Advertisement

ನೈಜ ಘಟನೆಯ ಸುತ್ತ ‘ಶವಸಂಸ್ಕಾರ’

01:32 PM Sep 27, 2021 | Team Udayavani |

ನೈಜ ಘಟನೆಗಳನ್ನಿಟ್ಟುಕೊಂಡು ಸಾಕಷ್ಟು ಸಿನಿಮಾಗಳು ಬರುತ್ತಿವೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ “ಶವಸಂಸ್ಕಾರ’. ಮಂಡ್ಯ ಜಿಲ್ಲೆಯ ಹಳ್ಳಿಯಲ್ಲಿ ನಡೆದ ನೈಜ ಕತೆ ಇರುವ “ಶವಸಂಸ್ಕಾರ’ ಚಿತ್ರಕ್ಕೆ ಗಾಯಕ ರಾಜೇಶ್‌ ಕೃಷ್ಣನ್‌ ಹಾಡಿದ್ದಾರೆ.

Advertisement

ನಿರ್ಮಾಪಕರು ಮತ್ತು ಅರ್ಜುನ್‌ ಸಾಹಿತ್ಯ, ಸುಪ್ರಿತ್‌ ಗಾಂಧರ ಸಂಗೀತದಲ್ಲಿ “ಅಮ್ಮ ಕೊಟ್ಟ ಕೈಯ ತುತ್ತ, ಮುದ್ದಾಡುತ್ತಾ ಕೊಟ್ಟ ಮುತ್ತ, ಆಡಿಸುತ್ತಾ ಬೆಳದ ಹೊತ್ತ, ನೆನಪಿನಲಿ’ ಹೀಗೆ ಹಾಡಿನ ಸಾಲಿನಲ್ಲಿ ಈ ಹಾಡು ಮೂಡಿ ಬಂದಿದೆ. ಎಸ್‌.ಕೆ.ಮೋಹನ್‌ ಕುಮಾರ್‌ ಕತೆ, ಚಿತ್ರಕತೆ, ಸಂಭಾಷಣೆ ಬರೆದಿದ್ದಾರೆ ಜೊತೆಗೆ ನಿರ್ಮಾಣ ಕೂಡಾ ಇವರದ್ದೇ.

ಚಿಕ್ಕವನನಿದ್ದಾಗ ಅಮ್ಮನು ಹೇಳುತ್ತಿದ್ದ ಕತೆಯಲ್ಲಿ ಶವಸಂಸ್ಕಾರ ನಡೆಸುವವನಿಗೂ ಬದುಕು ಎನ್ನುವುದು ಇರುತ್ತದೆ. ಆತನ ಜೀವನದಲ್ಲಿ ಅನುಭವಿಸಿದ ಒಂದಷ್ಟು ಘಟನೆಗಳನ್ನು ಬಳಿಸಿಕೊಂಡು, ಉಳಿದುದನ್ನು ಕಮರ್ಷಿಯಲ್‌ ಆಗಿ ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ:ಸ್ಟಾರ್‌ ಸಿನಿಮಾಗಳ ಅಬ್ಬರ ಶುರು: ಒಂದೇ ದಿನ ಎರಡು ಸ್ಟಾರ್‌ ಸಿನಿಮಾ; ‘ಸ್ಟಾರ್‌ವಾರ್‌ ಅಲ್ಲ ‘

ಚನ್ನರಾಯಪಟ್ಟಣ, ಮಂಡ್ಯ, ಚನ್ನಪಟ್ಟಣ, ಮದ್ದೂರು, ರಾಮನಗರ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಕಾಂತರಾಜು ಗೌಡ ಈ ಚಿತ್ರದ ನಿರ್ದೇಶಕರು.

Advertisement

ಚಿತ್ರದಲ್ಲಿ ಗೋವಿಂದೇ ಗೌಡ, ಅನ್ವಿತಾ ಶೆಟ್ಟಿ, ದಿವ್ಯಶ್ರೀ, ಯತಿರಾಜ್‌, ರಂಗಭೂಮಿ ಪ್ರತಿಭೆಗಳಾದ ಪ್ರಜ್ವಲ್, ಅಕ್ಷಯ್, ದರ್ಶನ್‌, ಕಿರಣ್‌, ಗೌತಮ್, ಮೌಲ, ಆನಂದ್‌, ಅಮಿತ್‌, ಸುದೀಪ್‌, ನಾಗರತ್ನ ಮುಂತಾದವರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next