Advertisement
ಆ ಕುರಿಗಳೆಲ್ಲ “ಬ್ಯಾ… ಬ್ಯಾ…’ ಅನ್ನೋದನ್ನು ಕೇಳ್ತಾ, ಎಲ್ಲ ಕುರಿಗಾಹಿಗಳಂತೆ ನಾನೂ ಸುಮ್ಕಿದ್ದೆ. ಬೆಳಗ್ಗೆದ್ದರೆ ನನ್ನ ಶಿರಹಟ್ಟಿ ಗುಡಿಸಲಿನ್ಯಾಗ ಅದೇ ಶಬ್ದ ನನ್ನ ಕಿವಿಗೆ ಬೀಳೆôತ್ರೀ. ನಿಧಾನಕ್ಕೆ ಎದ್ದು ಕಣ್ಣುಜ್ಜಿಕೊಳ್ತಾ ನಾನು ಮೊದಲು ನೋಡೋದೂ ಹಟ್ಟಿಯಾಗಿನ ಅವುಗಳ ಮುಖಗಳನ್ನೇ. ಆಗಲೂ ಅವು ನನ್ನನ್ನ ನೋಡಿದ ಕೂಡಲೇ “ಬ್ಯಾ… ಬ್ಯಾ…’ ಅಂತಲೇ ಮಾತಾಡಿಸ್ತಿದುÌ. ಹುಟ್ಟಿದಾಗಿನಿಂದ ಕೇಳ್ತಾ ಬಂದ ಈ ಪದ ನನಗೆ ಯಾವತ್ತೂ ಸಪ್ಪೆ ಅಂತನ್ನಿಸ್ಲಿಲಿÅà. ಕಾರಣ, ನನ್ನ ಪಾಲಿಗೆ ಅದೇ ಚೊಲೊ ಸಂಗೀತ, ಅದಕ್ಕಿಂತ ಚೊಲೋ ಪದ ಭೂಮಿ ಮ್ಯಾಗೆ ಬೇರೆ ಇಲಿÅà.
Related Articles
Advertisement
ಅಂದು ಕುರಿಗಳು ತಮ್ಮ ಪಾಡಿಗೆ ತಾವು ಮೇಯುತ್ತಾ ಇದುÌ. “ಬ್ಯಾ… ಬ್ಯಾ…’ ಎನ್ನುತ್ತಾ ತಮ್ಮದೇ ರಾಗದಾಗ ಚೊಲೋ ಹಾಡ್ತಿದುÌ. ಆಗ ನಂಗೂ ಹಾಡುವ ಮನ್ಸಸಾತು. ಶಿವಣ್ಣನ “ಸಾಗರಿಯೇ.. ಸಾಗರಿಯೇ..’ ಹಾಡನ್ನು ಸೆಲ್ಫಿ ವಿಡಿಯೋ ಮಾಡ್ತಾ, ಹಾಡಿದೆ. ಖರೇ ಹೇಳ್ತೀನ್ರೀ, ಆ ಹಾಡಿನ ಅರ್ಥ ಇವತ್ತಿಗೂ ನಂಗೊತ್ತಿಲಿÅà. ಅದನ್ನು ಊರಿನ್ಯಾಗಿನ ಕುರುಬರ ಸಂಘದ ವಾಟ್ಸಾಪ್ ಗ್ರೂಪ್‌ಗೆ ಹಾಕಿದ್ದೆ. ಅವತ್ತು ಸಂಜೆ ಆಗ್ತಿದ್ದಂಗೆ, ಕುರಿಗಳನ್ನು ಹೊಡ್ಕೊಂಡು ಮನಿ ಕಡೀಗೆ ಹೋಗಿ, ರೊಟ್ಟಿ ತಿನ್ಕೊಂಡು ಮಲಗಿದೆ.
ಮರುದಿನ ಎದ್ದಾಗ, ಆ ವಿಡಿಯೋ ದೊಡ್ಡ ಸುದ್ದಿ ಆತ್ರೀ. ಪೇಸುºಕ್ಕು, ವಾಟ್ಯಾಪ್‌ನ್ಯಾಗೂ ಅದು ಎಲ್ಲೆಲ್ಲೋ ಹೋಗಿ, ಕೊನೆಗೆ ಟಿವಿನ್ಯಾಗೂ ಬಂತ್ರೀ. ಅವ್ವ ರೊಕ್ಕ ಕೂಡಿಡದೇ ಹೋಗಿದ್ರೆ, ನನ್ನ ಹಾಡು ಇವತ್ತು ಅದೇ ಗುಡ್ಡದ ಮ್ಯಾಗ ಕುಂತಿರಿ¤ತ್ತು. ಅದೇ ಮೇಕೆಗಳಷ್ಟೇ ಕೇಳ್ಕೊಂಡು, ಮೇಯೊRಂಡು, ಹೋಗ್ತಿದುÌ.
