Advertisement

Moon spotted; ದಕ್ಷಿಣ ಕನ್ನಡ, ಉಡುಪಿಯಲ್ಲಿ ನಾಳೆ ಈದ್‌-ಉಲ್-ಫಿತರ್‌ ಆಚರಣೆ

08:21 PM Apr 09, 2024 | Team Udayavani |

ಮಂಗಳೂರು: ಸೌದಿ ಅರೇಬಿಯಾ, ಯುಎಇ, ಮತ್ತು ಕತಾರ್ ಸೇರಿ ಇತರ ರಾಷ್ಟ್ರ ಗಳಲ್ಲಿ ಈದ್ ಅನ್ನು ಏಪ್ರಿಲ್ 10 ರಂದು ಆಚರಿಸಲಾಗುತಿದ್ದು, ಕೇರಳದ ಪೊನ್ನಾನಿಯಲ್ಲಿ ಮಂಗಳವಾರ ರಾತ್ರಿ ಚಂದ್ರ ದರ್ಶನವಾಗಿರುವ ಹಿನ್ನೆಲೆಯಲ್ಲಿ ಕೇರಳ ಸೇರಿ ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿಯೂ ಬುಧವಾರ ಈದ್‌-ಉಲ್-ಫಿತರ್‌ ಆಚರಣೆ ಮಾಡಲಾಗುತ್ತಿದೆ.

Advertisement

ದಕ್ಷಿಣ ಕನ್ನಡ ಖಾಝಿ ಅಲ್ ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅವರು ಈದ್ ಆಚರಿಸಲು ಕರೆ ನೀಡಿದ್ದಾರೆ.

ದೆಹಲಿ, ಹೈದರಾಬಾದ್ ಮತ್ತು ಲಕ್ನೋ, ಹೈದರಾಬಾದ್ ನಲ್ಲಿ ಚಂದ್ರ ದರ್ಶನವಾಗಿಲ್ಲ. ಹೀಗಾಗಿ ಏಪ್ರಿಲ್ 11 ರಂದು ಈದ್ ಆಚರಣೆ ನಡೆಯಲಿದೆ.

ಜಗತ್ತಿನ ಮುಸ್ಲಿಮರು ಒಂದು ತಿಂಗಳು ಕಠಿನ ಉಪವಾಸ ವ್ರತ ಆಚರಿಸಿದ ಅನಂತರ ಸಮಾರೋಪ ಎಂಬಂತೆ ಶವ್ವಾಲ್‌ ತಿಂಗಳ ಪ್ರಾರಂಭದಂದು ಈದ್‌-ಉಲ್‌-ಫಿತರ್‌ ಆಚರಿಸುತ್ತಾರೆ.ಈದ್ ಆಚರಣೆಯ ದಿನಾಂಕವು ಶವ್ವಾಲ್ ಚಂದ್ರನ ದರ್ಶನವನ್ನು ಅವಲಂಬಿಸಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next