Advertisement
ದೇವಸ್ಥಾನದ ಹತ್ತಿರಕ್ಕೆ ಹೇಳಿದ ಸಮಯಕ್ಕಿಂತ ಹತ್ತು ನಿಮಿಷ ಬೇಗ ಬಂದು ಕಾಯ್ತಾ ಇದ್ದೀನಿ ಸುನೀತಾ.ಯಾಕೆ? ತಡವಾಗಿ ಬಂದೆ. ಸ್ವಲ್ಪ ಕೆಲಸ ಇತ್ತು ಅದಕ್ಕೆ ತಡವಾಯಿತ್ತು. ಸರಿ…ಆವಾಗಲೇ ಕಾಲ್ ಮಾಡಿ ಯಾಕೆ ಬರಬೇಕು ಅಂತ ಹೇಳಿದ್ದು ಅದನ್ನು ಮೊದಲು ಹೇಳು ಸುನೀತಾ. ಸ್ವಲ್ಪ ಮನೆಯಲ್ಲಿ ಗಲಾಟೆ ಅಷ್ಟೆ. ಮತ್ತೆ ಇನ್ನೇನು ಇಲ್ಲ ಅನು.
Related Articles
Advertisement
ಇವಾಗ ಏನು ಮಾಡಬೇಕು ಅಂತ ಹೇಳು. ನನಗೆ ಏನು ಮಾಡಬೇಕು ಅಂತ ದಿಕ್ಕೆ ತೋಚುತ್ತಿಲ್ಲ. ನೀನು ನನೆY ಸಹಾಯ ಮಾಡುತ್ತೀಯಾ. ಅಂತ ಸುನಿತಾ ಕೇಳಿದ್ದಕ್ಕೆ. ನೀನು ನನ್ನ ಗೆಳತಿ .ಇಷ್ಟೇನಾ ನೀನು ನನ್ನ ಅರ್ಥ ಮಾಡಿಕೊಂಡಿರುವುದುವುದು? ಗೆಳೆತನ ಅಂದರೆ ಬರಿ ಖುಷಿಯಲ್ಲಿ ಇದ್ದಾಗ ಮಾತ್ರ ಜತೆಯಲ್ಲಿ ಇರುವುದು ಅಲ್ಲ. ಕಷ್ಟ, ಸುಖ, ದುಃಖ ಎಲ್ಲದರಲ್ಲೂ ಜತೆಗೆ ಇರುವುದು ನಿಜವಾದ ಗೆಳೆತನ ಸುನಿತಾ. ಹೌದು ನನಗೂ ಗೊತ್ತು.
ನಾನು ಬಂದು ತುಂಬಾ ಸಮಯ ಆಯ್ತು. ತಡವಾಗಿ ಮನೆಗೆ ಹೊದರೆ ಅಪ್ಪ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಇಗಾಗಲೇ ತಡವಾಗಿದೆ. ನಾನು ಇನ್ನೂ ಹೊರಡುತ್ತೇನೆ. ಅನು ನಾನು ಹೇಳಿದ್ದ ವಿಚಾರದ ಬಗ್ಗೆ ಯೋಚನೆ ಮಾಡಿ ಸಂಜೆ ಕಾಲ್ ಮಾಡು. ನಿನ್ನ ಕಾಲ್ ಗೋಸ್ಕರ ಕಾಯ್ತಾ ಇರ್ತೀನಿ.ಎಂದು ಹೇಳಿ ಮನೆಗೆ ತಲುಪುವ ಹೊತ್ತಿಗೆ ಅಪ್ಪ ಬಾಗಿಲಿನಲ್ಲಿ ಕಾಯ್ತಾ ಕೂತ್ತಿದ್ದರು. ಅಪ್ಪನನ್ನು ನೋಡಿ ಶಾಕ್! ಆಯ್ತು ಇವತ್ತು ಏನು ಕಾದಿದೆಯೋ ಹಬ್ಬ ಅಂತ ಮನಸ್ಸಿನಲ್ಲಿ ಹೇಳಿಕೊಂಡು ಬಾಗಿಲಿನ ಹತ್ತಿರ ಬಂದೆ.
ಇಷ್ಟು ಹೊತ್ತು ಎಲ್ಲಿಗೆ ಹೋಗಿದ್ದೆ. ಮದುವೆ ವಯಸ್ಸಿಗೆ ಬಂದಿರೋ ಹೆಣ್ಣು ಮಗಳು ನೀನು ಎಷ್ಟೋತ್ತಿಗೆ ಬರಬೇಕು ಅನ್ನೋದು ಮರೆತು ಬಿಟ್ಟೆ ಹೇಗೆ? ಹುಡುಗರ ಹಾಗೇ ಊರೆಲ್ಲಾ ಸುತ್ತುಕೊಂಡು ಇವಾಗ ಮನೆಗೆ ಬರುತ್ತಿದ್ದೀಯಾ? ನೀನು ನಮ್ಮ ಮರ್ಯಾದೆ ತೆಗೆಯುವುದಕ್ಕೆ ಹುಟ್ಟಿದ್ದು ಅನಿಸುತ್ತದೆ, ಎಂದು ಬಾಗಿಲಲ್ಲಿ ನಿಲ್ಲಿಸಿ ಬೈಯಲು ಪ್ರಾರಂಭ ಮಾಡಿದರು.
