಮುನಿ ಮಹರಾಜ್‌ ಅವರು ಸುವರ್ಣ ಶಲಾಕೆಯಿಂದ ಓಂಕಾರವನ್ನು ಬರೆಸುವ ಮೂಲಕ ಅಕ್ಷರಾಭ್ಯಾಸ ನಡೆಸಿಕೊಟ್ಟರು. ಮಕ್ಕಳ ಜತೆಗೆ ಪೋಷಕರು ಕೂಡ ಸ್ವಾಮಿಗಳ ಆಶೀರ್ವಾದ ಪಡೆದರು.

ಜೈನ ಸಮುದಾಯದ 110 ಗಂಡು ಮಕ್ಕಳು ಹಾಗೂ 56 ಹೆಣ್ಣುಮಕ್ಕಳು ಸೇರಿ ಒಟ್ಟು 166 ಮಕ್ಕಳು ಕಾರ್ಕಳ ದಾನಶಾಲೆಯ ಹುಂಬುಜ ಶ್ರೀ ಹಾಗೂ ಸಿಂಹನಗದ್ದೆ ಶ್ರೀಗಳ ಸಮ್ಮುಖದಲ್ಲಿ ವ್ರತಾಚರಣೆ ಸ್ವೀಕರಿಸಿದರು.

ಸಿಂಹನಗದ್ದೆ ಬಸ್ತಿ ಮಠದ ಶ್ರೀ ಲಕ್ಷ್ಮೀಸೇನಾ ಭಟ್ಟಾರಕ ಮಹಾ ಸ್ವಾಮೀಜಿ ಪ್ರವಚನ ನೀಡಿ, ಜಿನನ ಅನುಯಾಯಿಗಳು ಜೈನರು. ಬಾಲಕರು 8 ವರ್ಷ ವಯಸ್ಸಿನ ಬಳಿಕ ವ್ರತಾಚರಣೆಗೆ ಅರ್ಹರಾಗಿದ್ದು, ಆಹಾರ, ಪೂಜೆ, ಧಾರ್ಮಿಕ ಕ್ರಿಯೆಗಳಿಗೆ ಅರ್ಹರಾಗುತ್ತಾರೆ. ವ್ರತ, ಜನಿವಾರವಿಲ್ಲದೆ ಬಸದಿ ಪ್ರವೇಶಿಸಿದರೆ, ವ್ರತವಿಲ್ಲದೆ ಮದುವೆಯಾದರೆ ಪಿಂಡಶುದ್ಧಿಯನ್ನು ಕಳೆದುಕೊಳ್ಳುತ್ತಾರೆ. ಉಪವಾಸ ಆಚರಣೆಯೇ ಜೈನರ ಹಬ್ಬವಾಗಿದೆ ಎಂದರು.

ಶ್ರೀಕ್ಷೇತ್ರ ಹೊಂಬುಜದ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಪ್ರವಚನ ನೀಡಿ, ವ್ರತಾಚರಣೆ ಮಾಡಿದವರು ಅಹಿಂಸೆ ಹಾಗೂ ಸತ್ಯ ಮಾರ್ಗದಲ್ಲಿ ನಡೆಯುವ ದೃಢ ನಿರ್ಧಾರ ಕೈಗೊಳ್ಳಬೇಕು. ಮದ್ಯ, ಮಾಂಸ, ಮಧು (ಜೇನು) ಸೇವನೆ ತ್ಯಾಗ ಪ್ರಮುಖ ಅಂಗವಾಗಿದೆ. ಜೇನು ಸೇವಿಸಿದರೆ 7 ಗ್ರಾಮದ ಜೀವರಾಶಿ 
ನಾಶ ಮಾಡಿದ ದೋಷ ಉಂಟಾಗು ತ್ತದೆ ಎಂದರು.

Advertisement

ಕಾರ್ಕಳ ದಾನ ಶಾಲೆ ಸ್ವಸ್ತಿಶ್ರೀ ಲಲಿತ ಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿ ಪ್ರವಚನ ನೀಡಿ,
ಶಾಸ್ತ್ರಗಳನ್ನು ಭಗವಂತನ ಆದೇಶ ಎಂದು ತಿಳಿದು ಪಾಲಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next