Advertisement

ಕೈ ಅಧ್ಯಕ್ಷ ಚುನಾವಣೆಗೆ ಶೆಹಜಾದ್‌ ವಿರೋಧ

06:00 AM Dec 01, 2017 | Team Udayavani |

ಹೊಸದಿಲ್ಲಿ: ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆಗೆ ಪಕ್ಷದೊಳಗೇ ವಿರೋಧ ವ್ಯಕ್ತವಾಗಿದೆ. ಇದು ಚುನಾವಣೆಯಲ್ಲ. ಬದಲಿಗೆ ಆಯ್ಕೆ ಎಂದು ಮಹಾರಾಷ್ಟ್ರ ಕಾಂಗ್ರೆಸ್‌ ಕಾರ್ಯದರ್ಶಿ ಶೆಹಜಾದ್‌ ಪೂನಾವಾಲ ಬುಧವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಪಾರದರ್ಶಕ ವಿಧಾನದಲ್ಲಿ ಚುನಾವಣೆ ನಡೆಸಿದರೆ ನಾನೂ ಸ್ಪರ್ಧಿಸುತ್ತೇನೆ. ಆದರೆ ಇಂತಹ ಚುನಾವಣೆಯಲ್ಲಿ ನಾನು ಸ್ಪರ್ಧಿಸಲಾರೆ. ರಾಹುಲ್‌ ಮೊದಲು ತನ್ನ ಉಪಾಧ್ಯಕ್ಷ ಹುದ್ದೆಗೆ ರಾಜೀನಾಮೆ ಕೊಡಬೇಕು. ಟಿವಿಯಲ್ಲಿ ಮುಖಾಮುಖೀ ಚರ್ಚೆಗೆ ರಾಹುಲ್‌ ಆಗಮಿಸಲಿ. ಪಕ್ಷದ ಬಗ್ಗೆ ನಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅವರು ತಯಾರಿದ್ದಾರೆಯೇ? ನಮ್ಮನ್ನು ಮೆರಿಟ್‌ನಿಂದ ತೀರ್ಮಾನಿಸಲಿ. ಬದಲಿಗೆ ಅಡ್ಡಹೆಸರಿನಿಂದಲ್ಲ ಎಂದು ಅವರು ಟೀಕಿಸಿದ್ದಾರೆ. 

ಈ ಬಗ್ಗೆ ರಾಹುಲ್‌ ಗಾಂಧಿಗೆ ಅವರು ಪತ್ರವನ್ನೂ ಬರೆದಿದ್ದಾರೆ. ಹದಿನೈದು ವರ್ಷಗಳಿಂದಲೂ ಕಾಂಗ್ರೆಸ್‌ನಲ್ಲಿ ದುಡಿದು ಈಗ ನಾನು ರಾಜ್ಯ ಕಾರ್ಯದರ್ಶಿ ಸ್ಥಾನಕ್ಕೆ ಬಂದಿದ್ದೇನೆ. ಆದರೆ ಇದ್ದಕ್ಕಿದ್ದಂತೆ ರಾಹುಲ್‌ ಹೇಗೆ ಉಪಾಧ್ಯಕ್ಷನಾಗಿದ್ದಾರೆ? ಅದೂ ಅಲ್ಲದೆ ತಾಯಿಯೇ ಅಧ್ಯಕ್ಷೆಯಾಗಿರುವಾಗ ಅವರು ಉಪಾಧ್ಯಕ್ಷ ಸ್ಥಾನ ಹೇಗೆ ಅಲಂಕರಿಸಿದರು ಎಂದು ಅವರು ಪ್ರಶ್ನಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next