ಅಷ್ಟರಲ್ಲಿ ಅವಳ ಗೆಳತಿ ಅನು ಅವಳ ಮನೆಗೆ ಬಂದು ಸರ್ ಅವಳು ನಮ್ಮ ಮನೆಗೆ ಬಂದಿದ್ಲು ಅಂತ ಹೇಳಿ ಸಮಾಧಾನ ಮಾಡಿದ್ಲುನೀನು ನನ್ನ ಗೆಳತಿ ಅಲ್ಲ? ನನ್ನ ಪಾಲಿಗೆ ನೀನು ದೇವರು, ಇದು ನನ್ನ ಕರ್ತವ್ಯ ಸುನಿ ಎಂದು ಹೇಳಿ ಹೊರಟು ಹೋದಳು. ಮಾರನೆದಿನ ಗಟ್ಟಿ ನಿರ್ಧಾರ ಮಾಡಿ ಅಪ್ಪ ನಾನು ಮದುವೆ ಆಗೋದಿಲ್ಲ. ನಾನು ಕೆಲಸಕ್ಕೆ ಹೋಗುತ್ತೀನಿ ಅಂತ ಹೇಳಿ ಅಪ್ಪನಿಗೆ ಮಾತನಾಡುವುದಕ್ಕೆ ಅವಕಾಶವನ್ನು ಕೊಡದೆ ಹೊರಟ್ಟು ಹೋದಳು. ಅನು ನನಗೆ ಪರಿಚಯ ಇರುವ ವ್ಯಕ್ತಿಯ ಕಂಪೆನಿಯಲ್ಲಿ ಕೆಲಸ ಖಾಲಿ ಇದೆ ಅಂತ ಹೇಳಿದ್ರೂ. ಬಾ ಅಲ್ಲಿಗೆ ಹೋಗಿ ಕೇಳಿದ್ದರೆ ನಮಗೆ ಕೆಲಸ ಸಿಗಬಹುದು ನೋಡೋಣ ಎಂದು ಹೊರಟರು.
ಕಂಪೆನಿಯ ಮ್ಯಾನೇಜರ್ ಸುನಿತಾಗೆ ಸಂದರ್ಶನ ಮಾಡಿದ್ದರೂ. ಅವರು ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳು ಕೊಟ್ಟಳು. ಬಹಳ ಬುದ್ಧಿವಂತೆ ಅನಿಸುತ್ತೆ ಎಂದು ಮ್ಯಾನೇಜರ್ ಮನಸ್ಸಿಲ್ಲೇ ಅಂದುಕೊಂಡರೂ…. ನಾಳೆಯಿಂದ ನೀನು ಕೆಲಸಕ್ಕೆ ಬರಬಹುದು ಎಂದು ಹೇಳಿದ್ರೂ. ಸುನಿತಾ ಗಿಂತಲೂ ಹೆಚ್ಚು ಅನುನೇ ಖುಷಿ ಪಟ್ಟುಳು. ನನ್ನ ಗೆಳತಿಗೆ ಇಂತಹ ಒಂದು ದೊಡ್ಡ ಕಂಪೆನಿಗಳಲ್ಲಿ ಕೆಲಸ ಸಿಗುವುದು ಕನಸು ಆಗಿತ್ತು ಆದರೆ ಇವತ್ತು ನನಸು ಆಯ್ತು ಅಷ್ಟೇ ಸಾಕು ನನಗೆ. ನನ್ನ ತಂದೆಯ ಜವಾಬ್ದಾರಿಯನ್ನು ತೆಗೆದು ಕೊಂಡು ತನ್ನ ತಾಯಿ ಬದುಕಿರುವಾಗಲೇ ತನ್ನ ತಂಗಿಯ ಮದುವೆಯನ್ನು ಮಾಡಿದಳು.
ತಾನು ಕೂಡ ಅಪ್ಪ ತೋರಿಸಿದ ಹುಡುಗನ ಜತೆ ವಿವಾಹವಾದಳು. ಅಪ್ಪನಿಗೆ ಕೊನೆಯದಾಗಿ ಏನೋ ಹೇಳಬೇಕೆಂದು ಬರುತ್ತಾಳೆ. ನೋಡು ಅಪ್ಪ ನೀನು ಅಂದುಕೊಂಡಂತೆ ನಾವು ಇಬ್ರೂ ವಿವಾಹ ಆದ್ವೀ ನೀನನ್ನು ಗೊಳಾಡಿಸಿದ್ದೇನೆ ಅಪ್ಪ ಆದರೆ ನಮ್ಮ ವಿವಾಹ ಮಾಡಿ ನೀನ್ನನ್ನು ಸಾಲಗಾರನನ್ನಾಗಿ ಮಾಡಿ ಹೋಗಲು ನನ್ನ ಮನಸ್ಸು ಒಪ್ಪಲಿಲ್ಲ ಅಪ್ಪ. ಅದಕ್ಕೆ ನೀನು ಏನೇ ಹೇಳಿದರೂ ನನ್ನ ಒಳ್ಳೆಯದಕ್ಕೆ ಅಂತ ಗೊತ್ತಿದ್ದರೂ ನಾನು ಕೆಲವೊಂದು ಸಾರಿ ನಿಮ್ಮ ಮಾತುಗಳನ್ನು ನಿರಾಕರಿಸಿದೆ ಅದಕ್ಕೆ ನನ್ನ ಕ್ಷಮೆಯಿರಲಿ ಅಪ್ಪ.
ನಿಸರ್ಗ ಸಿ.ಎ., ಚೀರನಹಳ್ಳಿ