ಗದಗ ಜಿಲ್ಲೆಯ ಶಿರಹಟ್ಟಿ ಸ್ಕೂಲ್‌ನ್ಯಾಗ ಎಂಟನೇ ತರಗತಿ ವರೆಗೆ ಓದಿದ್ದೆ. ನನ್ನ ತಂದೆ ಭರಮಪ್ಪ, ತಾಯಿ ಕಾಶವ್ವ. ಅವರಿಗೆ ಐದು ಗಂಡು, ಐದು ಹೆಣ್ಣು. ಹತ್ತನೇ ಮಗನಾಗಿ ನಾ ಹುಟ್ಟಿದ್ದೆ. ನನ್ನ ಬಿಟ್ಟರೆ ಮನಿಯಾಗ ಯಾರೂ ಸಾಲಿ ಕಲ್ತಿಲಿÅà. ಒಪ್ಪೊತ್ತಿನ ಊಟಕ್ಕೆ ಗತಿ ಇರ್ಲಿಲಿÅà. ಇನ್ನು ಸಾಲಿಗೆಲ್ಲ ರೊಕ್ಕ ಜೋಡಿಸೋದು ಅಂದ್ರ, ಭಾಳ ಕಷ್ಟ ಆಗ್ತಿತ್ರೀ. ಅದಕ್ಕ ನಾನೂ ಸಾಲಿ ಬಿಟ್ಟೆ. ನನ್ನ ಗೆಳೆಯರೆಲ್ಲ ಗದಗಕ್ಕ, ಬೆಂಗಳೂರಿಗೆ ಅಂತ ಕೆಲ್ಸಕ್ಕೆ ಹೊಂಟೊØàದ್ರು. ಆದ್ರ, ನಾನು ಹೋಗ್ಲಿಲಿÅà. ಒಂದು ಕುರಿ ಮುಂದೆ ಹೋದಾಗ, ಅದರ ಹಿಂದ ಎಲ್ಲ ಕುರಿಗಳು ಮುಗ್ಧವಾಗಿ ಹೋಗ್ತವಲಿÅà ಹಂಗೇ ನನ್ನ ಜೀವ°. ಹಿರಿಯರು ಏನು ದಾರಿ ಹಾಕ್ಕೊಟ್ಟಾರೋ, ಅದೇ ಹಾದಿಯಾಗ ಹೊಂಟೀನಿ. ಕುರಿಗಳೇ ನಂಗೆ ದ್ಯಾವ್ರು, ಅವೇ ನನ್ ಜೀವ. ಅವು ತೋರಿಸಿದ್ದೇ ನಂಗೆ ದಾರಿ.
ಆರು ತಿಂಗಳ ಹಿಂದೆ ಮದ್ವಿ ಮಾಡ್ಕೊಂಡೆ. ಐವತ್ತು ಕುರಿಗಳನ್ನು ಸಾಕ್ಕೊಂಡಿವ್ನಿ. ಬೆಳಗ್ಗಿ ಹೊಂಟೊØàದ್ರೆ, ಮತ್ತೆ ಬರೋದು ಆರು ಗಂಟಿಗೆ. ಈ ನಡುವೆ ಪಟ ತಕ್ಕೊಳ್ಳೋದು, ವಿಡಿಯೋ ಮಾಡಿ, ಹಾಡು ಹಾಡೋದು ಅಭ್ಯಾಸ ಆಗಿºಟ್ಟಿದೆ. ಈಗ ಟೀವಿಲೂ ಬಂದಾದ್ಮೇಲೆ ಫೋನಿಗೆ ಬಿಡುವೇ ಇಲ್ಲ ಅಂತಾಗೈತ್ರೀ.
