Advertisement

ಒಳಗೋಡು ಕಾಡಮನೆಯಲ್ಲಿ ಕುರಿ ಮಾಂಸ ವಶ

02:59 PM Mar 21, 2022 | Team Udayavani |

ಬಾಳೆಹೊನ್ನೂರು: ಖಚಿತ ಮಾಹಿತಿ ಮೇರೆಗೆ ಪಟ್ಟಣದ ಅರಣ್ಯ ಇಲಾಖೆ ಅಧಿಕಾರಿಗಳು ಭಾನುವಾರ ದಾಳಿ ಮಾಡಿ ಅಕ್ರಮ ಕಾಡುಕುರಿ, ಕಾಡು ಹಂದಿ ಮಾಂಸ ವಶಪಡಿಸಿಕೊಂಡಿದ್ದಾರೆ. ಸಮೀಪದ ದೇವದಾನ ಗ್ರಾಮ ಪಂಚಾಯಿತಿಯ ಒಳಗೋಡು ಕಾಡಮನೆಯ ವಾಸಿಗಳಾದ ವೆಂಕಟೇಶ್‌, ಲೋಕೇಶ್‌ ಆರೋಪಿಗಳಾಗಿದ್ದು, ತಲೆಮರೆಸಿಕೊಂಡಿದ್ದಾರೆ.

Advertisement

ಮನೆಯಲ್ಲಿದ್ದ 10 ಕಿಲೋ ಮಾಂಸ, ಎರಡು ನಾಡ ಬಂದೂಕುಗಳು, ಮದ್ದು ಗುಂಡುಗಳನ್ನಿಡುವ ಚೀಲ ಮತ್ತಿತರ ವಸ್ತುಗಳನ್ನು ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ. ಡಿಎಫ್‌ಒ ಮಾಗದರ್ಶನದಲ್ಲಿ ಬಾಳೆಹೊನ್ನೂರಿನ ಆರ್‌ಎಫ್‌ಒ ನಿರಂಜನ್‌, ಕಡಬಗೆರೆಯ ಡಿವೈಆರ್‌ ಎಫ್‌ ಮಂಜುನಾಥ್‌, ಸಿಬ್ಬಂದಿಗಳಾದ ಹನುಮಂತ್‌ ಲೋನಿ, ಯೋಗಾನಂದ್‌, ಕಾರ್ತಿಕ್‌, ಪ್ರಕಾಶ್‌, ಉಮೇಶ್‌, ಧೀಕ್ಷಿತ್‌ ಮತ್ತಿತರರು ಕಾರ್ಯಾಚರಣೆಯಲ್ಲಿ ತೊಡಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next