Advertisement

ಶೆಂಝೆನ್‌ ಓಪನ್‌: ಶರಪೋವಾಗೆ ಆಘಾತ

06:35 AM Jan 06, 2018 | |

ಶೆಂಝೆನ್‌: ಮರಿಯಾ ಶರಪೋವಾ ಅವರನ್ನು ಕಠಿನ ಹೋರಾಟದಲ್ಲಿ ಕೆಡಹಿದ ಹಾಲಿ ಚಾಂಪಿಯನ್‌ ಜೆಕ್‌ ಗಣರಾಜ್ಯದ ಕ್ಯಾತರೀನಾ ಸಿನಿಯಾಕೋವಾ ಅವರು ಶೆಂಝೆನ್‌ ಓಪನ್‌ ಟೆನಿಸ್‌ ಕೂಟದ ಫೈನಲ್‌ ಹಂತಕ್ಕೇರಿದ್ದಾರೆ. ಫೈನಲ್‌ನಲ್ಲಿ ಅವರು ವಿಶ್ವದ ನಂಬರ್‌ ವನ್‌ ಆಟಗಾರ್ತಿ ಸಿಮೋನಾ ಹಾಲೆಪ್‌ ಅವರನ್ನು ಎದುರಿಸಲಿದ್ದಾರೆ.

Advertisement

ಶರಪೋವಾ ಅವರ ಸವಾಲನ್ನು ದಿಟ್ಟವಾಗಿ ಎದುರಿಸಿದ ಸಿನಿಯಾಕೋವಾ 6-2, 3-6, 6-3 ಸೆಟ್‌ಗಳಿಂದ ಗೆಲುವು ಸಾಧಿಸಿ ಪ್ರಶಸ್ತಿ ಸುತ್ತಿಗೇರಿದರು. ಮೊದಲ ಸೆಟ್‌ ಸೋತ ಬಳಿಕ ಶರಪೋವಾ ಅಮೋಘವಾಗಿ ಆಡಿ ದ್ವಿತೀಯ ಸೆಟ್‌ ತನ್ನದಾಗಿಸಿಕೊಂಡರು. ಆದರೆ ನಿರ್ಣಾಯಕ ಸೆಟ್‌ನಲ್ಲಿ ಶರಪೋವಾ ಮತ್ತೆ ಎಡವಿದರು.

ಇನ್ನೊಂದು ಸೆಮಿಫೈನಲ್‌ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಹಾಲೆಪ್‌ ರೊಮಾನಿಯಾದ ಐರಿನಾ ಕ್ಯಾಮಿಲಿಯಾ ಬೆಗು ಅವರನ್ನು 6-1, 6-4 ಸೆಟ್‌ಗಳಿಂದ ಉರುಳಿಸಿ ತನ್ನ ಬಾಳ್ವೆಯಲ್ಲಿ ಇಲ್ಲಿ ಎರಡನೇ ಬಾರಿ ಫೈನಲಿಗೇರಿದರು.
ಇದೊಂದು ಅತ್ಯಂತ ಕಠಿನ ಪಂದ್ಯವಾಗಿತ್ತು. ಅವರು ಬಲಿಷ್ಠ ಆಟಗಾರ್ತಿ ಎಂಬುದು ತಿಳಿದಿದೆ. ದ್ವಿತೀಯ ಸೆಟ್‌ನಲ್ಲಿ ಅವರು ಮುನ್ನಡೆ ಸಾಧಿಸಲು ಬಹಳಷ್ಟು ಶ್ರಮ ವಹಿಸಿದರು. ಇದರಿಂದ ಹೋರಾಟ ತೀವ್ರಗೊಂಡಿತು ಎಂದು ಹಾಲೆಪ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next