Advertisement

ಕುರಿ ಸಾಕಿದರೆ ಕೈತುಂಬಾ ಕಾಂಚಾಣ

08:21 PM Sep 21, 2020 | Suhan S |

‌ಕುರಿ ಮತ್ತು ಮೇಕೆ ಸಾಕುವುದನ್ನು ಕೃಷಿಯೊಂದಿಗಿನ ಉಪಕಸುಬು ಎಂದು ನಂಬಿದ ದಿನಗಳೂ ಇದ್ದವು. ಈಗಕಾಲ ಬದಲಾಗಿದೆ.ಕುರಿ ಸಾಕಣೆ ಇದೀಗ ಲಾಭದಾಯಕ ಉದ್ಯಮವಾಗಿದೆ. ಅದಕ್ಕೊಂದು ವಾಣಿಜ್ಯ ಆಯಾಮವೂ ದೊರಕಿದೆ. ಈವರೆಗೂ 10-20ಕುರಿಗಳು ಅಥವಾ ಅಷ್ಟೇ ಸಂಖ್ಯೆಯ ಮೇಕೆಗಳನ್ನು ಸಾಕುವುದರಲ್ಲಿಯೇ ತೃಪ್ತಿಕಾಣುತ್ತಿದ್ದ ರೈತರು, ಇದೀಗ ಕುರಿ ಸಾಕಣೆಯನ್ನೇ ಸಂಪಾದನೆಯ ಹೊಸ ಮಾರ್ಗವಾಗಿ ಮಾಡಿಕೊಂಡಿದ್ದಾರೆ.

Advertisement

ಉದ್ಯೋಗ ನಿಮಿತ್ತ ಸಿಟಿಗೆ ಹೋಗುವ ಬದಲುಕುರಿ ಸಾಕಣೆಯಿಂದಲೇ ಸಾಕಷ್ಟು ಲಾಭ ಮಾಡಬಹುದು ಎಂದು ಯೋಚಿಸಿ, ಯುವಕರೂ ಆಸಕ್ತಿ ತೋರುತ್ತಿದ್ದಾರೆ. ಅದಕ್ಕೊಂದು ಉದಾಹರಣೆ, ಬೆಂಗಳೂರು ಜಿಲ್ಲೆ ಹೊಸಕೋಟೆ ತಾಲೂಕಿನ ಪೆತ್ತನಹಳ್ಳಿ ಗ್ರಾಮದ ಪದವೀಧರ ಅರುಣ್‌ಕುಮಾರ್‌. ಮೊನ್ನೆಮೊನ್ನೆಯವರೆಗೂ ಈತಕೃಷಿಯಲ್ಲಿ ತೊಡಗಿಕೊಂಡಿದ್ದರು.ಕೃಷಿಯಲ್ಲಿ ನಷ್ಟವಾದಾಗ,ಕುರಿ ಸಾಕಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾದರು. ಈಗ, ಆಧುನಿಕ ರೀತಿಯಲ್ಲಿ ಶೆಡ್‌ ನಿರ್ಮಿಸಿ, 100ಕ್ಕೂ ಹೆಚ್ಚು ಕುರಿಗಳನ್ನು ಸಾಕುತ್ತಿದ್ದಾರೆ. ನಾರಿ ಸುವರ್ಣ, ಶಿರಾ , ನಾಟಿ ತಳಿಯ ಕುರಿಗಳನ್ನು ಅವರ ಫಾರ್ಮ್ ನಲ್ಲಿ ಕಾಣಬಹುದು. ನೆಲದಿಂದ5 ಅಡಿ ಎತ್ತರದಲ್ಲಿ50 ಅಡಿ ಅಗಲ ಮತ್ತು50 ಅಡಿ ಉದ್ದದ ವ್ಯವಸ್ಥಿತ ಶೆಡ್‌ ನಿರ್ಮಿಸಿದ್ದಾರೆ.

ಮೇವು ಹಾಕಲು ಪ್ಲಾಸ್ಟಿಕ್‌ ಬಾನಿ ಮಾಡಿಕೊಂಡಿದ್ದಾರೆ. ಕುರಿಸಾಕಣೆಗೆ ಸಹಕಾರಿ ಸಂಘಗಳು ಹಾಗೂ ಬ್ಯಾಂಕ್‌ ಗಳಿಂದ ಸಾಲ ಸೌಲಭ್ಯವಿದೆ. ಆದರೆ ಕೋವಿಡ್ ಸಂದರ್ಭದಲ್ಲಿ ಕೆಲವೊಂದು ಬ್ಯಾಂಕ್‌ ಗಳಲ್ಲಿ ಸಾಲ ಸೌಲಭ್ಯ ದೊರೆಯುತ್ತಿಲ್ಲ. ಸದ್ಯದ ಸಂದರ್ಭದಲ್ಲಿ,ಕುರಿ ಸಾಕಲು ಯೋಚಿಸುವವರಿಗೆ ಇದೊಂದು ಕೊರತೆ ಎನ್ನಬಹುದು. ಒಂದು ಅಥವಾ ಒಂದೂವರೆ ತಿಂಗಳಕುರಿ ಮರಿಯ ಬೆಲೆ 1000 ದಿಂದ1500 ರೂಪಾಯಿಗಳು. ಅದನ್ನು ಒಂದು ವರ್ಷಕಾಲ ಉತ್ತಮ ಆಹಾರ ನೀಡಿ ಸಾಕಿದರೆ, ಆ ಕುರಿ 25 ರಿಂದ30 ಕೆ. ಜಿ ವರಗೆ ತೂಕ ಬರುತ್ತದೆ. ಈಗ, ಒಂದು ಕೆ.ಜಿ.ಕುರಿ ಮಾಂಸದ ಬೆಲೆ750 ರಿಂದ800 ರೂ. ವರೆಗೂ ಇದೆ. ಹಾಗಾಗಿ ಕುರಿ ಸಾಕಣೆಯಿಂದ ನಷ್ಟವಂತೂ ಆಗುವುದಿಲ್ಲ ಅನ್ನುವುದು ಹಲವರ ಮಾತು.

ಸಾಮಾನ್ಯವಾಗಿ ಕುರಿಗಳು ಮೇವಿನಲ್ಲಿರುವ ಎಲೆ ತಿಂದುಕಾಂಡವನ್ನು ಬಿಟ್ಟು ಬಿಡುತ್ತವೆ. ಈ ರೀತಿ ಮೇವು ವ್ಯರ್ಥವಾಗುವುದನ್ನು ತಡೆಯಲು ನಾವು ಮೇವುಕತ್ತರಿಸುವಯಂತ್ರ ಬಳಸುತ್ತೇವೆ. ಹಸಿರು ಮೇವನ್ನುಕತ್ತರಿಸಿ ಅದಕ್ಕೆ ಬೆಲ್ಲ ಹಾಗೂ ಉಪ್ಪನ್ನು ಮಿಶ್ರಣ ಮಾಡಿ, 20 ದಿನಗಳವರಗೆ ಶೇಖರಣೆ ಮಾಡಿ ನಂತರ ಕುರಿಗಳಿಗೆ ಹಾಕುತ್ತೇವೆ. ಬೆಲ್ಲ ಮತ್ತು ಉಪ್ಪು ಮಿಶ್ರಿತ ಆಹಾರ ಸೇವನೆಯಿಂದಕುರಿಗಳು ಚೆನ್ನಾಗಿ ಬೆಳೆಯುತ್ತವೆ. ಅರುಣ್‌ ಕುಮಾರ್‌, ಕೃಷಿಕ

 

Advertisement

-ಎನ್‌. ಮಹೇಶ್‌ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next