Advertisement

ಶಾಂತಿಯನ್ನು ಅರಸಿ ಭಾರತಕ್ಕೆ ಬಂದೆ

11:25 AM Dec 10, 2017 | Team Udayavani |

ಪಡುಬಿದ್ರಿ: ಭಾರತೀಯ ಸಂಸ್ಕೃತಿ, ಯೋಗಗಳಿಂದ ಆಕರ್ಷಿತಳಾಗಿ ಆಯುರ್ವೇದ ಪಂಚಕರ್ಮ ಚಿಕಿತ್ಸೆ ಪಡೆದು ಕೊಳ್ಳಲು ಮತ್ತು ಶಾಂತಿಯನ್ನು ಅರಸಿ ಭಾರತಕ್ಕೆ ಬಂದಿರುವುದಾಗಿ ರಷ್ಯನ್‌ ಸಿನೆಮಾ ರಂಗದ ಹಾಸ್ಯ ನಟಿ ಅನ್ನಾ ಆರ್ಗವ ಹೇಳಿದರು.

Advertisement

ಕಾಪುನಲ್ಲಿ ಡಾ| ತನ್ಮಯ್‌ ಗೋಸ್ವಾಮಿ ಅವರಿಂದ ಪಂಚಕರ್ಮ ಚಿಕಿತ್ಸೆ ಪಡೆದುಕೊಳ್ಳಲು ಬಂದಿರುವ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಅನ್ನಾ ಅವರ ಭಾರತ ಪ್ರವಾಸ 12 ದಿನಗಳ ಅವಧಿಯದ್ದಾಗಿದೆ.

ಭಾರತೀಯ ಸಿನೆಮಾ ಅಚ್ಚುಮೆಚ್ಚು
ನನಗೆ ಭಾರತೀಯ ಸಿನೆಮಾ ಅಚ್ಚುಮೆಚ್ಚು. ಈಗಲೂ ಬಾಲಿವುಡ್‌ ಸಿನೆಮಾಗಳಲ್ಲಿ ನಟಿಸುವ ಆಕಾಂಕ್ಷೆಯಿದೆ. ಚಿಕ್ಕಂದಿನಿಂದಲೇ ಹಿಂದಿ ಚಿತ್ರಗಳತ್ತ ಆಕರ್ಷಿತಳಾಗಿದ್ದು, “ಸೀತಾ ಔರ್‌ ಗೀತಾ’ ಸಿನೆಮಾವನ್ನು ಏಳು ಬಾರಿ ವೀಕ್ಷಿಸಿದ್ದೇನೆ. “ಡಿಸ್ಕೋ ಡ್ಯಾನ್ಸರ್‌’ನಂತಹ ಹಳೆಯ ಚಿತ್ರ ಗಳನ್ನು ಬಹುವಾಗಿ ಮೆಚ್ಚಿಕೊಂಡಿದ್ದೇನೆ. ಹೊಸ ಪೀಳಿಗೆಯ ಸಿನೆಮಾಗಳಲ್ಲಿ “ಸ್ಲಂ ಡಾಗ್‌ ಮಿಲಿಯನೇರ್‌’ ಬಹಳ ಇಷ್ಟವಾಗಿದೆ. ರಾಜ್‌ಕಪೂರ್‌, ಮಿಥುನ್‌ ಚಕ್ರವರ್ತಿ ತನ್ನ ಮೆಚ್ಚಿನ ನಟರೆಂದು ಅನ್ನಾ ಆರ್ಗವ ಹೇಳಿದರು.

ಜನರನ್ನು ನಗಿಸಿದರೂ ಆತ್ಮಶಾಂತಿಯಿಲ್ಲ
ಭಾರತೀಯರು ಪ್ರಾಕೃತಿಕವಾಗಿಯೇ ಸಹಜ ನಗು ನಗುತ್ತಾರೆ. ಇಲ್ಲಿಗೆ ಬಂದ ಬಳಿಕ ಭಾರತದ ಬಗೆಗೆ ನನ್ನ
ಅಭಿಪ್ರಾಯ ಸಂಪೂರ್ಣ ಬದಲಾಗಿದೆ. ಪುತ್ರಿಯರಿಬ್ಬರು ಅಭಿನೇತ್ರಿಗಳಾಗಿದ್ದಾರೆ. ಅವರನ್ನೂ ಭಾರತಕ್ಕೆ ಕರೆತರುವ ಇಚ್ಛೆ ಇದೆ. ರಷ್ಯನ್‌ ಸಿನೆಮಾ ರಂಗದಲ್ಲಿ ಹಲವು ವರ್ಷಗಳಿಂದಲೂ ಬಲು ಬೇಡಿಕೆಯ ಹಾಸ್ಯ ನಟಿಯಾಗಿದ್ದು, ವೀಕ್ಷಕರನ್ನು ನಗಿಸುತ್ತಿದ್ದೇನೆ. ಆದರೆ ಸ್ವತಃ ನನಗೆ ಆತ್ಮಶಾಂತಿ ಇರಲಿಲ್ಲ. ಇಲ್ಲಿಗೆ ಬಂದು ಪಂಚಕರ್ಮ ಚಿಕಿತ್ಸೆಯೊಂದಿಗೆ ನಡೆಸಲಾದ ವಿರೇಚನ ಕ್ರಿಯೆಯಿಂದಾಗಿ ಉಲ್ಲಸಿತಳಾಗಿದ್ದೇನೆ ಎಂದರು.

ಶಾಂತಿ, ಸಹಬಾಳ್ವೆಯ ರಾಯಭಾರಿಯಾಗುವೆ
ಬೆಳಗ್ಗೆ ಯೋಗ, ಪಂಚಕರ್ಮ ಚಿಕಿತ್ಸೆ, ಉಪಾಹಾರದ ಬಳಿಕ ಸಮುದ್ರದಲ್ಲಿ ವಿಹಾರ, ಸಂಜೆ ವಿಶೇಷ ಉಪನ್ಯಾಸಗಳ ಶ್ರವಣ – ಇದು ಅನ್ನಾ ದಿನಚರಿ. ಡಿ.10ರಂದು ಭಾರತದಿಂದ ನಿರ್ಗಮಿಸಲಿರುವ ಅನ್ನಾ, ಮುಂದೆ ರಷ್ಯಾದಲ್ಲಿ ಶಾಂತಿ, ಸಹಬಾಳ್ವೆಯ ರಾಯಭಾರಿಯಾಗುವೆ ಎಂದು ಹೇಳಿದ್ದಾರೆ. “ಯೋಗಾಸನಗಳಲ್ಲಿ ಶವಾಸನ ನನಗೆ ಬಹಳ ಇಷ್ಟ’ ಎಂದು ವಿನೋದವಾಗಿ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next