ಸಿನಿಮಾ ಹಾಡುಗಳೆಂದರೆ ಇಷ್ಟ. . .ಓದು ಬರಹ ಗೊತ್ತಿಲ್ಲದ ನನ್ನ ತಂದೆ ಡೊಳ್ಳಿನ ಪದ ಹಾಡ್ತಿದ್ರು. ನನ್ನ ಅಣ್ಣ ಕರಿಯಪ್ಪ, ದೊಡ್ಡಪ್ಪ ಹಾಗೂ ಅವರ ಮಗ ದೇವಣ್ಣನೂ ಡೊಳ್ಳಿನ ಪದಗಳನ್ನು ಹಾಡ್ತಾರ. ಅವರಿಗೆ ಈ ಬಣ್ಣದ ಬದುಕಿನ ಬಗ್ಗೆ, ಸಿನಿಮಾ ಬಗ್ಗೆ ಅಷ್ಟೊಂದು ಗೊತ್ತಿಲಿÅà. ಅವರಿಂದ ನಾನೂ ಡೊಳ್ಳು ಪದಗಳನ್ನು ಹಾಡೋದು ಕಲಿತೆ. ಅನೇಕ ಡೊಳ್ಳಿನ ಪದಗಳನ್ನು ನಾನೇ ಬರೆದಿದ್ದೀನಿ. ಆಗಾಗ ನನ್ನ ಸ್ನೇಹಿತರ ಮುಂದೆ ಡೊಳ್ಳಿನ ಪದ ಹಾಡುವಾಗ, ಪಿಚ್ಚರ್ ಹಾಡು ಹಾಡುವಂತೆ ಸ್ನೇಹಿತರು ಒತ್ತಾಯಿಸ್ತಿದ್ರು. ಆಗ ನಾನು ಟೀವಿಯಲ್ಲಿ ನೋಡಿದ್ದ, ಮೊಬೈಲ್‌ನಲ್ಲಿ, ರೇಡಿಯೋದಲ್ಲಿ ಕೇಳಿದ್ದ ಹಾಡುಗಳನ್ನು ಹಾಡ್ತಿದ್ದೆ. ಚಿಕ್ಕಂದಿನಿಂದಲೂ ಸಿನಿಮಾ ಅಂದ್ರೆ, ಸಿನಿಮಾ ಹಾಡುಗಳೆಂದರೆ ನಂಗೆ ಇಷ್ಟ. ಕುರಿಗಳಿಂದ ಮನುಷ್ಯ ಕಲಿಯುವ ಪಾಠಗಳು
“ಕುರಿಗಾಹಿ’ಯ ಬದುಕನ್ನೇ ಆಧರಿಸಿದ ಒಂದು ಲವಲವಿಕೆಯ ಕತೆ “ದಿ ಆಲ್‌ಕೆಮಿಸ್ಟ್’ ಬಲುಜನಪ್ರಿಯ. ಬ್ರೆಜಿಲ್‌ನ ಕತೆಗಾರ “ಪಾಲೊ ಕೊಯಿಲೋ’ ಅಲ್ಲಿ ಕುರಿಗಳಿಂದ ಮನುಷ್ಯ ಕಲಿಯಬಹುದಾದ ಪಾಠಗಳನ್ನೂ ಉಲ್ಲೇಖೀಸಿದ್ದಾರೆ. ಅಂಥದ್ದೇ ನಂಬಿಕೆಯಲ್ಲಿ ಹನುಮಂತ ಬಟ್ಟೂರ ಜೀವನವೂ ಸಾಗಿದೆ. ಅಷ್ಟಕ್ಕೂ ಮನುಷ್ಯರು ಕುರಿಗಳಿಂದ ಕಲಿಯುವುದು ಏನನ್ನು? 1. ನಂಬಿಕೆ: ಕುರಿಗಳು ನಂಬಿಕಸ್ಥ ಪ್ರಾಣಿಗಳು. ಅವುಗಳಿಗೆ ತಮ್ಮ ಮಾಲೀಕನ ಮೇಲೆ ಅಪಾರ ನಂಬಿಕೆ. ಆತನನ್ನ ನಂಬಿ, ಅವನ ಜೊತೆ ಊರೂರು ಅಲೆಯುತ್ತವೆ. ಉಣ್ಣೆ ಕಿತ್ತುಕೊಂಡರೂ, ಮಾಂಸಕ್ಕಾಗಿ ಮಾರಿದರೂ ಮನುಷ್ಯನ ಮೇಲೆ ಅವುಗಳಿಗಿರುವ ನಂಬಿಕೆಯಲ್ಲಿ ರವೆಯಷ್ಟೂ ವ್ಯತ್ಯಾಸವಾಗುವುದಿಲ್ಲ. 2. ಅಲ್ಪತೃಪ್ತರು: ಕುರಿಗಳಿಗೆ ಬೇಕಾದ್ದು ನೀರು ಮತ್ತು ಮೇವು. ಅವರೆಡು ಸಿಕ್ಕಿ ಬಿಟ್ಟರೆ ಸಂತೃಪ್ತಿಯಿಂದ ಬದುಕಿ ಬಿಡುತ್ತವೆ. ನಾಳೆಗೆ ಎಂದು ಆಹಾರ ಕೂಡಿಡುವುದಾಗಲಿ, ಇನ್ನೊಬ್ಬರ ಮೇವನ್ನು ಕಿತ್ತು ತಿನ್ನುವ ಕೆಟ್ಟ ಬುದ್ಧಿಯಾಗಲಿ ಇಲ್ಲ. ವರ್ತಮಾನದಲ್ಲಿ ಬದುಕುವ ಸಂತೃಪ್ತ ಜೀವಿಗಳವು. 