Advertisement

ಶೀನಾ ಬೋರಾ ಹತ್ಯೆ ಪ್ರಕರಣ: ಇಂದ್ರಾಣಿ ಜಾಮೀನಿಗೆ ಸಿಬಿಐ ವಿರೋಧ

08:14 PM Mar 25, 2022 | Team Udayavani |

ನವದೆಹಲಿ: ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ಅವರ ಜಾಮೀನು ಅರ್ಜಿಗೆ ಸುಪ್ರೀಂ ಕೋರ್ಟ್‌ನಲ್ಲಿ ಸಿಬಿಐ ವಿರೋಧ ವ್ಯಕ್ತಪಡಿಸಿದೆ.

Advertisement

“ಇಂದ್ರಾಣಿಯವರು ಸಂಚು ರೂಪಿಸಿ ತಮ್ಮದೇ ಪುತ್ರಿಯನ್ನು ಹತ್ಯೆಗೈಯ್ಯುವಂಥ ಹೀನಾಯ ಅಪರಾಧವೆಸಗಿದ್ದಾರೆ. ಇಂಥ ಕ್ರೌರ್ಯವು ಕ್ಷಮೆಗೆ ಅರ್ಹವಲ್ಲ’ ಎಂದೂ ಸಿಬಿಐ ಹೇಳಿದೆ.

ಇಂದ್ರಾಣಿ ತಮ್ಮ ಪುತ್ರಿಯನ್ನು ಕೊಂದಿದ್ದು ಮಾತ್ರವಲ್ಲ, ಪುತ್ರನ ಕೊಲೆಗೂ ಯತ್ನಿಸಿದ್ದಾರೆ. ಸಮಾಜದಲ್ಲಿ ಪ್ರಭಾವವಿರುವ ಮಹಿಳೆಯಾಗಿರುವ ಕಾರಣ, ಅವರು ಸಾಕ್ಷಿಗಳ ಮೇಲೂ ಪ್ರಭಾವ ಬೀರುವ ಸಾಧ್ಯತೆಯಿದೆ.

ಇದನ್ನೂ ಓದಿ :ವಿದ್ಯಾರ್ಥಿನಿ ಚಲಾಯಿಸುತ್ತಿದ್ದ ಕಾರು ಢಿಕ್ಕಿ: ಪರ್ಕಳ ವಾಮನ್ ನಾಯಕ್ ಬಲಿ

ಅಲ್ಲದೇ, ಅವರು ವಿಶ್ವಾಸಾರ್ಹರಲ್ಲ. ಹೀಗಾಗಿ ಅವರ ಜಾಮೀನು ಅರ್ಜಿಯನ್ನು ಪರಿಗಣಿಸಬಾರದು ಎಂದೂ ಸಿಬಿಐ ಮನವಿ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next