ಶಿರ್ವ : ಹಿರಿಯ ಸಹಕಾರಿ ಧುರೀಣ, ಕುತ್ಯಾರು ಗ್ರಾ.ಪಂ.ನ ಮಾಜಿ ಚೆಯರ್‌ಮ್ಯಾನ್ ಕುತ್ಯಾರು ಕನ್ಯಾನ ನಿವಾಸಿ ಶತಾಯುಷಿ ಕೆ. ಸುಂದರ ಶೆಟ್ಟಿ (102) ಅವರು ಆ.28 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಅವರು 1980 ರಿಂದ 1996ರ ವರೆಗೆ 2 ಅವಧಿಯಲ್ಲಿ 10ವರ್ಷಗಳ ಕಾಲ ಶಿರ್ವ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದ ರು.ಶಿಕ್ಷಣ ಪ್ರೇಮಿಯಾಗಿದ್ದ ಅವರು ಶಿರ್ವ ವಿದ್ಯಾವರ್ಧಕ ಸಂಘದ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.
ಇದನ್ನೂ ಓದಿ : 2022ರ ಮಾರ್ಚ್ ತನಕ 2000 ರೂ.ನೋಟುಗಳ ಪ್ರಿಂಟಿಂಗ್ ಇಲ್ಲ! RBI ಹಾಗೂ ಕೇಂದ್ರ ಹೇಳಿದ್ದೇನು.?
ಉಡುಪಿ ತಾಲೂಕು ಬೋರ್ಡ್ ಸದಸ್ಯರಾಗಿದ್ದ ಅವರು ಕರ್ನಾಟಕ ಸರಕಾರದ ಮಾಜಿ ಮುಖ್ಯ ಸಚೇತಕ ದಿ|ಕಾಪು ಬಿ.ಭಾಸ್ಕರ ಶೆಟ್ಟಿ ಮತ್ತು ಮಾಜಿ ಸಚಿವ ಮೂಡಬಿದಿರೆ ಕೆ. ಅಮರನಾಥ ಶೆಟ್ಟಿ ಯವರ ಒಡನಾಡಿಯಾಗಿದ್ದರು. ಕರ್ನಾಟಕ ಸರಕಾರದ ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಅವರ ರಾಜಕೀಯ ಮಾರ್ಗದರ್ಶಕರಾಗಿದ್ದರು. ಕೆಲವು ವರ್ಷ ವಿಜಯಾ ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದ ಅವರು ಕುತ್ಯಾರು ಯುವಕ ಮಂಡಲದ ಕಟ್ಟಡ ನಿರ್ಮಾಣದಲ್ಲಿ ಸಹಕರಿಸಿದ್ದರು.
ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ, ಕರ್ನಾಟಕ ಸರಕಾರದ ಇಂಧನ ಹಾಗೂ ಕನ್ನಡ ಮತ್ತು ಸಂಸðತಿ ಇಲಾಖೆಯ ಸಚಿವ ವಿ. ಸುನೀಲ್ ಕುಮಾರ್,ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಚಿವ ಕೋಟಾ ಶ್ರೀನಿವಾಸ ಪೂಜಾರಿ,ಕಾಪು ಶಾಸಕ ಲಾಲಾಜಿ ಆರ್. ಮೆಂಡನ್,ಕುತ್ಯಾರು ಗ್ರಾ.ಪಂ.ಮಾಜಿ ಅಧ್ಯಕ್ಷ/ಉಡುಪಿ ಜಿಲ್ಲಾ ಬಿಜೆಪಿ ಪ್ರ.ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ : ಟೆಸ್ಟ್ ಪಂದ್ಯದಲ್ಲಿ ಹೈಡ್ರಾಮಾ: ಮತ್ತೆ ಭಾರತ ತಂಡದ ಪರ ಆಡಲು ಮೈದಾನಕ್ಕೆ ನುಗ್ಗಿದ ಜಾರ್ವೋ!