Advertisement

ಶೀಘ್ರದಲ್ಲೇ ಶೀತಲ್‌ ಕಾರು ಬಿಡುಗಡೆ

10:30 AM Dec 11, 2019 | Team Udayavani |

ಶೀತಲ್‌ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದಿರುವ ಕಿರುಚಿತ್ರ “ಕಾರು’ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಪುಟ್ಟ ವಯಸ್ಸಿನಲ್ಲಿ ಎಲ್ಲರನ್ನೂ ಒಂದೊಂದು ವಿಚಾರಗಳು ಕಾಡಿರುತ್ತವೆ. ಅವುಗಳೆಲ್ಲ ಆ ಎಳೇ ಮನಸುಗಳಲ್ಲಿ ನಾನಾ ಕಲ್ಪನೆಗಳಾಗಿ ಗರಿ ಬಿಚ್ಚಿಕೊಂಡಿರುತ್ತವೆ.

Advertisement

ಹಾಗೆಯೇ ಇಲ್ಲಿ ಎಳೇ ವಯಸ್ಸಿನ ಹೆಣ್ಣು ಮಗುವೊಂದನ್ನು ಕಾರೊಂದು ಬೆರಗಿನಂತೆ ಕಾಡುವ ಕಥಾನಕ “ಕಾರು’ ಕಿರುಚಿತ್ರದ ಪ್ರಧಾನ ಅಂಶ. ಈ ಕಥಾ ಎಳೆಯೊಂದಿಗೆ ಸೀಮಿತಾವಧಿಯಲ್ಲಿಯೇ ಹೇಳಲು ಶೀತಲ್‌ ಪ್ರಯತ್ನಿಸಿದ್ದಾರಂತೆ. ಈ ಕಥೆಗೆ ಹೊಂದುವಂತಹ ಹೆಣ್ಣು ಮಗುವನ್ನು ಆಡಿಷನ್‌ ಮೂಲಕವೇ ಆಯ್ಕೆ ಮಾಡಿಕೊಳ್ಳಲಾಗಿದೆ.

ಇದರ ಬಹುತೇಕ ಚಿತ್ರೀಕರಣವನ್ನು ಮಾರ್ಕೋನಹಳ್ಳಿ ಡ್ಯಾಂ ಸುತ್ತಮುತ್ತಲ ಪ್ರದೇಶಗಳಲ್ಲಿ ನಡೆಸಲಾಗಿದೆ. ಶೀತಲ್‌ ನಿರ್ದೇಶಕಿಯಾಗುವ ಹಾದಿಯಲ್ಲಿ ಜೊತೆಯಾಗಿದ್ದ ಶಿವು ಮತ್ತು ಪಚ್ಚಿ ಈ ಕಿರು ಚಿತ್ರದಲ್ಲಿಯೂ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಚಿತ್ರಕ್ಕೆ ಯೋಗೀಶ್ವರ್‌ ಛಾಯಾಗ್ರಹಣ, ಋತ್ವಿಕ್‌ ಸಂಕಲನ, ಅನಂತ್‌ ಕಾಮತ್‌ ಸಂಗೀತ ನಿರ್ದೇಶನ ಈ ಕಿರುಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next