3.ಶತ್ರುವಿನೊಡನೆ ಸೆಣಸಾಟ: ಕುರುಗಾಹಿಯೊಡನೆ ಊರೂರು ಅಲೆಯುವ ಕುರಿಗಳು, ತೋಳಗಳಂಥ ಕ್ರೂರ ಪ್ರಾಣಿಗಳ ಬಾಯಿಗೆ ಬೀಳುವ ಅಪಾಯ ಹೆಚ್ಚು. ಅಂಥ ಸಂದರ್ಭಗಳಲ್ಲಿ ಕುರಿ ಹಿಂಡಿನಲ್ಲಿರುವ ಟಗರುಗಳು ಧೈರ್ಯದಿಂದ ಶತ್ರುವನ್ನು ಎದುರಿಸುತ್ತವೆ. ಮಂದೆಯ ಯಾವ ಕುರಿಗೂ ತೊಂದರೆಯಾಗದಂತೆ ಅಪಾಯದ ಎದುರು ಹೋರಾಟ ನಡೆಸುತ್ತವೆ. 4. ಅಂತರಂಗದ ಭಾಷೆ: ಕುರಿಗಳಿಗೆ ಮಾತು ಬರುವುದಿಲ್ಲ. ಆದರೆ, ಕುರಿಗಾಹಿಯ ಭಾಷೆ ಅವುಗಳಿಗೆ ಅರ್ಥವಾಗುತ್ತದೆ. ಅವನ ದಿನಚರಿಯನ್ನೇ ಕುರಿಗಳೂ ಪಾಲಿಸುತ್ತವೆ. ಯಾಕಂದ್ರೆ, ಪ್ರಪಂಚದಲ್ಲಿ ಎಲ್ಲರೂ ಅರ್ಥ ಮಾಡಿಕೊಳ್ಳಬಲ್ಲ ಭಾಷೆ ಒಂದಿದೆ, ಅದು ಪ್ರೇಮದ ಭಾಷೆ. ಅದು ಮೂಕಪ್ರಾಣಿಗಳಿಗೆ ಗೊತ್ತಿದೆ. 5. ಹೊಂದಾಣಿಕೆ: ಕುರಿಗಳಿಗೆ ಪ್ರಯಾಣ ಹೊಸತಲ್ಲ. ಒಬ್ಬ ಕುರಿಗಾಹಿ ತನ್ನಲ್ಲಿರುವ ಕುರಿಗಳನ್ನು ಮಾರಿದರೆ, ಅವು ಇನ್ನೊಬ್ಬನ ಮಂದೆ ಸೇರಿಕೊಂಡು, ಬೇರೆ ಯಾವುದೋ ಊರು ಸೇರುತ್ತವೆ. ಹೊಸ ಕುರಿಗಾಹಿಗೆ ಹೊಂದಿಕೊಂಡು ಪ್ರಯಾಣ ಮುಂದುವರಿಸುತ್ತವೆ. ಹೊಂದಾಣಿಕೆ ಮಾಡಿಕೊಂಡು ಸುಮ್ಮನೆ ಮುಂದಕ್ಕೆ ಹೋಗುವುದಷ್ಟೇ ಅವುಗಳಿಗೆ ಗೊತ್ತು. ಕುರಿಗಳ ಚಲನಶೀಲತೆ ಮತ್ತು ಹೊಂದಾಣಿಕೆ ನಮಗೆಲ್ಲ ಮಾದರಿ. 6. ಉದಾರ ಮನೋಭಾವ: ಮೇವು, ನೀರು ನೀಡುವ ಮನುಷ್ಯನಿಗಾಗಿ ಕುರಿಗಳು ಪ್ರಾಣವನ್ನೇ ತ್ಯಾಗ ಮಾಡುತ್ತವೆ. ಉಣ್ಣೆಗಾಗಿ, ಮಾಂಸಕ್ಕಾಗಿ ಮನುಷ್ಯ ಶತ ಶತಮಾನಗಳಿಂದ ಕುರಿಗಳನ್ನು ಅವಲಂಬಿಸಿದ್ದಾನೆ. ಪದೇ ಪದೇ ಮೈ ಸುಲಿಯುವ ಮನುಷ್ಯನನ್ನೇ ಅವುಗಳು ಸ್ನೇಹಿತನಂತೆ ನೋಡುತ್ತವೆ. – ನಿರೂಪಣೆ: ಭೋಗೇಶ್ ಎಂ.ಆರ್.