ದೆಹಲಿ: “ನಾರಿ ಮುನಿದರೆ ಮಾರಿ”. ಈ ಮಾತಿಗೆ ದೆಹಲಿಯ ನಂಗ್ಲೋಯಿಯ ಸಿಸಿ ಟಿವಿಯಲ್ಲಿ ಸೆರೆಯಾದ ಈ ದೃಶ್ಯವೇ ಸಾಕ್ಷಿ.
ತಳ್ಳುಗಾಡಿಯಿಂದ ಇಬ್ಬರು ಹೆಂಗಸರು ಇಳಿದು ರಸ್ತೆ ದಾಟುವ ಸಂದರ್ಭದಲ್ಲಿ ಅತ್ತ ಕಡೆಯಿಂದ ಇಬ್ಬರು ಹೆಲ್ಮೆಟ್ ಧಾರಿ ಸವಾರರು ಬೈಕ್ ನಲ್ಲಿ ವೇಗವಾಗಿ ಬರುತ್ತಿದ್ದರು. ಆಗ ರಸ್ತೆ ದಾಟಲು ಕಾಯುತ್ತಿದ್ದ ಹೆಂಗಸಿನ ಕತ್ತಿಗೆ ಕೈ ಹಾಕಿ ಸರವನ್ನು ಎಳೆಯುವ ಪ್ರಯತ್ನ ಮಾಡಿ ಬೈಕ್ ಅನ್ನು ವೇಗವಾಗಿ ಓಡಿಸಲು ಪ್ರಯತ್ನ ಮಾಡಿದ್ದಾರೆ. ಇಷ್ಟೇ ಮುಂದೆ ನಡೆದದ್ದು ಹೆಂಗಸೊಬ್ಬಳ ಸಾಹಸ.
ಸರವನ್ನು ಎಳೆದುಕೊಂಡು ಓಡುವ ಬರದಲ್ಲಿದ್ದ ಕಳ್ಳರ ಕತ್ತಿನ ಪಟ್ಟಿಯನ್ನು ಎಳೆದ ಹೆಂಗಸು ಜೋರಾಗಿ ಹಿಡಿದುಕೊಂಡು ಬೊಬ್ಬೆ ಹಾಕಿದ್ದಾಳೆ. ಇದನ್ನು ಅಕ್ಕಪಕ್ಕದಲ್ಲಿದ್ದ ಸ್ಥಳೀಯರು ನೋಡಿ ಕಳ್ಳನನ್ನು ಹಿಡಿದು ಸರಿಯಾಗಿ ಥಳಿಸಿದ್ದಾರೆ. ಜೀವ ಭಯದಿಂದ ಓರ್ವ ತಪ್ಪಿಸಿಕೊಂಡು ಓಡಿದ್ದಾನೆ. ಸಿಸಿ ಟಿವಿಯಲ್ಲಿ ಸರೆಯಾದ ಈ ದೃಶ್ಯ ಈಗ ವೈರಲ್ ಆಗಿದೆ.