Advertisement
ಮೂಲತಃ ವಿಟ್ಲ ನಿವಾಸಿಯಾಗಿರುವ ಉದ್ಯಮಿ ಹಸೈನಾರ್ ಹಾಜಿ ಅವರ ಪುತ್ರಿ ಮರಿಯಮ್ ಸಮ್‌ರೀನಾ (19) ಮೃತಪಟ್ಟವರು. ಅಡ್ಯಾರ್ ಸಹ್ಯಾದ್ರಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿಯ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದ ಅವರು ಕೂರ್ನಡ್ಕದಲ್ಲಿ ವಾಸವಿದ್ದರು. ದರ್ಬೆ ಸಂತ ವಿಕ್ಟರ್ನಲ್ಲಿ ಪ್ರೌಢಶಿಕ್ಷಣ, ಫಿಲೋಮಿನಾ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದರು. ಎಂಜಿನಿಯರಿಂಗ್ ಶಿಕ್ಷಣಕ್ಕಾಗಿ ಸಹ್ಯಾದ್ರಿ ಕಾಲೇಜಿಗೆ ಸೇರಿದ್ದರು.
Related Articles
ಮರಿಯಮ್ ಸಮ್‌ರೀನಾ ಮಂಗಳವಾರದಿಂದ ಜ್ವರದಿಂದ ಬಳಲುತ್ತಿದ್ದರು. ಆದರೂ ಪರೀಕ್ಷೆಗೆ ಹಾಜರಾಗಲು ನಿರ್ಧರಿಸಿದ್ದರು. ಬುಧವಾರ ಬೆಳಗ್ಗೆಯೂ ಜ್ವರವಿದ್ದ ಕಾರಣ ತಾಯಿ ಬೇಡವೆಂದರೂ ಕೇಳದೆ, ಆಹಾರವನ್ನು ತಿನ್ನದೆ ಔಷಧ ಸೇವಿಸಿ, ಆ್ಯಕ್ಟಿವಾ ಹತ್ತಿದ್ದಾರೆ. ಪರೀಕ್ಷೆ ಗಡಿಬಿಡಿ ಬೇರೆ ಇದ್ದ ಕಾರಣ ಆಕೆ ಬಳಲಿ ಅಪಘಾತಕ್ಕೆ ಒಳಗಾಗಿರಬೇಕು ಎಂದು ಶಂಕಿಸಲಾಗಿದೆ. ಇದೇ ವೇಳೆ, ಅಪಘಾತ ಸಂಭವಿಸಿ ಸುಮಾರು 20 ನಿಮಿಷ ಸಮ್‌ರೀನಾ ರಸ್ತೆಯಲ್ಲೇ ಬಿದ್ದಿದ್ದರು. ತತ್‌ಕ್ಷಣವೇ ಆಸ್ಪತ್ರೆಗೆ ಸೇರಿಸಿದ್ದರೆ ಬದುಕುವ ಸಾಧ್ಯತೆ ಇತ್ತು ಎನ್ನುವ ವಾಟ್ಸ್‌ಆ್ಯಪ್ ಸಂದೇಶವೂ ಹರಿದಾಡಿದೆ.
Advertisement
ಪ್ರಕರಣ ದಾಖಲುಪುತ್ತೂರು ನಗರ ಸಂಚಾರಿ ಠಾಣೆಯಲ್ಲಿ ಐಪಿಸಿ ಕಲಂ 279, 304 (ಎ) ಅಡಿ ದೂರು ದಾಖಲಿಸಲಾಗಿದೆ. ಮರಿಯಮ್ಮ ಅವರ ಮಾವ ಹಸೈನಾರ್ ಕೆ. ಠಾಣೆಗೆ ದೂರು ನೀಡಿದ್ದಾರೆ. ಅಂತ್ಯಸಂಸ್ಕಾರ
ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ, ಬಪ್ಪಳಿಗೆ ಮದ್ರಸದಲ್ಲಿ ಅಂತಿಮ ಕ್ರಿಯೆಗಳನ್ನು ನಡೆಸಲಾಯಿತು. ಬಳಿಕ ಮೃತದೇಹವನ್ನು ಬನ್ನೂರಿನಲ್ಲಿರುವ ತಾಯಿಮನೆಗೆ ತಂದು, ಅಂತಿಮ ದರ್ಶನಕ್ಕೆ ಇಡಲಾಯಿತು. ವಿಟ್ಲ ಕೇಂದ್ರ ಜುಮ್ಮಾ ಮಸೀದಿಯ ಕಬರಸ್ಥಾನದಲ್ಲಿ ಮೃತದೇಹವನ್ನು ದಫನ ಮಾಡಲಾಯಿತು ಹೊಯಿಗೆ ತೆಗೆಸಿ
ಡಿವೈಡರ್‌ನ ಎರಡು ಬದಿಯೂ ರಾಶಿ ಬೀಳುವ ಹೊಯಿಗೆಯನ್ನು ಕನಿಷ್ಠ 15 ದಿನಕ್ಕೊಮ್ಮೆಯಾದರೂ ತೆಗೆಸುವಂತೆ ಸಾರ್ವಜನಿಕರು ಈಗಾಗಲೇ ನಗರಸಭೆಗೆ ಮನವಿ ಮಾಡಿದ್ದಾರೆ. ಈ ಹೊಯಿಗೆ ಮೇಲೆ ದ್ವಿಚಕ್ರ ವಾಹನ ಸಾಗಿದರೆ, ಸ್ಕಿಡ್ ಆಗಿ ಪಲ್ಟಿಯಾಗುವ ಸಂಭವವೂ ಇದೆ.