ಹೊಸದಿಲ್ಲಿ: ಗಡಿಯಲ್ಲಿ ಶತ್ರುಪಾಳಯಗಳೊಂದಿಗೆ ಹಾಗೂ ಆಂತರಿಕ ಪ್ರಕರಣಗಳಲ್ಲಿ ಧೀರೋದಾತ್ತ ಛಾತಿ ತೋರಿದ ಸೈನಿಕರು, ಪೊಲೀಸ್ ಹಾಗೂ ಇನ್ನಿತರ ಭದ್ರತಾ ಪಡೆಗಳಿಗೆ ಒಟ್ಟಾರೆ 1,380 ಶೌರ್ಯ ಪದಕ ಗಳನ್ನು ಘೋಷಿಸಲಾಗಿದೆ.
ಸ್ವಾತಂತ್ರ್ಯೋತ್ಸವ ಹಿನ್ನೆಲೆ ಹೊರಬಿದ್ದಿರುವ ಈ ಪ್ರಕಟಣೆಯಲ್ಲಿ, ಲಡಾಖ್‌ನ ಗಾಲ್ವಾನ್‌ನಲ್ಲಿ ಕಳೆದ ವರ್ಷ ನಡೆದಿದ್ದ ಭಾರತ- ಚೀನ ಸೈನಿಕರ ಮಾರಾಮಾರಿಯಲ್ಲಿ ಧೀರೋದಾತ್ತ ಹೋರಾಟ ನೀಡಿದ್ದ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಪಡೆಯ 20 ಸಿಬಂದಿಗೆ 20 ಶೌರ್ಯ ಪದಕ ಲಭ್ಯವಾಗಿರುವುದು ವಿಶೇಷ.
ಇಬ್ಬರಿಗೆ ರಾಷ್ಟ್ರಪತಿಗಳ ಪೊಲೀಸ್ ಶೌರ್ಯ ಪದಕ, 628 ಪೊಲೀಸ್ ಸಿಬಂದಿಗೆ ಶೌರ್ಯ ಪದಕ, 88 ಪೊಲೀಸ್ ಸಿಬಂದಿಗೆ ವಿಶೇಷ ಸೇವೆಗಾಗಿ ನೀಡಲಾಗುವ ರಾಷ್ಟ್ರಪತಿ ಪದಕ, ಪ್ರಶಂಸನೀಯ ಸೇವೆಗಳಿಗಾಗಿ 662 ಪೊಲೀಸ್ ಪದಕಗಳನ್ನು ಪ್ರಕಟಿಸಲಾಗಿದೆ. ಇವುಗಳಲ್ಲಿ, ಮಹತ್ವ ವಾದ ಪಿಪಿಎಂಜಿ ಪದಕಗಳು, ಜಮ್ಮು ಕಾಶ್ಮೀರ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅಮರ್ ದೀಪ್ ಹಾಗೂ ಸಿಆರ್‌ಪಿಎಫ್ ಮುಖ್ಯ ಪೇದೆ ಕಾಳೆ ಸುನಿಲ್ ದತ್ತಾತ್ರೇಯ (ಮರಣೋತ್ತರ) ಅವರಿಗೆ ಸಂದಿದೆ.
ಸಿಐಎಸ್‌ಎಫ್ನ ನಾಲ್ವರಿಗೆ ಗೌರವ: ಕಳೆದ ವರ್ಷ ಜಮ್ಮುವಿನ ಟ್ರಕ್‌ನಲ್ಲಿ ಸ್ಫೋಟಕಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಮೂವರು ಉಗ್ರರನ್ನು ಹೊಡೆದುರುಳಿಸಿ, ಸಂಭವಿಸ ಲಿದ್ದ ಮಹಾ ದುರಂತ ತಪ್ಪಿಸಿದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ನಾಲ್ವರು ಯೋಧರಿಗೆ ಪೊಲೀಸ್ ಶೌರ್ಯ ಪದಕ ಘೋಷಿಸ ಲಾಗಿದೆ. ಸಿಐಎಸ್‌ಎಫ್ ಪೇದೆಗಳಾದ ರಾಹುಲ್ ಕುಮಾರ್, ಮುತ್ತಮಾಲಾ ರವಿ, ಮುತ್ತಮ್ ಬಿಕ್ರಮಿjತ್ ಸಿಂಗ್, ಅನಿಲ್ ಲಾಕ್ರಾ ಅವರಿಗೆ ಈ ಗೌರವ ಸಂದಿದೆ.
ಕೋಬ್ರಾ ಪಡೆಗೆ ಮೂರು :
ಸೇನೆಯ 6 ಯೋಧರಿಗೆ ಶೌರ್ಯ ಪದಕಗಳ ಶ್ರೇಣಿಯಲ್ಲಿ ಮೂರನೇ ಮಹತ್ವದ ಪದಕವೆನಿ ಸಿರುವ ಶೌರ್ಯಚಕ್ರ ಘೋಷಣೆಯಾಗಿದೆ. ಮೇಜರ್ ಅರುಣ್ ಕುಮಾರ್ ಪಾಂಡೆ, ಮೇಜರ್ ರವಿಕುಮಾರ್ ಚೌಧರಿ, ಕ್ಯಾಪ್ಟನ್ ವಿಕಾಸ್ ಖಾತ್ರಿ, ಕ್ಯಾಪ್ಟನ್ ಅಶುತೋಷ್ ಕುಮಾರ್ (ಮರ ಣೋತ್ತರ), ರೈಫಲ್ ಮ್ಯಾನ್ ಮುಕೇಶ್ ಕುಮಾರ್, ಸಿಪಾಯಿ ನೀರಜ್ ಅಹ್ಲಾವತ್ ಈ ಗೌರವ ಪಡೆದಿದ್ದಾರೆ. ಸಿಆರ್‌ಪಿಎಫ್ನಲ್ಲಿ ಸೇವೆ ಸಲ್ಲಿಸುವ ನಕ್ಸಲ್ ನಿಗ್ರಹ ಪಡೆ ಕೋಬ್ರಾದ ಮೂವರು ಸಿಬಂದಿಗೂ ಶೌರ್ಯ ಚಕ್ರ ಘೋಷಣೆ ಯಾಗಿದೆ. ಡೆಪ್ಯುಟಿ ಕಮಾಂಡಂಟ್ ಚಿತೇಶ್ ಕುಮಾರ್, ಸಬ್ ಇನ್ಸ್‌ಪೆಕ್ಟರ್ ಮಂಜಿಂದರ್ ಸಿಂಗ್ ಹಾಗೂ ಪೇದೆ ಸುನಿಲ್ ಚೌಧರಿಗೆ ಈ ಗೌರವ ಸಿಕ್ಕಿದೆ.